Breaking News

ಮುಗಳಖೋಡ: ಕಾಂಗ್ರೆಸ್‌ ಗೆಲುವಿಗಾಗಿ 300 ಕಿ.ಮೀ ಪಾದಯಾತ್ರೆ

Spread the love

ಮುಗಳಖೋಡ: ರಾಜ್ಯದಲ್ಲಿ ಬಿಜೆಪಿ ಪಕ್ಷದ ದುರಾಡಳಿತ ಕೊನೆಗೊಳ್ಳಲಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿ ಎಂದು ಶಾಹಾಪೂರ ವಿಧಾನ ಸಭಾ ಕ್ಷೇತ್ರದ ಮುಡಬೂಳ ಗ್ರಾಮದ ಯುವಕರು ಮುಡಬೂಳ ಗ್ರಾಮದಿಂದ ಮುಗಳಖೋಡದ ಯಲ್ಲಾಲಿಂಗ ಮಹಾರಾಜರ ಮಠದವರೆಗೆ 300 ಕಿ.ಮೀ ಪಾದಯಾತ್ರೆ ಕೈಗೊಂಡಿದ್ದಾರೆ.

 

ಶಾಹಾಪೂರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶರಣಬಸಪ್ಪಗೌಡ ದಶನಾಪೂರ, ಬಬಲೇಶ್ವರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಬಿ. ಪಾಟೀಲ ಹಾಗೂ ಕುಡಚಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಹೇಂದ್ರ ತಮ್ಮಣ್ಣವರ ಅಂತರದಿಂದ ಜಯಗಳಿಸಲಿ, ರಾಜ್ಯದ 224 ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಯಗಳಿಸಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಲಿ ಎಂದು ಪ್ರಾರ್ಥಿಸಿದರು.

ಮುಗಳಖೋಡ ಪಟ್ಟಣದ ಕಾಂಗ್ರೆಸ್ ಮುಖಂಡರಾದ ರಮೇಶ ಯಡವಣ್ಣವರ, ಮಹಾವೀರ ಕುರಾಡೆ, ಮುಪ್ಪಯ್ಯ ಹಿರೇಮಠ, ರಾಮಚಂದ್ರ ಕುರಾಡೆ, ಮಹಾವೀರ ದೇವನ್ನವರ, ಕಪೀಲ ಕರೀಭೀಮಗೋಳ, ಪರಶುರಾಮ ಯರಡತ್ತಿ, ಆನಂದ ಯರಡತ್ತಿ, ಭಿಮಪ್ಪ ಕುರಾಡೆ ಇದ್ದರು.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ