ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಬಹುನಿರೀಕ್ಷಿತ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.
43 ಅಭ್ಯರ್ಥಿಗಳನ್ನು ಹೆಸರನ್ನು ಅಖೈರು ಮಾಡಲಾಗಿದ್ದು, ಇನ್ನೂ 15 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಬಾಕಿ ಉಳಿಸಿಕೊಂಡಿದೆ. ವರುಣ ಜೊತೆಗೆ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಬಯಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಟಿಕೆಟ್ ನೀಡಲಾಗಿಲ್ಲ.
ಕೋಲಾರದಿಂದ ಕೊತ್ತೂರು ಜಿ.ಮಂಜುನಾಥ್ಗೆ ಟಿಕೆಟ್ ನೀಡಲಾಗಿದೆ. ಬಿಜೆಪಿಗೆ ರಾಜೀನಾಮೆ ನೀಡ ನಿನ್ನೆಯಷ್ಟೇ ಕಾಂಗ್ರೆಸ್ ಸೇರಿದ ಮಾಜಿ ಡಿಸಿಎಂ ಲಕ್ಷ್ಮಣ ಸವದಿಗೆ ಅಥಣಿ ಟಿಕೆಟ್ ನೀಡಲಾಗಿದೆ. ಇದಲ್ಲದೇ, ಜೆಡಿಎಸ್ಗೆ ಗುಡ್ಬೈ ಹೇಳಿರುವ ಶಾಸಕ ಶಿವಲಿಂಗೇಗೌಡರಿಗೆ ಅರಸೀಕೆರೆಯಿಂದ ಕಣಕ್ಕಿಳಿಸಲಾಗಿದೆ. ಮೂರನೇ ಪಟ್ಟಿಯಲ್ಲೂ ವಲಸಿಗರಿಗೆ ಮಣೆ ಹಾಕಲಾಗಿದೆ.
ಮೂರನೇ ಪಟ್ಟಿಯಲ್ಲಿನ ಅಭ್ಯರ್ಥಿಗಳು: ದಾಸರಹಳ್ಳಿ ಕ್ಷೇತ್ರಕ್ಕೆ ಧನಂಜಯ, ಚಿಕ್ಕಪೇಟೆಯಿಂದ ಆರ್ ವಿ ದೇವರಾಜ್, ಕೃಷ್ಣರಾಜ- ಎಂ.ಕೆ ಸೋಮಶೇಕರ್, ಅಥಣಿ- ಲಕ್ಷಣ್ ಸವದಿ, ತೇರದಾಳ- ಸಿದ್ದಪ್ಪ ರಾಮಪ್ಪ ಕೊಣ್ಣೂರ್, ಶಿಖಾರಿಪುರ-ಗೋಣಿ ಮಾಲ್ತೇಶ್, ತರಿಕೆರೆ- ಶ್ರೀನಿವಾಸ್, ಬೆಂಗಳೂರು ದಕ್ಷಿಣ- ಆರ್ ಕೆ ರಮೇಶ್, ಬೊಮ್ಮನಹಳ್ಳಿ- ಉಮಾಪತಿ ಗೌಡ, ಅರಸೀಕೆರೆ- ಶಿವಲಿಂಗೇಗೌಡ, ಚಿಕ್ಕಬಳ್ಳಾಪುರ-ಪ್ರದೀಪ್ ಈಶ್ವರ್, ಮೂಡಿಗೆರೆ- ನಯನಾ ಮೋಟಮ್ಮ, ಶಿವಮೊಗ್ಗ-ಯೋಗೇಶ್, ಮದ್ದೂರು- ಉದಯ್ ಗೌಡ, ನವಲಗುಂದ- ಕೋನರೆಡ್ಡಿ, ಬಳ್ಳಾರಿ ನಗರ- ಭರತ್ ರೆಡ್ಡಿ.
ಟಿಕೆಟ್ ಸಿಗದ ಪ್ರಮುಖರು: ಕಳೆದ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿಯೇ ಭಾರಿ ಅಂತರದಲ್ಲಿ ಗೆದ್ದು ದಾಖಲೆ ನಿರ್ಮಾಣ ಮಾಡಿದ್ದ ಪುಲಕೇಶಿನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಗೆ ಇನ್ನೂ ಟಿಕೆಟ್ ಘೋಷಿಸಿಲ್ಲ. ಸಿ.ವಿ.ರಾಮನ್ ನಗರ ಕ್ಷೇತ್ರಕ್ಕೂ ಇನ್ನೂ ಅಭ್ಯರ್ಥಿ ಪೆಂಡಿಂಗ್ ಇಡಲಾಗಿದೆ. ಅಲ್ಲದೆ, ಹರಿಹರ ಶಾಸಕ ರಾಮಪ್ಪ, ಶಿಡ್ಲಘಟ್ಟ ಶಾಸಕ ವಿ ಮುನಿಯಪ್ಪ, ಲಿಂಗಸುಗೂರು ಶಾಸಕ ಡಿ ಎಸ್ ಹೂಲಗೇರಿ ಅವರಿಗೂ ಸಹ ಟಿಕೆಟ್ ಘೋಷಣೆ ಆಗಿಲ್ಲ
ಮೂರನೇ ಪಟ್ಟಿಯಲ್ಲಿನ ಅಭ್ಯರ್ಥಿಗಳು: ದಾಸರಹಳ್ಳಿ ಕ್ಷೇತ್ರಕ್ಕೆ ಧನಂಜಯ, ಚಿಕ್ಕಪೇಟೆಯಿಂದ ಆರ್ ವಿ ದೇವರಾಜ್, ಕೃಷ್ಣರಾಜ- ಎಂ.ಕೆ ಸೋಮಶೇಕರ್, ಅಥಣಿ- ಲಕ್ಷಣ್ ಸವದಿ, ತೇರದಾಳ- ಸಿದ್ದಪ್ಪ ರಾಮಪ್ಪ ಕೊಣ್ಣೂರ್, ಶಿಖಾರಿಪುರ-ಗೋಣಿ ಮಾಲ್ತೇಶ್, ತರಿಕೆರೆ- ಶ್ರೀನಿವಾಸ್, ಬೆಂಗಳೂರು ದಕ್ಷಿಣ- ಆರ್ ಕೆ ರಮೇಶ್, ಬೊಮ್ಮನಹಳ್ಳಿ- ಉಮಾಪತಿ ಗೌಡ, ಅರಸೀಕೆರೆ- ಶಿವಲಿಂಗೇಗೌಡ, ಚಿಕ್ಕಬಳ್ಳಾಪುರ-ಪ್ರದೀಪ್ ಈಶ್ವರ್, ಮೂಡಿಗೆರೆ- ನಯನಾ ಮೋಟಮ್ಮ, ಶಿವಮೊಗ್ಗ-ಯೋಗೇಶ್, ಮದ್ದೂರು- ಉದಯ್ ಗೌಡ, ನವಲಗುಂದ- ಕೋನರೆಡ್ಡಿ, ಬಳ್ಳಾರಿ ನಗರ- ಭರತ್ ರೆಡ್ಡಿ.
ಟಿಕೆಟ್ ಸಿಗದ ಪ್ರಮುಖರು: ಕಳೆದ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿಯೇ ಭಾರಿ ಅಂತರದಲ್ಲಿ ಗೆದ್ದು ದಾಖಲೆ ನಿರ್ಮಾಣ ಮಾಡಿದ್ದ ಪುಲಕೇಶಿನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಗೆ ಇನ್ನೂ ಟಿಕೆಟ್ ಘೋಷಿಸಿಲ್ಲ. ಸಿ.ವಿ.ರಾಮನ್ ನಗರ ಕ್ಷೇತ್ರಕ್ಕೂ ಇನ್ನೂ ಅಭ್ಯರ್ಥಿ ಪೆಂಡಿಂಗ್ ಇಡಲಾಗಿದೆ. ಅಲ್ಲದೆ, ಹರಿಹರ ಶಾಸಕ ರಾಮಪ್ಪ, ಶಿಡ್ಲಘಟ್ಟ ಶಾಸಕ ವಿ ಮುನಿಯಪ್ಪ, ಲಿಂಗಸುಗೂರು ಶಾಸಕ ಡಿ ಎಸ್ ಹೂಲಗೇರಿ ಅವರಿಗೂ ಸಹ ಟಿಕೆಟ್ ಘೋಷಣೆ ಆಗಿಲ್ಲ.