Breaking News

ಸೋಮಾಲಿಯಾದಲ್ಲಿ ಐಸಿಸ್ ನಾಯಕ ಸೇರಿ 10 ಮಂದಿ ಭಯೋತ್ಪಾದಕರ ಹತ್ಯೆ

Spread the love

ಸೋಮಾಲಿಯಾದಲ್ಲಿ ಐಸಿಸ್ ನಾಯಕ ಬಿಲಾಲ್ ಸೇರಿ ಒಟ್ಟು 10 ಮಂದಿ ಭಯೋತ್ಪಾದಕರನ್ನು ಅಮೆರಿಕ ಮಿಲಿಟರಿ ಹೊಡೆದುರುಳಿಸಿದೆ. ಈ ಕುರಿತು ಅಮೆರಿಕ ಸರ್ಕಾರ ಮಾಹಿತಿ ನೀಡಿದೆ.

Senior ISIS Leader Death: ಸೋಮಾಲಿಯಾದಲ್ಲಿ ಐಸಿಸ್ ನಾಯಕ ಸೇರಿ 10 ಮಂದಿ ಭಯೋತ್ಪಾದಕರ ಹತ್ಯೆ

ಸೋಮಾಲಿಯಾದಲ್ಲಿ ಐಸಿಸ್ ನಾಯಕ ಬಿಲಾಲ್ ಸೇರಿ ಒಟ್ಟು 10 ಮಂದಿ ಭಯೋತ್ಪಾದಕರನ್ನು ಅಮೆರಿಕ ಮಿಲಿಟರಿ ಹೊಡೆದುರುಳಿಸಿದೆ. ಈ ಕುರಿತು ಅಮೆರಿಕ ಸರ್ಕಾರ ಮಾಹಿತಿ ನೀಡಿದೆ. ಬಿಲಾಲ್ ಈ ಸಂಘಟನೆಯ ಪ್ರಮುಖ ಹಣಕಾಸು ಸಹಾಯಕನಾಗಿದ್ದ. ಅಧಿಕಾರಿಗಳ ಪ್ರಕಾರ ಬಿಲಾಲ್-ಅಲ್ ಸುದಾನಿ ಆಫ್ರಿಕಾದ್ಯಂತ ಐಸಿಸ್​ ಅನ್ನು ವಿಸ್ತರಿಸಲು ಹಾಗೂ ಇತರೆ ಚಟುವಟಿಕೆಗಳನ್ನು ರೂಪಿಸಲು ತಯಾರಿ ನಡೆಸಿದ್ದ. ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್​ ಆಸ್ಟಿನ್ ಈ ಕುರಿತು ಹೇಳಿಕೆ ನೀಡಿದ್ದು, ಈ ಕ್ರಮವು ಅಮೆರಿಕ ಸೇರಿದಂತೆ ಇತರೆ ರಾಷ್ಟ್ರಗಳಿಗೂ ಸುರಕ್ಷತೆಯ ಭಾವ ಮೂಡುತ್ತದೆ ಎಂದಿದ್ದಾರೆ.

ವರ್ಷಗಳ ಕಾಲ ಯುಎಸ್ ಗುಪ್ತಚರ ಅಧಿಕಾರಿಗಳಿಗೆ ರಾಡಾರ್‌ನಲ್ಲಿರುವ ಅಲ್-ಸುದಾನಿ, ಆಫ್ರಿಕಾದಲ್ಲಿ ಐಎಸ್ ಕಾರ್ಯಾಚರಣೆಗಳಿಗೆ ಮತ್ತು ಅಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಐಎಸ್‌ಐಎಸ್-ಕೆ ಭಯೋತ್ಪಾದಕ ಶಾಖೆಗೆ ಧನಸಹಾಯ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ಮಹಿಳೆಯರನ್ನು ನಿಂದಿಸುವುದೇ ಬಿಜೆಪಿಗರ ಕೆಲಸ: ಸಚಿವೆ ಹೆಬ್ಬಾಳಕರ

Spread the love ಮಹಿಳೆಯರನ್ನು ನಿಂದಿಸುವುದೇ ಬಿಜೆಪಿಗರ ಕೆಲಸ: ಸಚಿವೆ ಹೆಬ್ಬಾಳಕರ ಎಂಎಲ್ಸಿ ರವಿಕುಮಾರ್ ವಿರುದ್ಧ ಲಕ್ಷ್ಮೀ ಹೆಬ್ಬಾಳಕರ್ ವಾಗ್ದಾಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ