ಕೊಪ್ಪಳ: ಬಿಜೆಪಿಗೆ ಸೆಡ್ಡು ಹೊಡೆದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಗುರುವಾರ ಸಿ.ವಿ. ಚಂದ್ರಶೇಖರ್ ಅದ್ದೂರಿ ಮೆರವಣಿಗೆ ಮೂಲಕ ಉಮೇದುವಾರಿಕೆ ಸಲ್ಲಿಸಿದರು.
ಈ ವೇಳೆ ಕ್ಷೇತ್ರದ ವಿವಿಧ ಗ್ರಾಮಗಳಿಂದ ಪಕ್ಷದ ಕಾರ್ಯಕರ್ತರು ಹಾಗೂ ಚಂದ್ರಶೇಖರ್ ಬೆಂಬಲಿಗರು ಚಕ್ಕಡಿ, ಎತ್ತಿನ ಬಂಡಿಗಳನ್ನು ತೆಗೆದುಕೊಂಡು ಬಂದಿದ್ದರು.
ಗವಿಮಠದ ಮುಂಭಾಗದ ರಸ್ತೆಯಲ್ಲಿ ಎತ್ತಿನಬಂಡಿಯಲ್ಲಿ ಸಾಕಷ್ಟು ಜನ ಕಾರ್ಯಕರ್ತರು ಹತ್ತಿದಾಗ ಹಿಂಬಂಡಿಯಾಗಿ ರಸ್ತೆ ಮೇಲೆಯೇ ಬಿದ್ದರು.
ಮೆರವಣಿಗೆಯಲ್ಲಿ ಡಿಜೆ ಅಬ್ಬರ ಮತ್ತು ಹಲಗೆ ಶಬ್ದಕ್ಕೆ ಎತ್ತುಗಳು ಹೆದರಿದವು. ಕಾರ್ಯಕರ್ತರು ರಸ್ತೆ ಮೇಲೆ ಬಿದ್ದಾಗ ಅವರ ಹಿಂದೆಯೂ ಸಾಕಷ್ಟು ಬಂಡಿಗಳು ಬರುತ್ತಿದ್ದವು. ಅದನ್ನು ಗಮನಿಸಿ ಪೆಟ್ಟಾದರೂ ದಿಢೀರನೇ ಎದ್ದ ಕಾರಣ ಹೆಚ್ಚಿನ ಅನಾಹುತ ನಡೆಯಲಿಲ್ಲ. ಕಾರ್ಯಕರ್ತರಿಗೆ ಸಣ್ಣ ಗಾಯಗಳಾಗಿವೆ