Breaking News

ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ತಾರೆ?ನಾಳೆ ಪಕ್ಷ ನನಗೆ ಯಾವ ರೀತಿಯ ಸೂಚನೆಗಳನ್ನು ಕೊಡುತ್ತೆ ಅದರ ಮೇಲೆ ಇವೆಲ್ಲವೂ ನಿರ್ಧಾರ: ಸವದಿ

Spread the love

ಅಥಣಿ: ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ತಾರೆ ಎನ್ನುವ ಗುಮಾನಿ ಕ್ಷೇತ್ರದಲ್ಲಿ ಹರಡುತ್ತಿದೆ ಎನ್ನುವ ಪ್ರಶ್ನೆಗೆ ನಾಳೆ ಪಕ್ಷ ನನಗೆ ಯಾವ ರೀತಿಯ ಸೂಚನೆಗಳನ್ನು ಕೊಡುತ್ತೆ ಅದರ ಮೇಲೆ ಇವೆಲ್ಲವೂ ನಿರ್ಧಾರ ಕುತೂಹಲಕರ ಉತ್ತರ ನೀಡಿದ್ದಾರೆ.

ಗುಮಾನಿಗಳು ಎಲ್ಲ ರೀತಿಯಲ್ಲಿ ಬರುತ್ತವೆ. ಆದರೆ ಇವತ್ತಿನವರೆಗೂ ಆ ರೀತಿಯ ಆಲೋಚನೆಗಳನ್ನು ನಾನು ಮಾಡಿಲ್ಲ. ನಾಳೆ ಪಕ್ಷ ನನಗೆ ಯಾವ ರೀತಿಯ ಸೂಚನೆಗಳನ್ನು ಕೊಡುತ್ತೆ ಅದರ ಮೇಲೆ ಇವೆಲ್ಲವೂ ನಿರ್ಧಾರವಾಗಲಿದೆ ಎಂದು ಲಕ್ಷ್ಮಣ ಸವದಿ ಹೇಳಿದರು.

ಬಿಜೆಪಿ ಟಿಕೆಟ್ ಘೋಷಣೆಯ ಮೇಲೆ ಎಲ್ಲವೂ ಅವಲಂಬಿತವಾಗಿದೆ ಎನ್ನುವ ಸೂಚನೆಯನ್ನು ಲಕ್ಷ್ಮಣ ಸವದಿ ಸ್ಪಷ್ಟವಾಗಿ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ರಮೇಶ ಜಾರಕಿಹೊಳಿ ತಮ್ಮ ಕುರಿತು ಮಾಡಿರುವ ವ್ಯಂಗ್ಯಕ್ಕೆ ಉತ್ತರಿಸುವುದಿಲ್ಲ ಎಂದಿದ್ದಾರೆ. ಲಕ್ಷ್ಮಣ ಸವದಿ ಯಾಕೆ ಚಡಪಡಿಸುತ್ತಿದ್ದಾರೋ ಎಂದು ರಮೇಶ ಜಾರಕಿಹೊಳಿ ಹೇಳಿದ್ದಾರಲ್ಲಾ ಎನ್ನುವ ಪ್ರಶ್ನೆಗೆ, ನಾನು ಅದರ ಬಗ್ಗೆ ಇವತ್ತು ಪ್ರತಿಕ್ರಿಯಿಸುವುದಿಲ್ಲ. ಕ್ಷೇತ್ರದಲ್ಲಿ ವಾತಾವರಣ ಆ ರೀತಿ ಇದೆ. ನಾನು 20 -25 ವರ್ಷದಿಂದ ಕ್ಷೇತ್ರದಲ್ಲಿ ನೋಡಿದ್ದೇನೆ. ಜನರ ಭಾವನೆ ಅರ್ಥವಾಗುತ್ತದೆ. ಅಕಸ್ಮಾತ್ ಮಹೇಶ ಕುಮಟಳ್ಳಿಗೆ ಸೋಲಾದರೆ ನನ್ನ ತಲೆಗೆ ಕಟ್ಟಬೇಡಿ ಎಂದು ನಾನು ಸಹಜವಾಗಿ ಹೇಳಿದ್ದೇನೆ. ಅದನ್ನು ಅವರು ಹೇಗೆ ಅಪಾರ್ಥ ಮಾಡಿಕೊಂಡಿದ್ದಾರೋ ನನಗೆ ಗೊತ್ತಿಲ್ಲ. ಭೇಟಿಯಾದಾಗ ಚರ್ಚೆ ಮಾಡುತ್ತೇನೆ ಎಂದು ಲಕ್ಷ್ಮಣ ಸವದಿ ಹೇಳಿದರು.


Spread the love

About Laxminews 24x7

Check Also

ಕ್ಯಾನ್ಸರ್ ಪೀಡಿತನಿಂದ ವಿದ್ಯಾರ್ಥಿನಿ ಕೊಲೆ ಕೇಸ್​: ಪ್ರೀ ಪ್ಲ್ಯಾನ್ಡ್ ಮರ್ಡರ್ ರಹಸ್ಯ ಬಯಲು

Spread the loveಚಿತ್ರದುರ್ಗ, ಆಗಸ್ಟ್​ 21: ಕ್ಯಾನ್ಸರ್ ಮೂರನೇ ಹಂತದಲ್ಲಿರುವ ಚೇತನ್​​ನಿಂದಲೇ ವಿದ್ಯಾರ್ಥಿನಿ (student) ವರ್ಷಿತಾ(19) ಕೊಲೆ (kill) ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಡಿವೈಎಸ್​ಪಿ ಪಿ.ದಿನಕರ್, ಗ್ರಾಮಾಂತರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ