Breaking News

ಮಾಧ್ಯಮ ಕಣ್ಗಾವಲು ಘಟಕಕ್ಕೆ ಚುನಾವಣಾ ವೀಕ್ಷಕರ ಭೇಟಿ ಜಾಹೀರಾತು, ಪೇಡ್ ನ್ಯೂಸ್ ಮೇಲೆ ನಿಗಾ ವಹಿಸಲು ಸೂಚನೆ

Spread the love

ಬೆಳಗಾವಿ : ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಆರಂಭಿಸಲಾಗಿರುವ ಮಾಧ್ಯಮ ಕಣ್ಗಾವಲು ಘಟಕಕ್ಕೆ ಗೋಕಾಕ ಹಾಗೂ ಯಮಕನಮರಡಿ ವಿಧಾನಸಭಾ ಮತಕ್ಷೇತ್ರಗಳ ಸಾಮಾನ್ಯ ವೀಕ್ಷಕರಾದ ಹಿರಿಯ ಐ.ಎ.ಎಸ್. ಅಧಿಕಾರಿ ಎಸ್.ಮಾಲಾರವಿಙ್ಞ ಅವರು ಭೇಟಿ ಪರಿಶೀಲಿಸಿದರು.

ಎಲೆಕ್ಟ್ರಾನಿಕ್ ಹಾಗೂ ಮುದ್ರಣ‌ ಮಾಧ್ಯಮ ಗಳ ಪ್ರಸಾರವಾಗುವ ಸುದ್ದಿಗಳ ಮೇಲೆ‌ ನಿಗಾ ವಹಿಸಬೇಕು. ಪೇಡ್ ನ್ಯೂಸ್ ಅಥವಾ ಜಾಹೀರಾತು ಕಂಡುಬಂದರೆ ಅದಕ್ಕೆ ಸಂಬಂಧಿಸಿದ ವೆಚ್ಚವನ್ನು ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಸೇರಿಸಬೇಕು ಎಂದು ನಿರ್ದೇಶನ ನೀಡಿದರು.

ಇದಲ್ಲದೇ ನೀತಿಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ವರದಿಗಳು ಪ್ರಸಾರವಾದರೆ ಅವುಗಳನ್ನು ಮಾದರಿ ನೀತಿಸಂಹಿತೆ ನೋಡಲ್ ಅಧಿಕಾರಿಗಳು ಹಾಗೂ ಸಂಬಂಧಿಸಿದ ಮತಕ್ಷೇತ್ರಗಳ ಚುನಾವಣಾಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದರು.

ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಘಟಕದ ನೋಡಲ್ ಅಧಿಕಾರಿಯಾಗಿರುವ ವಾರ್ತಾ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ಅವರು, ಮಾಧ್ಯಮ ಕಣ್ಗಾವಲು ಘಟಕದ ಕಾರ್ಯನಿರ್ವಹಣೆ ಕುರಿತು ಮಾಹಿತಿಯನ್ನು ನೀಡಿದರು.

ಜಿಲ್ಲೆಯ ಎಲ್ಲಾ ಹದಿನೆಂಟು ಮತಕ್ಷೇತ್ರಗಳ ಅಭ್ಯರ್ಥಿಗಳ ಚುನಾವಣಾ ಜಾಹೀರಾತು ಹಾಗೂ ನೀತಿಸಂಹಿತೆ ಉಲ್ಲಂಘನೆ ಕುರಿತು ನಿಗಾ ವಹಿಸಲಾಗುತ್ತಿದೆ ಎಂದು ವಿವರಿಸಿದರು.

ಗೋಕಾಕ ಮತಕ್ಷೇತ್ರದ ಚುನಾವಣಾಧಿಕಾರಿ ಗೀತಾ ಕೌಲಗಿ ಮತ್ತು ಯಮಕನಮರಡಿ ಮತಕ್ಷೇತ್ರದ ಚುನಾವಣಾಧಿಕಾರಿ ಬಲರಾಮ್ ಚವಾಣ ಹಾಗೂ ಮಾಧ್ಯಮ ಕಣ್ಗಾವಲು ಘಟಕದ ಅಧಿಕಾರಿ ಶ್ರೀದೇವಿ ನಾಗನೂರ, ಸುನೀಲ್ ಪಾಟೀಲ, ಹೊಳೆಪ್ಪ ನಾಯಕ, ಆರ್.ಎಸ್. ವಾಲಿಶೆಟ್ಟಿ, ಲಕ್ಷ್ಮಣ ತಳವಾರ, ಮಹಾಂತೇಶ್ ಪತ್ತಾರ, ಅರುಣ ನೇಸರಗಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Spread the love

About Laxminews 24x7

Check Also

ಭೋವಿ ನಿಗಮದಲ್ಲಿ ಭ್ರಷ್ಟಾಚಾರ ಆರೋಪ: ಅಧ್ಯಕ್ಷ ರವಿಕುಮಾರ್‌ ಕೊನೆಗೂ ರಾಜೀನಾಮೆ

Spread the loveಬೆಂಗಳೂರು, (ಸೆಪ್ಟೆಂಬರ್ 05): ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ (Bhovi Development Corporation) ಅಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ