Breaking News

ಐಪಿಎಲ್​ನ ದೆಹಲಿ ಕ್ಯಾಪಿಟಲ್ ತಂಡದ ಕಳುವಾಗಿದ್ದ ಕ್ರಿಕೆಟ್ ಕಿಟ್ ಅಲ್ಲದೇ ಆರೋಪಿಗಳನ್ನು ಬೆಂಗಳೂರು ಪೊಲೀಸರು ಸೆರೆ ಹಿಡಿದಿದ್ದಾರೆ.

Spread the love

ಬೆಂಗಳೂರು: ಇಂಡಿಯನ್​ ಪ್ರೀಮಿಯರ್​ ಲೀಗ್ (ಐಪಿಎಲ್‌)​ ಯಶಸ್ವಿಯಾಗಿ ನಡೆಯುತ್ತಿದೆ. ಇದೇ ಐಪಿಎಲ್​ ಪಂದ್ಯದ ವೇಳೆ ಕೆಲ ಕಿಡಿಗೇಡಿಗಳು ಕ್ರಿಕೆಟ್​ ಕಿಟ್​ ಅನ್ನು ಕದ್ದಿದ್ದರು.

ಇದೀಗ ಬೆಂಗಳೂರು ಪೊಲೀಸರು ಕ್ರಿಕೆಟ್​ ಕಿಟ್​ ಸಮೇತ ಇಬ್ಬರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಹೌದು, ಕಳೆದ 10 ದಿನಗಳ ಹಿಂದೆ ದೆಹಲಿ ಹಾಗೂ ಆರ್ ಸಿಬಿ ಪಂದ್ಯದ ವೇಳೆ ಡೆಲ್ಲಿ ಕ್ಯಾಪಿಟಲ್ ತಂಡದ ಕ್ರಿಕೆಟ್ ಕಿಟ್ ಕಳುವಾಗಿತ್ತು. ಈ ಬಗ್ಗೆ ದೆಹಲಿ ಪೊಲೀಸರಿಗೆ ದೆಹಲಿ ತಂಡದ ಮ್ಯಾನೇಜ್ಮೆಂಟ್ ದೂರು ನೀಡಿತ್ತು. ಈ‌ ಸಂಬಂಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಪ್ರಾರಂಭಿಸಿದ್ದರು.

ಪ್ರಕರಣದ ತನಿಖೆ ಸಂದರ್ಭದಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಕಳವುವಾಗಿರುವ ಅನುಮಾನವಿದ್ದರಿಂದ ಡೆಲ್ಲಿ ಕ್ಯಾಪಿಟಲ್ ತಂಡ ಈ‌ ಬಗ್ಗೆ ಬೆಂಗಳೂರು ಪೊಲೀಸರನ್ನು ಸಂಪರ್ಕ ಮಾಡಿದ್ದರು. ಬೆಂಗಳೂರು ಪೊಲೀಸರು ತೀವ್ರ ತನಿಖೆ ನಡೆಸಿದ್ದು, ಕೊನೆಗೂ ಡೆಲ್ಲಿ ಕ್ಯಾಪಿಟಲ್ ತಂಡದ ಕ್ರಿಕೆಟ್ ಕಿಟ್ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಕಳವಾಗಿದ್ದ ಬ್ಯಾಟ್​ಗಳು, ಗ್ಲೌಸ್, ಹೆಲ್ಮೇಟ್, ಪ್ಯಾಡ್ ಸೇರಿ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಇಬ್ಬರು‌ ಆರೋಪಿಗಳನ್ನು ಪೊಲೀಸರು ವಿಚಾರಣೆ ಮಾಡಿದ್ದಾರೆ.

ಕ್ರಿಕೆಟ್ ಆಡಲು ಬ್ಯಾಟ್-ಬಾಲ್ ಕಳ್ಳತನ ಮಾಡಿದೆ-ಬಂಧಿತ ಆರೋಪಿಗಳ ಹೇಳಿಕೆ: ಆಟಗಾರರ ಕ್ರಿಕೆಟ್ ಕಿಟ್​ಗಳನ್ನು ಬೆಂಗಳೂರು ವಿಮಾನ‌ ‌ನಿಲ್ದಾಣಕ್ಕೆ ಸಾಗಿಸುವಾಗ ವಾಹನದಲ್ಲಿದ್ದ ಚಾಲಕ ಚೆಲುವರಾಜ್ ಹಾಗೂ ಕೊರಿಯರ್ ಬಾಯ್ ಸುಧಾಂಶು ಕುಮಾರ್ ನಾಯಕ್ ಎಂಬುವರೇ ಕಳ್ಳತನ ಮಾಡಿದ ಆರೋಪದಡಿ ಇಬ್ಬರನ್ನು ಬಂಧಿಸಿ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ‌.

ಆಟಗಾರರ ಕಿಟ್ ಸೇರಿದಂತೆ‌ ಇನ್ನಿತರ ವಸ್ತುಗಳನ್ನು ಸಾಗಾಟ ಹೊಣೆ ಹೊತ್ತಿದ್ದ ಎಕ್ಸ್ ಪ್ರೆಸ್ ಪ್ರೈಟ್ ಸಿಸ್ಟಂ ಕಂಪೆನಿಯಲ್ಲಿ ಚೆಲುವರಾಜ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಡೆಲ್ಲಿ ಹಾಗೂ ಬೆಂಗಳೂರು ಕ್ರಿಕೆಟ್ ಪಂದ್ಯ ​ನಡೆದಿತ್ತು. ಆಟದ ಬಳಿಕ ಮುಂದಿನ ಪಂದ್ಯಕ್ಕಾಗಿ ದೆಹಲಿ ಪ್ರಯಾಣ ಬೆಳೆಸಿದ್ದರು‌. ಆಟಗಾರರ ಕಿಕ್ರೆಟ್​ಗಳನ್ನು ಏರ್ ಪೋರ್ಟ್​ಗೆ ಸಾಗಿಸಲು ಕಂಪನಿ ಜವಾಬ್ದಾರಿ ವಹಿಸಿಕೊಂಡಿತ್ತು‌. ಇದರಂತೆ‌ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಆಟಗಾರರಾದ ಡೇವಿಡ್ ವಾರ್ನರ್, ಮಿಶೆಲ್ ಮಾರ್ಷ್ ಸೇರಿದಂತೆ ಇನ್ನಿತರ ಆಟಗಾರರ ಬ್ಯಾಟ್, ಪ್ಯಾಡ್ ಒಳಗೊಂಡಂತೆ ಕಿಟ್​​ಗಳನ್ನು ಏರ್ ಪೋರ್ಟ್ ಸಾಗಿಸುವಾಗ ಮಾರ್ಗ ಮಧ್ಯೆ ಆರೋಪಿಗಳು ಬ್ಯಾಟ್ ಗಳನ್ನು ಕಳ್ಳತನ ಮಾಡಿದ್ದರು.

ದೆಹಲಿಯಲ್ಲಿ ಆಟಗಾರರು ಮ್ಯಾಚ್ ಪ್ರ್ಯಾಕ್ಟೀಸ್​ಗಾಗಿ‌ ಪರಿಶೀಲಿಸಿದಾಗ ಕಿಟ್ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.‌ ಈ ಸಂಬಂಧ ದೆಹಲಿಯ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ ಬೆಂಗಳೂರಿನಲ್ಲಿ ಕಿಟ್ ಕಳ್ಳತನವಾಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕಬ್ಬನ್‌ ಪಾರ್ಕ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ತನಿಖೆ‌ ನಡೆಸಿದ ಸಬ್ ಇನ್‌ಸ್ಪೆಕ್ಟರ್ ಭೀಮಸೇನ ಘಾಟಗೆ ನೇತೃತ್ವದ ತಂಡ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲವಾಗಿದೆ.

ಕ್ರಿಕೆಟ್ ಆಡಲು ಬ್ಯಾಟ್ ಬಾಲ್​ಗಳನ್ನು ಕದ್ದಿರುವುದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಆರೋಪಿಗಳಿಂದ 12 ಬ್ಯಾಟ್, 18 ಬಾಲ್, 4 ಜೊತೆ ಹ್ಯಾಂಡ್ ಗ್ಲೌವ್ಸ್, ಎರಡು ಹೆಲ್ಮೆಟ್, 3 ಜೊತೆ ಪ್ಯಾಡ್​ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಧನ್ಯವಾದ ಹೇಳಿದ ಡೇವಿಡ್ ವಾರ್ನರ್: ಡೆಲ್ಲಿ ಕ್ಯಾಪಿಟಲ್ ತಂಡದ ನಾಯಕ ಡೇವಿಡ್ ವಾರ್ನರ್​ ಕಳವಾಗಿದ್ದ ತಮ್ಮ ತಂಡದ ಕ್ರಿಕೆಟ್​ ಕಿಟ್​ ಅನ್ನು ಪತ್ತೆ ಮಾಡಿದ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.


Spread the love

About Laxminews 24x7

Check Also

ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ

Spread the loveಕೋಲಾರ, ಜುಲೈ 07: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ