ಕತ್ತಿ ಕುಟುಂಬದಕ್ಕೆ ಸಾಂತ್ವನ ಹೇಳಲು ತೆರಳುತಿದ್ದವರ ಕಾರು ಅಪಫಾತ.
ಇತ್ತಿಚಿಗೆ ಮೃತರಾದ ಸಚಿವ ಉಮೇಶ ಕತ್ತಿ ಅವರ ಕುಟುಂಬಕ್ಕೆ ಸಾಂತ್ವನ ತಿಳಿಸಲು ಹೊರಟಿದ್ದ ಉಪ್ಪಾರ ಸಮಾಜದ ಪ್ರಭಾವಿ ಹಿರಿಯ ಮುಖಂಡ, ಜಿಲ್ಲಾ ಪರಿಷತ್ ಮಾಜಿ ಸದಸ್ಯ, ಕತ್ತಿ ಕುಟುಂಬದ ಆಪ್ತರಾಗಿದ್ದ ದಿವಂಗತ ದುಂಡಪ್ಪ ಚೌಕಶಿ ಅವರ ಸಹೋದರ ಹಾಗೂ ಬೆಳಗಾವಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯೆ ಪತಿ ಕಲ್ಲಪ್ಪ ಚೌಕಶಿ, ಗೋಕಾಕ ತಾಲೂಕು ಪಂಚಾಯತಿ ಮಾಜಿ ಸದಸ್ಯರಿಬ್ಬರಾದ ನಿಂಗಪ್ಪ ಮಾಳ್ಯಾಗೋಳ, ಸುನಿಲ ಜಮಖಂಡಿ ತೆರಳುತಿದ್ದ ಮಹಿಂದ್ರಾ ಎಕ್ಸಯುವಿ 300 ಕಾರಿಗೆ ಬಾಗೇವಾಡಿ ಸಮಿಪದ ಕೊರವಂಜಿ ನಗರದ ಬಳಿ ಬಿಳಿ ಬಣ್ಣದ ಮಹಿಂದ್ರಾ ಸಾರ್ಕಪಿಯೊ ಕೆಎ20 ಎನ್ 5172 ಚಾಲಕ ಡಿಕ್ಕಿ ಹೊಡೆಸಿ ವಾಹನ ಸಹಿತ ಪರಾರಿಯಾಗಿದ್ದಾನೆ. ಅಪಘಾತ ಸಂದರ್ಭದಲ್ಲಿ ಸ್ಥಳದಲ್ಲಿ ದೊರೆತ ನಂಬರ್ ಪ್ಲೇಟ್ ನಿಂದ ವಾಹನದ ಸಂಖ್ಯೆ ಪತ್ತೆಯಾಗಿದೆ.
ಪಕ್ಕದಲ್ಲಿಯೆ ನಿರಾವರಿ ಇಲಾಖೆಯ 30 ಅಡಿ ಆಳದ ಕಾಲುವೆಯಿದ್ದು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು ಗಾಯಾಳುಗಳನ್ನು ಸಮಿಪದ ಘಟಪ್ರಭಾ ಕೆಎಚ್ಐ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹುಕ್ಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.