ಬೆಂಗಳೂರು: ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಎರಡೂ ಕಾರಿನ ಚಾಲಕರು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಹೊಸೂರು ಬಳಿ ನಡೆದಿದೆ.
ಆನೇಕಲ್ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಹೊಸೂರು ಸಮೀಪದ ಸೂಳಗಿರಿ ಎಚ್.ಪಿ ಪೆಟ್ರೋಲ್ ಬಂಕ್ ಎದುರು ಅಪಘಾತ ಸಂಭವಿಸಿದ್ದು, ಎರಡು ಕಾರಿನ ಚಾಲಕರಾದ ಬೆಂಗಳೂರಿನ ವೈಯಾಲಿಕಾವಲ್ ನಿವಾಸಿ ಸುಮಂತ್(21) ಹಾಗೂ ಕೋರಮಂಗಲ ನಿವಾಸಿ ವಿನ್ಸೆಂಟ್ ಗೋಪಿ (34) ಸ್ಥಳದಲ್ಲೇ ಸಾವನಪ್ಪಿದ್ದಾರೆ.
Laxmi News 24×7