Breaking News

ದರೋಡೆ ಮಾಡಿ ಎಸ್ಕೇಪ್ ಆಗುತ್ತಿದ್ದ ಮೂವರಿಗೆ ಧರ್ಮದೇಟು ನೀಡಿ ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು

Spread the love

ಬೆಂಗಳೂರು, ಮೇ 11- ಮೂರು ಮಂದಿ ದರೋಡೆಕೋರರನ್ನು ಸಾರ್ವಜನಿಕರೇ ಹಿಡಿದು ಸಿದ್ದಾಪುರ ಪೊಲೀಸರ ವಶಕ್ಕೆ ನೀಡಿದ್ದಾರೆ.ಸಿದ್ದಾಪುರ ಠಾಣೆ ಪೊಲೀಸರು ಈ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಚಂದ್ರಾ ಲೇಔಟ್‍ನ ಸಯ್ಯದ್ ನದೀಮ್ (23), ಮಾಗಡಿ ರಸ್ತೆಯ ಚೌಳರಪಾಳ್ಯ ರಾಮದಾಸ್ ಲೇಔಟ್‍ನ ಇರ್ಫಾನ್ ಪಾಷ (20) ಮತ್ತು ಪಾದರಾಯನಪುರದ ಮೌಶಾಕ್ ಅಹಮ್ಮದ್ (44) ಪೊಲೀಸರ ವಶದಲ್ಲಿರುವ ಆರೋಪಿಗಳು.

ಈ ಮೂವರು ಹೊಸೂರು ರಸ್ತೆಯ ಸೆಲ್ ಪೆಟ್ರೋಲ್ ಬಂಕ್ ಬಳಿ ವ್ಯಕ್ತಿಯೊಬ್ಬರ ಮೊಬೈಲ್ ದರೋಡೆ ಮಾಡಿ ಪರಾರಿಯಾಗಿದ್ದರು. ತದನಂತರ ಲಾಲ್‍ಬಾಗ್, ಮೆಟ್ರೋ ಸ್ಟೇಷನ್ ಸಮೀಪದ ಆರ್‍ವಿ ರಸ್ತೆಯಲ್ಲಿ ಮಹಿಳೆಯೊಬ್ಬರ ಸರ ಅಪಹರಣ ನಡೆಸಿದ್ದಾರೆ.

ತಕ್ಷಣ ಮಹಿಳೆ ಕೂಗಿಕೊಂಡಾಗ ಸಾರ್ವಜನಿಕರು ಈ ಮೂವರು ದರೋಡೆಕೋರರನ್ನು ಹಿಡಿದು ಸಿದ್ದಾಪುರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.ಪೊಲೀಸರು ಸ್ಥಳಕ್ಕಾಗಮಿಸಿ ದರೋಡೆಕೋರರನ್ನು ವಶಕ್ಕೆ ಪಡೆದಿದ್ದು, ಇವರು ಇನ್ನೂ ಎಲ್ಲೆಲ್ಲಿ ದರೋಡೆ, ಸರ ಅಪಹರಣ ನಡೆಸಿದ್ದಾರೆ ಎಂಬುದರ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.


Spread the love

About Laxminews 24x7

Check Also

ಅಪರಿಚಿತ ಆರೋಪಿಗಳ ವಿರುದ್ಧ ಎಫ್ಐಆರ್

Spread the love ಬೆಂಗಳೂರು: ಯುವತಿಯೊಂದಿಗೆ ಮದುವೆ ಮಾಡಿಕೊಳ್ಳುವ ವಿಚಾರವಾಗಿ ಸೋದರ ಸಂಬಂಧಿಯನ್ನ ಹೆದರಿಸಲು ಸಾರ್ವಜನಿಕರ ಮೇಲೆ ಲಾಂಗ್ ಹಾಗೂ ಕಬ್ಭಿಣದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ