Breaking News

ನಾಗರಬೆಟ್ಟದ ವಿದ್ಯಾರ್ಥಿ ರಾಜ್ಯಕ್ಕೆ ಪ್ರಥಮ

Spread the love

ಮುದ್ದೇಬಿಹಾಳ: ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ನಾಗರಬೆಟ್ಟದ ಆಕ್ಸ್‌ಫರ್ಡ್‌ ಪಾಟೀಲ್ಸ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ವಿದ್ಯಾರ್ಥಿ ಭೀಮನಗೌಡ ಹಣಮಂತಗೌಡ ಪಾಟೀಲ 625ಕ್ಕೆ 625 ಅಂಕ ಪಡೆದು ರಾಜ್ಯದ ಟಾಪರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಗಿಟ್ಟಿಸಿದ್ದಾನೆ.

 

ಮೂಲತಃ ಬಾಗಲಕೋಟ ಜಿಲ್ಲೆಯ ಬುದ್ನಿ ಗ್ರಾಮದ ರೈತ ಕುಟುಂಬದವನಾದ ಈತ 9 ಮತ್ತು 10 ನೇ ತರಗತಿಯನ್ನು ಆಕ್ಸಫರ್ಡ್ ಶಾಲೆಯಲ್ಲಿ ಕಲಿತಿದ್ದಾನೆ. 6-8 ತರಗತಿಯನ್ನು ಮುದ್ದೇನಹಳ್ಳಿಯ ಸಾಯಿ ಶಾಲೆಯಲ್ಲಿ, 1-5 ತರಗತಿಯನ್ನು ಬಾಗಲಕೋಟ ಜಿಲ್ಲೆ ಬಂಟನೂರಿನಲ್ಲಿ ಕಲಿತಿದ್ದಾನೆ. ಪಿಯುಸಿ ವಿಜ್ಞಾನ ಕಲಿತು ಜೆಇಇ ಪಾಸಾಗಿ ಐಐಟಿಗೆ ಸೇರುವುದು ಅವನ ಜೀವನದ ಗುರಿಯಾಗಿದೆ. ಈತನಿಗೆ ಒಬ್ಬ ಸಹೋದರ ಇದ್ದು 9 ತರಗತಿಯಲ್ಲಿದ್ದಾನೆ. ಈ ಶಾಲೆ ಸತತ ಮೂರು ಬಾರಿ ಹ್ಯಾಟ್ರಿಕ್ ಸಾಧನೆ ಮಾಡಿದಂತಾಗಿದೆ.


Spread the love

About Laxminews 24x7

Check Also

ಗಣೇಶ ವಿಸರ್ಜನೆ ಮತ್ತು ಈದ್ ಮಿಲಾದ್’ನಲ್ಲಿ ಶಾಂತಿ ಕದಡಿದ್ರೇ ಹುಷಾರ್…

Spread the love ಗಣೇಶ ವಿಸರ್ಜನೆ ಮತ್ತು ಈದ್ ಮಿಲಾದ್’ನಲ್ಲಿ ಶಾಂತಿ ಕದಡಿದ್ರೇ ಹುಷಾರ್… ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ