Breaking News

ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಮೋಟಾರುಗಳ ಪರಿಶೀಲನೆ

Spread the love

ಅಥಣಿ ಮತಕ್ಷೇತ್ರದ ಪೂರ್ವ ಭಾಗದ ರೈತರ ಬಹುಕಾಲದ ಕನಸಾದ ‘ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ’ಯ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದು, ಯೋಜನೆಗೆ ಬೇಕಾದ ಬೃಹತ್ ಸಾಮರ್ಥ್ಯದ ಮೋಟಾರ್‌ಗಳು ಸಿದ್ಧಗೊಂಡಿವೆ. ಹೊಸೂರಿನ ಹೆಸರಾಂತ WEG ಮೋಟಾರ್ ತಯಾರಿಕಾ ಕಂಪನಿಯಲ್ಲಿ ಸಿದ್ಧವಾಗಿರುವ ಈ ಮೋಟಾರ್‌ಗಳನ್ನು ಇಂದು ನಾನು ಮತ್ತು ಇಂಜಿನಿಯರ್‌ಗಳ ತಂಡದೊಂದಿಗೆ ಭೇಟಿ ನೀಡಿ ಅಂತಿಮ ಹಂತದ ಪರಿಶೀಲನೆ ನಡೆಸಿದೆವು,

ಈ ಏತ ನೀರಾವರಿ ಯೋಜನೆಯಲ್ಲಿ ನೀರನ್ನು ಮೇಲೆತ್ತಲು ಅತ್ಯಾಧುನಿಕ ತಂತ್ರಜ್ಞಾನದ ಎರಡು ಬೃಹತ್ ಮೋಟಾರ್‌ಗಳನ್ನು ಬಳಸಲಾಗುತ್ತಿದೆ.
ಪ್ರತಿ ಮೋಟಾರ್ 19,000 HP ಶಕ್ತಿ ಹೊಂದಿದ್ದು, 13.5 ಮೆಗಾ ವ್ಯಾಟ್ (MW) ಸಾಮರ್ಥ್ಯವನ್ನು ಹೊಂದಿದೆ. ಇವು ಪ್ರತಿ ನಿಮಿಷಕ್ಕೆ 750 RPM ವೇಗದಲ್ಲಿ ತಿರುಗುವ ಸಾಮರ್ಥ್ಯ ಹೊಂದಿವೆ.ಸೈಲೆಮ್ ವಾಟರ್ ಸೊಲ್ಯೂಷನ್ಸ್ ಹಾಗೂ WEG ಕಂಪನಿಗಳ ಸಹಯೋಗದಲ್ಲಿ ಈ ಮೋಟಾರ್‌ಗಳನ್ನು ಸಿದ್ಧಪಡಿಸಲಾಗಿದೆ.

“ಅಮ್ಮಾಜೇಶ್ವರಿ ಯೋಜನೆಯು ಈ ಭಾಗದ ಕೃಷಿ ಭೂಮಿಗೆ ಜೀವನಾಡಿಯಾಗಲಿದೆ. ಹೊಸೂರಿನಲ್ಲಿ ಸಿದ್ಧವಾಗಿರುವ ಈ ಶಕ್ತಿಶಾಲಿ ಮೋಟಾರ್‌ಗಳು ಇನ್ನೊಂದು 10 ದಿನಗಳಲ್ಲಿ ಅಥಣಿ ತಾಲೂಕಿನ ಜುಂಜರವಾಡ ಗ್ರಾಮದ ಪಂಪ್‌ಹೌಸ್‌ಗೆ ತಲುಪಲಿವೆ. ಮೋಟಾರ್‌ಗಳು ಬಂದ ತಕ್ಷಣ ಅಳವಡಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಶೀಘ್ರದಲ್ಲೇ ಯೋಜನೆಯನ್ನು ಲೋಕಾರ್ಪಣೆ ಮಾಡಿ ರೈತರ ಭೂಮಿಗೆ ನೀರು ಹರಿಸಲಾಗುವುದು,” ಎಂದು ವಿಶ್ವಾಸ ವ್ಯಕ್ತಪಡಿಸಿದೆ.

ಈ ಸಂದರ್ಭದಲ್ಲಿ KNNL ಕಾರ್ಯನಿರ್ವಾಹಕರು, LIS ಸಮಾಲೋಚಕರು, ಮೆ|| ಶಂಕರ್ ನಾರಾಯಣ ಕನ್ಸ್ಟ್ರಕ್ಷನ್ಸ್ ಪ್ರೈವೇಟ್ ಲಿಮಿಟೆಡ್ (SNC) ಮತ್ತು ಮೆ|| ಸೈಲೆಮ್ ವಾಟರ್ ಸೊಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ತಾಂತ್ರಿಕ ಅಧಿಕಾರಿಗಳು ಉಪಸ್ಥಿತರಿದ್ದರು. ಅಲ್ಲದೆ, ನೀರಾವರಿ ಇಲಾಖೆಯ ಅಧಿಕಾರಿ ಪ್ರವೀಣ ಹುಣಸಿಕಟ್ಟಿ, ಹಿರಿಯ ಇಂಜಿನಿಯರ್‌ಗಳು ಹಾಗೂ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಚಿಕ್ಕೋಡಿ:ಭೀಕರ ಅಪಘಾತ ಯುವಕ ಸಾವು

Spread the loveಚಿಕ್ಕೋಡಿ:ಬೇಡಕಿಹಾಳ-ಬೋರಗಾಂವ ರಸ್ತೆಯಲ್ಲಿರುವ ಶಿರದವಾಡ ಗ್ರಾಮದ ವ್ಯಾಪ್ತಿಯಲ್ಲಿ ಬೈಕ್ ಸವಾರನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ನಿಖಿಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ