Breaking News

ವೊಟರ್ ಐಡಿ ಇಲ್ಲದಿದ್ದರೂ ಈ ದಾಖಲೆಗಳಿದ್ದರೆ ಮತದಾನ ಮಾಡಬಹುದು

Spread the love

ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಮತದಾರರು ಉತ್ಸಾಹದಿಂದಲೆ ಮತಗಟ್ಟೆಗಳಿಗೆ ತೆರಳಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ವೋಟರ್ ಐಡಿ ಇಲ್ಲದಿದ್ದರೂ ಮತದಾರರು ಈ ದಾಖಲೆಗಳು ಇದ್ದರೆ ಮತದಾನ ಮಾಡಬಹುದು.

ಪಾಸ್ ಪೋರ್ಟ್, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ಎಂನರೇಗಾ ಜಾಬ್ ಕಾರ್ಡ್, ಕಚೇರಿ, ಕಂಪನಿಗಳು ತಮ್ಮ ಸಿಬ್ಬಂದಿಗಳಿಗೆ ನೀಡಿರುವ ಫೋಟೋ ಗುರುತಿನ ಚೀಟಿ, ಬ್ಯಾಂಕ್, ಪೋಸ್ಟ್ ಆಫೀಸ್ ಫೋಟೋ ಇರುವ ಪಾಸ್ ಬುಕ್, ಎನ್ ಪಿ ಆರ್ ಐಡಿ ಅರ್ಹಿ ಇರುವ ಸ್ಮಾರ್ಟ್ ಕಾರ್ಡ್, ಕಾರ್ಮಿಕರ ಸಚಿವಾಲಯದ ಯೋಜನೆಯಡಿ ನೀಡಿರುವ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಫೋಟೋ ವುಳ್ಳ ಪಿಂಚಣಿ ದಾಖಲೆ, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರಿಗೆ ನೀಡುವ ಅಧಿಕೃತ ಗುರುತಿನ ಚೀಟಿ ಇವುಗಳಲ್ಲಿ ಯಾವುದಾದರೂ ಬಳಸಿ ಮತದಾನ ಮಾಡಬಹುದು.


Spread the love

About Laxminews 24x7

Check Also

ಗಣೇಶ ವಿಸರ್ಜನೆ ಮತ್ತು ಈದ್ ಮಿಲಾದ್’ನಲ್ಲಿ ಶಾಂತಿ ಕದಡಿದ್ರೇ ಹುಷಾರ್…

Spread the love ಗಣೇಶ ವಿಸರ್ಜನೆ ಮತ್ತು ಈದ್ ಮಿಲಾದ್’ನಲ್ಲಿ ಶಾಂತಿ ಕದಡಿದ್ರೇ ಹುಷಾರ್… ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ