Breaking News

ದೇವರ ಹುಡುಕಾಟದಲ್ಲಿ ಗುರು-ಶಿಷ್ಯರ ಪಾತ್ರ ಮಹತ್ವವಾದದ್ದು: ಕೋಡಿಮಠದ ಶ್ರೀಗಳು

Spread the love

ಕುರುಗೋಡು : ಪ್ರತಿಯೊಬ್ಬರು ಪ್ರಜಾಪ್ರಭುತ್ವದಲ್ಲಿ ವಿದ್ಯಾ ಪಡಿಯಬೇಕು ಅಂದ್ರೆ ಮೊದಲು ಮಾನವೀಯತೆ ಹೊಂದಿರಬೇಕು ಎಂದು ಅರಸೀಕೆರೆ ತಾಲೂಕಿನ ಹಾರನಹಳ್ಳಿಯ ಕೋಡಿಮಠದ ಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ಅಭಿಮತ ವ್ಯಕ್ತಪಡಿಸಿದರು.

 

ಸಮೀಪದ ಬಾದನಹಟ್ಟಿ ಗ್ರಾಮದ ಯಲ್ಲಾಪುರ ರಸ್ತೆಯ ಶ್ರೀ ನಂದಿ ರೆಸಿಡೆನ್ಸಿಯಲ್ ಪಬ್ಲಿಕ್ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಶ್ರೀ ನಂದಿ ಚಿತ್ತಾರ 5ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅಶ್ರಿವಚನ ನೀಡಿ ಮಾತನಾಡಿದ ಅವರು, ದೇವರ ಹುಡುಕಾಟದಲ್ಲಿ ಹಾದಿ ತಪ್ಪುವ ಆತ್ಮಗಳನ್ನು ಮತ್ತೆ ಸರಿದಾರಿಗೆ ತರುವ ಕೆಲಸ ಗುರು ಶಿಷ್ಯರ ಸಂಬಂಧ ಮಾಡುತ್ತದೆ. ಮೊದಲಲ್ಲಿ ಇದನ್ನು ಅನೇಕ ಆಧ್ಯಾತ್ಮಿಕ ಹಾದಿಗಳು ಮತ್ತು ಗುರುಗಳ ನಡುವೆ ತುಲನೆ ಮಾಡುವುದು ಒಳಿತು ಎಂದರು.

ಶಿಕ್ಷಕರೆಂದರೆ ಪಾಠ ಭೋದಿಸುವವರು ಮಾತ್ರವಲ್ಲ. ಸನ್ಮಾರ್ಗದಲ್ಲಿ ನಡೆಯುವಂತೆ ದಾರಿ ತೋರುವ ಮಾರ್ಗದರ್ಶಕರು. ಪಠ್ಯದ ಜತೆಗೆ ಜೀವನ ಮೌಲ್ಯ ತುಂಬುವ ಗುರುಗಳು ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತಾರೆ. ಇದೇ ಕಾರಣಕ್ಕೆ ನಮ್ಮ ಸಂಸ್ಕೃತಿಯಲ್ಲಿ ಶಿಕ್ಷಕರಿಗೆ ಮಹತ್ವದ ಸ್ಥಾನ ಕಲ್ಪಿಸಲಾಗಿದೆ. ಗುರುವನ್ನು ದೇವರಿಗೆ ಹೋಲಿಸಲಾಗುತ್ತದೆ ಎಂದು ತಿಳಿಸಿದರು.

ಪರ ದೇಶದ ಜನರು ಭಾರತೀಯ ಸಂಸ್ಕೃತಿಯನ್ನು ಮತ್ತು ಜನರನ್ನು ಇವತ್ತಿನ ದಿನಗಳಲ್ಲಿ ಪ್ರೀತಿಸಿ ಆರಾದಿಸುತ್ತಿದ್ದಾರೆ, ಕಾರಣ ಭಾರತೀಯರು ದೇವರನ್ನು ಪ್ರೀತಿಸಿ, ಗೌರವಿಸಿ, ಆರಾದಿಸುವುದರಿಂದ ನಾವು ಭಾರತೀಯರನ್ನು ಹೆಮ್ಮೆಯ ಪ್ರೀತಿಸಿ ಗೌರವಿಸುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ತಿಳಿಸಿದರು.


Spread the love

About Laxminews 24x7

Check Also

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬೆಂಗಳೂರಿನ 57ನೇ ಸೆಷನ್ಸ್​ ನ್ಯಾಯಾಲಯ ವಜಾಗೊಳಿಸಿದೆ.

Spread the love ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿದೆ. ಅರ್ಜಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ