Breaking News

ಸಬ್​ ರಿಜಿಸ್ಟ್ರಾರ್​ ಕಚೇರಿಯಲ್ಲಿ ಲಂಚ ಹಾವಳಿಗೆ ಬ್ರೇಕ್,ಕಾವೇರಿ 2.0: ಸಬ್​ ರಿಜಿಸ್ಟ್ರಾರ್​ ಕಚೇರಿಯಲ್ಲಿ ಪಾಸ್​ಪೋರ್ಟ್​ ಮಾದರಿ ಸೇವೆ

Spread the love

ಬ್​ ರಿಜಿಸ್ಟ್ರಾರ್​ ಕಚೇರಿಗಳ ಸೇವೆಗೆ ವೇಗ, ಲಂಚದ ಆರೋಪದಿಂದ ಮುಕ್ತಿ, ದಲ್ಲಾಳಿಗಳ ಹಾವಳಿಗೆ ಬ್ರೇಕ್​ ಹಾಕಲು ಕಾವೇರಿ 2.0 ತಂತ್ರಾಂಶ ಬಳಕೆಗೆ ಬರಲಿದೆ. ಪಾಸ್​ಪೋರ್ಟ್​ ಮಾದರಿ ಸೇವೆ ಒದಗಿಸಲು ಉಪ ನೋಂದಣಿ ಕಚೇರಿಗಳಲ್ಲಿ ಹೊಸ ಸ್ಟ್​ಾವೇರ್​ ಅಳವಡಿಸಲು ಕಂದಾಯ ಇಲಾಖೆ ಮುಂದಾಗಿದೆ.

ರಾಜ್ಯದಲ್ಲಿ 260 ಸಬ್​ ರಿಜಿಸ್ಟ್ರಾರ್​ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ದಿನಕ್ಕೆ ಅಂದಾಜು 10 ಸಾವಿರ ದಾಖಲೆ ಪತ್ರಗಳ ನೋಂದಣಿ, ದೃಢೀಕರಣ ಪತ್ರಗಳ ಸೇವೆ ಒದಗಿಸುತ್ತಿವೆ. ಸರ್ಕಾರದ ಬೊಕ್ಕಸ ತುಂಬಿಸುವಲ್ಲಿ 3ನೇ ಅತೀ ದೊಡ್ಡ ಇಲಾಖೆ ಎಂಬುದು ನೋಂದಣಿ ಮತ್ತು ಮುದ್ರಾಂಕ ಸೇವೆಯ ಹೆಗ್ಗಳಿಕೆ.

ಪ್ರತಿದಿನ ಸಾವಿರಾರು ಜನರು ಕಚೇರಿಗೆ ಒಂದಿಲ್ಲೊಂದು ಸೇವೆಗೆ ಭೇಟಿ ಕೊಡುತ್ತಾರೆ. ಆದರೆ, ಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿ, ಲಂಚದ ಆರೋಪ, ಮತ್ತೊಂದೆಡೆ ಕಾವೇರಿ 1.0 ಆವೃತ್ತಿಯಲ್ಲಿನ ಸರ್ವರ್​ ಸಮಸ್ಯೆ ಕಪ್ಪುಚುಕ್ಕೆಯಾಗಿವೆ. ಜತೆಗೆ, ಕಂದಾಯ ಇಲಾಖೆಗೂ ಇದೊಂದು ದೊಡ್ಡ ಸವಾಲಾಗಿತ್ತು.ಇದೀಗ ಅಧಿಕಾರಿ, ಸಿಬ್ಬಂದಿ ಮೇಲಿದ್ದ ಆರೋಪಗಳನ್ನು ನಿವಾರಿಸಿ, ದಲ್ಲಾಳಿಗಳನ್ನು ದೂರವಿಟ್ಟು ಜನಸ್ನೇಹಿ ಸೇವೆಗೆ ಕಂದಾಯ ಇಲಾಖೆ ಸಂಕಲ್ಪ ತೊಟ್ಟಿದೆ. ಇದರ ಪರಿಕಲ್ಪನೆಯೇ ಸಬ್​ ರಿಜಿಸ್ಟ್ರಾರ್​ ಕಚೇರಿಯಲ್ಲಿ ಅಳವಡಿಸಿರುವ ಕಾವೇರಿ 1.0 ಸಾಫ್ಟ್​ವೇರ್​ ಅನ್ನು ಕಾವೇರಿ 2.0 ತಂತ್ರಾಂಶಕ್ಕೆ ಅಪ್​ಗ್ರೇಡ್​ ಮಾಡುವುದು. ಸೆಂಟರ್​ ಫಾರ್​ ಸ್ಮಾರ್ಟ್​ ಗವರ್ನೆನ್ಸ್​ ಸಂಸ್ಥೆ ಅಭಿವೃದ್ಧಿಪಡಿಸಿರುವ ಹೊಸ ತಂತ್ರಾಂಶವನ್ನು ನೋಂದಣಿ ಉಪಮಹಾಪರಿವೀಕ್ಷಕರ (ಆಡಳಿತ) ಕೇಂದ್ರ ಕಚೇರಿ ಕೆ.ಎನ್​. ವಿಮಲ ನೇತೃತ್ವದ ಹಿರಿಯ ಉಪ ನೋಂದಣಾಧಿಕಾರಿಗಳು ಒಳಗೊಂಡ 26 ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ.

ಇದೀಗ ಫೆಬ್ರವರಿ 2ರಿಂದ ಚಿಂಚೋಳಿ, ಮಂಡ್ಯ, ಮೈಸೂರು, ರಾಮನಗರ, ಮಂಗಳೂರು ಮತ್ತು ಬೆಳಗಾವಿಯಲ್ಲಿ ಇದನ್ನು ಪ್ರ್ರಾಯೋಗಿಕವಾಗಿ ಬಳಕೆ ಮಾಡಲಾಗುತ್ತದೆ. ಮೂರು ತಿಂಗಳ ಕಾಲ ಸಾಧಕ&ಬಾಧಕಗಳ ಪರಿಶೀಲನೆ ನಡೆಸಿ ಅದರಲ್ಲಿನ ಲೋಪದೋಷ ಮತ್ತು ಜನಸ್ನೇಹಿ ಸೇವೆಗೆ ಯಾವ ಅಂಶಗಳು ಬೇಕೆಂಬುದರ ಬಗ್ಗೆ ತಜ್ಞರ ತಂಡ ಪರಿಶೀಲನೆ ನಡೆಸಲಿದೆ. ಆನಂತರ ಅಗತ್ಯ ಇರುವ ಅಂಶಗಳನ್ನು ಬದಲಾವಣೆ ತಂದು ಮೇ 1ರಿಂದ ರಾಜ್ಯದ ಎಲ್ಲ ಸಬ್​ ರಿಜಿಸ್ಟ್ರಾರ್​ ಕಚೇರಿಗಳಲ್ಲಿ ಹೊಸ ಆವೃತ್ತಿಯ, ಮೇಲ್ದರ್ಜೆಗೇರಿಸಿದ ತಂತ್ರಾಂಶ ಜಾರಿಗೆ ತರಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Spread the love

About Laxminews 24x7

Check Also

2000 ಕೋಟಿ ವೆಚ್ಚದ ಅಭಿವೃದ್ಧಿ ಕೆಲಸಗಳನ್ನು ಹಣವಿಲ್ಲದೆ ಮಾಡಲು ಸಾಧ್ಯವೇ ?: ಮುಖ್ಯಮಂತ್ರಿ ಸಿದ್ದರಾಮಯ್ಯ*

Spread the love 2000 ಕೋಟಿ ವೆಚ್ಚದ ಅಭಿವೃದ್ಧಿ ಕೆಲಸಗಳನ್ನು ಹಣವಿಲ್ಲದೆ ಮಾಡಲು ಸಾಧ್ಯವೇ ?: ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಕ್ಕಬಳ್ಳಾಪುರ(ಶಿಡ್ಲಘಟ್ಟ), …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ