Breaking News

ನಿರ್ಮಲಾ ಸೀತಾರಾಮಾನ್ ಮಂಡಿಸಿರುವ ಬಜೆಟ್ ಮಧ್ಯಮ, ಬಡವರ ಕುಟುಂಬ ಸ್ನೇಹಿ ಬಜೆಟ: ಬಾಲಚಂದ್ರ ಜಾರಕಿಹೊಳಿ,

Spread the love

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮಾನ್ ಅವರು ಮಂಡಿಸಿರುವ ಬಜೆಟ್ ಮಧ್ಯಮ, ಬಡವರ ಕುಟುಂಬ ಸ್ನೇಹಿ ಬಜೆಟ್ ಆಗಿದೆ. ದೇಶದ ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಪ್ರಗತಿಗೆ ಹಾಗೂ ಉದ್ಯಮಗಳ ಬೆಳವಣಿಗೆಗೆ ಹತ್ತು ಹಲವಾರು ಅಂಶಗಳನ್ನು ಅವರು ಕೊಡುಗೆಯಾಗಿ ನೀಡಿದ್ದಾರೆ.

ಕರ್ನಾಟಕಕ್ಕೆ ಭದ್ರಾ ಮೇಲ್ದಂಡೆ ಯೋಜನೆಗೆ ₹೫೩೦೦ ಕೋಟಿ ಕೊಟ್ಟಿರುವುದನ್ನು ಸ್ವಾಗತಿಸುತ್ತೇನೆ. ಅದರಂತೆ ಆದಾಯ ಮಿತಿ ಹೆಚ್ಚಳ, ಕೃಷಿ ಉದ್ಯಮಿಗಳ ಸ್ಟಾರ್ಟಪ್ ಆಪ್‌ಗೆ ಉತ್ತೇಜನ, ೧೫೭ ಹೊಸ ನರ್ಸಿಂಗ್ ಕಾಲೇಜು ಸ್ಥಾಪನೆ, ೫೦ ಹೊಸ ವಿಮಾನ ನಿಲ್ದಾಣ, ಏಕಲವ್ಯ ಶಾಲಾ ವಸತಿ ಶಾಲೆಗಳಿಗೆ ಶಿಕ್ಷಕರ ನೇಮಕ, ಮಹಿಳಾ ಸಮ್ಮಾನ್ ಯೋಜನೆ, ಯುವಕರ ಕೌಶಲ್ಯಕ್ಕೆ ಯೋಜನೆ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಅಂಶಗಳು, ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯ ಸ್ಥಾಪನೆ, ಆವಾಸ್ ಯೋಜನೆಗೆ ಉತ್ತೇಜನದಂತಹ ಹತ್ತು ಹಲವಾರು ಯೋಜನೆಗಳು ದೇಶವನ್ನು ವಿಶ್ವದಲ್ಲಿ ಮತ್ತಷ್ಟು ಉನ್ನತ್ತಕ್ಕೆ ಏರಿಸಲು ಅನುಕೂಲವಾಗಿದೆ.

ಸಮೃದ್ಧ ಭಾರತ ನಿರ್ಮಾಣ ಮಾಡಲು ಹೊರಟಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿಗೆ ಬಜೆಟ್ ಮತ್ತಷ್ಟು ಶಕ್ತಿ ತುಂಬಿದೆ.

-ಬಾಲಚಂದ್ರ ಜಾರಕಿಹೊಳಿ, ಶಾಸಕರು, ಕೆಎಂಎಫ್ ಅಧ್ಯಕ್ಷರು.


Spread the love

About Laxminews 24x7

Check Also

ವರದಕ್ಷಿಣೆ ಕಿರುಕುಳ ಆರೋಪ, ಐಎಸ್‌ಡಿ ಡಿವೈಎಸ್‌ಪಿ ವಿರುದ್ಧ ಎಫ್ಐಆರ್

Spread the love ಬೆಂಗಳೂರು : ಡಿವೈಎಸ್‌ಪಿಯೊಬ್ಬರ ವಿರುದ್ಧ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. 41 ವರ್ಷದ ಮಹಿಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ