ಬೆಂಗಳೂರು : ಬೆಂಗಳೂರಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾದ ಅಶ್ವತ್ ಕುಮಾರ್ ತಮ್ಮ ಕ್ಷೇತ್ರದ ಮತದಾರರಿಗೆ ಪ್ರಚಾರದ ಕರಪತ್ರ ಹಂಚುವ ಬದಲು ಬಾಂಡ್ ಪೇಪರ್ ಹಂಚುತ್ತಿದ್ದಾರೆ.
ಈ ಮೂಲಕ ತಮ್ಮನ್ನ ಆಯ್ಕೆ ಮಾಡಿದ್ರೆ ನಿಮಗೆ ನಾನೇನು ಮಾಡಿಕೊಡ್ತೇನೆ ಅನ್ನೋದನ್ನ ಬಾಂಡ್ ಪೇಪರ್‌ನಲ್ಲಿ ಮುದ್ರಿಸಿ ಅದ್ರಲ್ಲಿ ತಮ್ಮ ಸಹಿ ಹಾಕಿ ಎಲ್ಲರಿಗೂ ವಿತರಿಸುತ್ತಿದ್ದಾರೆ.
ಅಲ್ಲದೇ ಇದಕ್ಕೆ ತಪ್ಪಿ ನಡೆದ್ರೆ ಮತದಾರರು ಪಕ್ಷದ ವರಿಷ್ಠರಿಗೆ ದೂರು ನೀಡಬಹುದು. ಶಿಸ್ತುಕ್ರಮಕ್ಕೆ ಬದ್ಧನಾಗಿದ್ದು, ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಬಾಂಡ್ ಪೇಪರ್‌ನಲ್ಲಿ ಬರೆದಿದ್ದಾರೆ.ಇತ್ತ ತಮ್ಮ ಅಭ್ಯರ್ಥಿ ತೆಗೆದುಕೊಂಡಿರುವ ನಡೆಗೆ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಉಪೇಂದ್ರ ಅವರು ಮೆಚ್ಚುಗೆ ವ್ಯಕ್ತಪಡಿಸಿ ಸೋಶಿಯಲ್ ಮೀಡಿಯಾದಲ್ಲಿ ಬಾಂಡ್ ಪೇಪರ್ ಶೇರ್ ಮಾಡಿದ್ದಾರೆ.