Breaking News

ವೆಂಕಟಾಪೂರ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಕೆಎಂಎಫ್ ನಿಂದ ೧೨ ಲಕ್ಷ ರೂಪಾಯಿ ನೆರವು-

Spread the love

ಮೂಡಲಗಿ- ವೆಂಕಟಾಪೂರ ಹಾಲು ಉತ್ಪಾದಕ ಸಹಕಾರಿ ಸಂಘಕ್ಕೆ ೧೨ ಲಕ್ಷ ರೂ. ನೆರವು ನೀಡುವುದಾಗಿ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ತಾಲ್ಲೂಕಿನ ವೆಂಕಟಾಪೂರ ಗ್ರಾಮಕ್ಕೆ ಇತ್ತೀಚೆಗೆ ಭೇಟಿ ನೀಡಿ ಮಾತನಾಡಿದ ಅವರು, ಇದರಲ್ಲಿ ಕೆಎಂಎಫ್ ನಿಂದ ೧೦ ಲಕ್ಷ ರೂ ಮತ್ತು ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದಿಂದ ೨ ಲಕ್ಷ ರೂ. ಗಳ ನೆರವು ನೀಡುವ ಭರವಸೆಯನ್ನು ನೀಡಿದರು.

 


ವೆಂಕಟಾಪೂರ ಗ್ರಾಮದ ಹಣಮಂತ ದೇವರ ದೇವಸ್ಥಾನದ ಅಭಿವೃದ್ಧಿಗಾಗಿ ಸಮುದಾಯ ಭವನ ನಿರ್ಮಾಣಕ್ಕೆ ೨೦ ಲಕ್ಷ ರೂ ಗಳನ್ನು ನೀಡಲಾಗುವುದು. ಈಗಾಗಲೇ ಮಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಗಾಗಿ ಧನ ಸಹಾಯವನ್ನು ಮಾಡಲಾಗಿದೆ.

ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಿಕೊಡಲಾಗುವುದು. ಸಾರ್ವಜನಿಕರಿಗೆ ಅನುಕೂಲವಾಗಲು ಪ್ರತ್ಯೇಕ ಶೌಚಾಲಯಗಳನ್ನು ಬೇಗನೆ ನಿರ್ಮಿಸಿಕೊಡಲಾಗುವುದು. ಗ್ರಾಮದ ಮುಖಂಡರು ಒಂದಾಗಿದ್ದರೆ ಅಭಿವೃದ್ಧಿ ಕಾರ್ಯಗಳು ವೇಗವಾಗಿ ಸಾಗುತ್ತವೆ.

ಒಗ್ಗಟ್ಟಿನ ಸಂಕೇತವನ್ನು ಅಳವಡಿಸಿಕೊಂಡು ಗ್ರಾಮಾಭಿವೃದ್ದಿಗೆ ಟೊಂಕು ಕಟ್ಟಿ ದುಡಿಯುವಂತೆ ಸಲಹೆ ಮಾಡಿದ ಅವರು, ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಹೆಚ್ಚಿನ ಲೀಡ್ ನೀಡಲು ಕಾರ್ಯಕರ್ತರು ಶ್ರಮಿಸಬೇಕು. ಸರಕಾರದ ಸಾಧನೆಗಳನ್ನು ಜನರಿಗೆ ವಿವರಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

ಪ್ರಭಾ ಶುಗರ್ಸ ನಿರ್ದೇಶಕ ಗಿರೀಶ ಹಳ್ಳೂರ, ರಂಗಣ್ಣ ಅರಳಿಮಟ್ಟಿ, ಶಾಸಪ್ಪಗೌಡ ಪಾಟೀಲ, ಬಾಳಪ್ಪ ಖವಟಕೊಪ್ಪ, ಎಚ್.ಡಿ.ಪೂಜೇರಿ, ಶಂಕರೆಪ್ಪ ಕುಲಗೋಡ, ಭೀಮಪ್ಪ ದಳವಾಯಿ, ಕಲ್ಮೇಶ ದಡ್ಡಿಮನಿ, ಶಿವನಗೌಡ ಪಾಟೀಲ, ಶ್ರೀಕಾಂತ ಖವಟಕೊಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಗರ್ಭಿಣಿಯಾದಳೆಂದು ಪತ್ನಿಯನ್ನೇ ಕೊಲೆ ಮಾಡಿದ ಪತಿ!

Spread the loveಚಾಮರಾಜನಗರ : ಗರ್ಭಿಣಿಯೊಬ್ಬರನ್ನು ತಾಳಿ ಕಟ್ಟಿದ ಪತಿಯೇ ಕೊಲೆ ಮಾಡಿರುವ ಘಟನೆ ತಾಲೂಕಿನ ಡೊಳ್ಳಿಪುರದ ತೋಟದ ಮನೆಯಲ್ಲಿ ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ