ಬೆಂಗಳೂರು: ಶಾಸಕ ಬಸನಗೌಡ ಯತ್ನಾಳ್ ವಿರುದ್ಧ ಏಕವಚನದಲ್ಲಿ ಗುಡುಗಿದ ಸಚಿವ ಮುರುಗೇಶ್ ನಿರಾಣಿ, ಭಾವೋದ್ರಿಕ್ತರಾಗಿ ಪ್ರತಿಕ್ರಿಯಿಸುವಾಗ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು.
ಸಿಎಂ ಅಧಿಕೃತ ನಿವಾಸ ರೇಸ್ ವ್ಯೂ ಬಳಿ ಸುದ್ದಿಗಾರರಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ವಿಜಯಪುರದವರು ಒಬ್ಬರಿದ್ದಾರೆ.
ಎಲುಬಿಲ್ಲದ ನಾಲಿಗೆ ಇಲ್ಲದೆ ಮಾತನಾಡುತ್ತಿದ್ದಾರೆ. ನನ್ನನ್ನು ಪಿಂಪ್ ಎಂದು ಕರೆದಿದ್ದಾರೆ. ಅಪ್ಪನಿಗೆ ಹುಟ್ಟಿದವರು ಈ ರೀತಿ ಮಾತನಾಡಲ್ಲ. ಆ ಸಂಸ್ಕೃತಿಯಲ್ಲಿ ಇದ್ದವರೆ ಆ ರೀತಿ ಮಾತನಾಡುತ್ತಾರೆ. ಒಳ್ಳೆಯ ಮನೆತನವಿದ್ದವರೂ ಈ ರೀತಿ ಮಾತನಾಡಲ್ಲ. ನಾಲಿಗೆ ಹರಿಬಿಟ್ಟು ಮಾತನಾಡಿದರೆ ನಾಲಿಗೆ ಕತ್ತರಿಸುವ ಕೆಲಸವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಗೆ ಬಂದಮೇಲೆ ಮುಸ್ಲಿಮರು, ಹಿಂದುತ್ವದ ಬಗ್ಗೆ ಮಾತನಾಡುವ ಮೂಲಕ ಎಡಬಿಡಂಗಿತನ ಪ್ರದರ್ಶಿಸುತ್ತಿದ್ದಾರೆ. ಬಾಯಿ ಮುಚ್ಚಿಕೊಂಡು ಇರಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ. ಪಕ್ಷದಲ್ಲಿ ಇರೋಕೆ ಆಗಲ್ಲವೆಂದರೆ ರಾಜೀನಾಮೆ ಕೊಟ್ಡು ಹೊರಗೆಹೋಗಿ ಪ್ರತಿಭಟನೆ ಮಾಡಬೇಕು ಎಂದು ಸವಾಲೆಸೆದರು. ಇಂತಹ ಆಟಕ್ಕೆ ವಿಜಯಪುರದ ಜನ ಉತ್ತರ ಕೊಡುತ್ತಾರೆ ಎಂದು ಯತ್ನಾಳ್ ಹೆಸರೆತ್ತದೆ ನಿರಾಣಿ ಕಿಡಿಕಾರಿದರು.
Laxmi News 24×7