Breaking News

ವೇಗವಾಗಿ ಬಂದು ಕಾರು ಡಿಕ್ಕಿ – ರಸ್ತೆ ದಾಟುತ್ತಿದ್ದ 9 ವರ್ಷದ ಬಾಲಕ ದುರ್ಮರಣ

Spread the love

ಬೀದರ್: ರಸ್ತೆ ದಾಟುವಾಗ ವೇಗವಾಗಿ ಬಂದ ಕಾರೊಂದು ಡಿಕ್ಕಿಯಾದ ಪರಿಣಾಮ 9 ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೀದರ್ ನಗರದ ಮಾಂಗರ್ ವಾಡಿ ಗಲ್ಲಿ ಬಳಿ ನಡೆದಿದೆ.

9 ವರ್ಷದ ರುದ್ರ ಮೃತ ಬಾಲಕ. ಮಾರುತಿ ಸೂಜುಕಿ ಕಾರು ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಮೃತ ಬಾಲಕ ಅಂಗಡಿಯಿಂದ ಮನೆಗೆ ವಾಪಸ್ಸಾಗುತ್ತಿದ್ದ. ಈ ವೇಳೆ ಕಾರೊಂದು ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರು ಚಾಲಕ ಪರಾರಿಯಾಗಿದ್ದಾನೆ.

ಚಾಚಾ ಹೋಟೆಲ್‌ನಲ್ಲಿ ಕೆಲಸ ಮಾಡುವ ಯುವಕನಿಂದ ಈ ಕೃತ್ಯ ನಡೆದಿದೆ. ಅಪಘಾತದ ಬಳಿಕ ಚಾಚಾ ಹೋಟೆಲ್ ಬಳಿ ಬಾಲಕನ ಕಡೆಯವರು ಮತ್ತು ಹೋಟೆಲ್ ಕಡೆಯವರು ಜಮಾವಣೆಯಾಗಿ ಕೆಲವೊತ್ತು ಬೀಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಾಲಕನ ಮೃತದೇಹವನ್ನು ಬ್ರೀಮ್ಸ್ ಶವಾಗಾರಕ್ಕೆ ರವಾನಿಸಲಾಗಿದೆ. ಸ್ಥಳಕ್ಕೆ ಪಿಎಸ್‌ಐಗಳು, ಡಿಆರ್ ವ್ಯಾನ್ ಸೇರಿದಂತೆ ಪೊಲೀಸರು ಬಿಗಿ ಭದ್ರತೆ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಯಾಗದಂತೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸುತ್ತಿದ್ದಾರೆ. ಮಗುವನ್ನು ಕಳೆದುಕೊಂಡು ಕುಟುಂಬಸ್ಥರು ಕಣ್ಣೀರು ಹಾಕಿ, ನ್ಯಾಯ ಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.


Spread the love

About Laxminews 24x7

Check Also

ನೇಣು ಬಿಗಿದು ಎಂಬಿಬಿಎಸ್‌ ವಿದ್ಯಾರ್ಥಿ ಆತ್ಮಹತ್ಯೆ

Spread the loveಬೀದರ್: ಪ್ಯಾನ್‌ಗೆ ನೇಣು ಬಿಗಿದುಕೊಂಡು ಮೆಡಿಕಲ್ ವಿದ್ಯಾರ್ಥಿ  ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ್ ನಗರದ ಬ್ರಿಮ್ಸ್  ಕಾಲೇಜು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ