Breaking News

ಮಹದಾಯಿ ವಿವಾದ: ಸುಪ್ರೀಂಕೋರ್ಟ್​​ನಲ್ಲಿ ಗೋವಾಗೆ ಹಿನ್ನಡೆ; ಆಗಿದ್ದೇನು?

Spread the love

ವದೆಹಲಿ: ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ-ಗೋವಾ ನಡುವಿನ ಸಂಘರ್ಷದಲ್ಲಿ ಸದ್ಯ ಗೋವಾ ಸರ್ಕಾರಕ್ಕೆ ಸುಪ್ರೀಂಕೋರ್ಟ್​ನಲ್ಲಿ ಹಿನ್ನಡೆಯಾಗಿದೆ. ಅರ್ಥಾತ್​ ಮಹದಾಯಿ ಸಂಬಂಧ ಗೋವಾ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ.

 

ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸಂಜೀವ್ ಖನ್ನ ನೇತೃತ್ವದ ದ್ವಿಸದಸ್ಯ ಪೀಠ ಗೋವಾ ಸರ್ಕಾರದ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ. ಮಹದಾಯಿ ಕಾಮಗಾರಿ ಸಂಬಂಧ ಕರ್ನಾಟಕದ ವಿರುದ್ಧ ಗೋವಾ ಸರ್ಕಾರ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿತ್ತು.

ಕೇಂದ್ರ ಜಲ ಆಯೋಗ ಮಹದಾಯಿ ಡಿಪಿಆರ್​​ಗೆ ಅನುಮೋದನೆ ನೀಡಿದ್ದನ್ನು ಗೋವಾ ಸರ್ಕಾರ ವಿರೋಧಿಸಿತ್ತು. ನ್ಯಾಯಾಧಿಕರಣ ಆದೇಶ ಗೆಜೆಟ್ ನೋಟಿಫಿಕೇಷನ್ ಮಾಡಿದ ಕೇಂದ್ರ ಸರ್ಕಾರದ ಕ್ರಮದ ಬಗ್ಗೆಯೂ ತಕರಾರು ತೆಗೆದಿದ್ದ ಗೋವಾ, ಮಹದಾಯಿ ಕಾಮಗಾರಿಗೆ ಕರ್ನಾಟಕ ಮುಂದಾಗಿದೆ ಎಂದು ಆರೋಪಿಸಿ ಸುಪ್ರೀಂಕೋರ್ಟ್​ಗೆ ಮನವಿ ಸಲ್ಲಿಸಿತ್ತು


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ