Breaking News

ವಿಪತ್ತು ನಿರ್ವಹಣೆ: ಸ್ವಯಂ ಸೇವಕರಿಗೆ ತರಬೇತಿ

Spread the love

ಅಥಣಿ: ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ನ ಇಲ್ಲಿನ ಶಾಖೆಯಿಂದ ವಿಪತ್ತು ನಿರ್ವಹಣೆ ಕುರಿತು ತಾಲ್ಲೂಕಿನ ಮುರುಗುಂಡಿ ಮುರಸಿದ್ದೇಶ್ವರ ದೇವಾಲಯದಲ್ಲಿ ಸ್ವಯಂ ಸೇವಕರಿಗೆ ತರಬೇತಿ ಶಿಬಿರ ನಡೆಸಲಾಯಿತು.

 

ತಹಶೀಲ್ದಾರ್ ದುಂಡಪ್ಪ ಕೋಮಾರ ಉದ್ಘಾಟಿಸಿ ಮಾತನಾಡಿ, ‘ಸರ್ಕಾರದೊಂದಿಗೆ ಸಂಘ ಸಂಸ್ಥೆಗಳು ಸ್ವಯಂಸೇವಕರ ಮೂಲಕ ಕೈ ಜೋಡಿಸಿದರೆ ವಿಪತ್ತನ್ನು ಸುಲಭವಾಗಿ ನಿರ್ವಹಿಸಬಹುದು’ ಎಂದರು.

‘ತಾಲ್ಲೂಕಿನಲ್ಲಿ ಪ್ರತಿ ವರ್ಷ ನೆರೆ ಹಾವಳಿ ಕಾಡುತ್ತಿರುತ್ತದೆ. ಆಗ ಎನ್‌ಡಿಆರ್‌ಎಫ್‌, ಪೊಲೀಸರು, ಸೈನ್ಯದವರು ಬಂದು ತಲುಪವರಿಗೆ ಸಾಕಷ್ಟು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಮಹಾಪೂರ ಹೆಚ್ಚುವ ಮುನ್ನವೇ ಸ್ವಯಂಸೇವಕರು ಜನರಲ್ಲಿ ಅರಿವು ಮೂಡಿಸಿ ಅವರನ್ನು ಸ್ಥಳಾಂತರಿಸಿದರೆ ಸಮಸ್ಯೆಯನ್ನು ಸರಳವಾಗಿ ನಿರ್ವಹಿಸಬಹುದು’ ಎಂದು ಹೇಳಿದರು.

ಪಿಎಸ್‌ಐ ಕುಮಾರ ಹಾಡಗರ, ಸಂಜಯ ನಾಡಗೌಡರ, ಟಿ. ಕೃಷ್ಣಪ್ಪ, ರಾಜು ನಾಯಕ, ಬಸವಣೆಪ್ಪ ತುಪ್ಪದ, ಭೀಮಪ್ಪ ಸಡ್ಡಿ, ಶೋಭಾ ಪತ್ತಾರ, ಮಂಗಲಾ ಪ್ರಜಾರಿ, ಪಿಡಿಒ ಅಚ್ಯುತ ಕುಲಕರ್ಣಿ, ವಿವೇಕ್, ಹೋಳೆಪ್ಪ ಪ್ರಜಾರಿ, ದುಗ್ಗೇಗೌಡ ಇದ್ದಾರೆ.


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ