Breaking News

ಸಂಗೊಳ್ಳಿ ರಾಯಣ್ಣನ ಕೀರ್ತಿ ಅಜರಾಮರ: ಸಂಸದೆ ಮಂಗಲಾ ಅಂಗಡಿ

Spread the love

ಬೈಲಹೊಂಗಲ: ನಾಡಿನ ಬಗ್ಗೆ ಅಭಿಮಾನ ಇಟ್ಟುಕೊಂಡು ದೇಶಪ್ರೇಮವನ್ನು ಮೆರೆದ ಶೂರ ಸಂಗೊಳ್ಳಿ ರಾಯಣ್ಣನ ಕೀರ್ತಿ ಅಜರಾಮರ ಎಂದು ಸಂಸದೆ ಮಂಗಲಾ ಅಂಗಡಿ ಹೇಳಿದರು.

ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಉತ್ಸವ 2023 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಗೊಳ್ಳಿ ರಾಯಣ್ಣನ ಸ್ವಾಭಿಮಾನವನ್ನು ಬೆಳೆಸಿಕೊಳ್ಳಬೇಕು.ಇಂದಿನ ಯುವಕರು ದುಶ್ಚಟಗಳನ್ನು ತೊರೆದು ಸಂಗೊಳ್ಳಿ ರಾಯಣ್ಣನ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

 

ಶಾಸಕ ಮಹಾಂತೇಶ ಕೌಜಲಗಿ,ಎಂಎಲ್ ಸಿ ಎಂ.ನಾಗರಾಜ ಯಾದವ,ಶಾಸಕ ಮಹಾಂತೇಶ ದೊಡ್ಡಗೌಡರ, ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ಸಂಗೊಳ್ಳಿ ರಾಯಣ್ಣನ ಆದರ್ಶಗಳು ಇಂದಿನ ಯುವಕರಿಗೆ ಪ್ರೇರೆಪಣೆಯಾಗಬೇಕು.ಆರೂವರೆ ಕೋಟಿ ಕನ್ನಡಿಗರ ಉತ್ಸವ ಸಂಗೊಳ್ಳಿ ರಾಯಣ್ಣ ಉತ್ಸವ ಆಗಬೇಕು.ಉತ್ಸವಗಳು ಜಾತ್ರೆಯಾಗಬಾರದು.ದೇಶಕ್ಕಾಗಿ ಹೋರಾಡಿದ ಸಂಗೊಳ್ಳಿ ರಾಯಣ್ಣನಂತೆ ದೇಶಭಕ್ತಿ ಬೆಳೆಸಿಕೊಳ್ಳಬೇಕೆಂದರು.

ಜಿಲ್ಲಾಧಿಕಾರಿ ನಿತೇಶ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡಾಂಬೆಯ ಅಭಿವೃದ್ದಿಗೆ ಕಂಕಣಬದ್ದರಾಗಿದ್ದ ಕಿತ್ತೂರ ನಾಡಿಗೆ ದುಡಿದು ಮಡಿದ ಮಹಾನ್ ಪುರುಷ ಸಂಗೊಳ್ಳಿ ರಾಯಣ್ಣ ಬಲಿದಾನ ಅವಿಸ್ಮರಣೀಯವಾಗಿದೆ.

ಬ್ರಿಟಿಷರ ವಿರುದ್ದ ಹೋರಾಡಿ ದಿಟ್ಟ ಉತ್ತರ ನೀಡಿದ ಅವರು ಕಿತ್ತೂರ ರಾಜ ಮಲ್ಲಸರ್ಜ ನಿಧನದ ನಂತರ ಕಿತ್ತೂರ ಚೆನ್ನಮ್ಮನ ಬಲಗೈ ಬಂಟನಾಗಿ , ಸ್ವಾಭಿಮಾನಿಯಾಗಿ ಬೆಳೆದು ನಿಂತವರು.ತಂದೆ ಭರಮಪ್ಪನ ಸ್ಪೂರ್ತಿ ಯಿಂದ ಮುನ್ನುಗ್ಗಿ ಬಿಚಗತ್ತಿ ಚೆನಬಸಪ್ಪ, ಅಮಟೂರ ಬಾಳಪ್ಪ ನಂತ ಸಹಚರರನ್ನು ಬೆಳೆಸಿ ೧೮೨೩ ರಲ್ಲಿ ಬ್ರಿಟಿಷರ ವಿರುದ್ದ ಚೆನ್ಮಮ್ಮಾಜಿ ಜೊತೆ ನಿಂತ ಪ್ರಥಮ ವೀರ ಪ್ರಜೆಯಾಗಿದ್ದಾರೆ.ಚೆನ್ನಮ್ಮಾಜಿ ಯನ್ನು ಬ್ರಿಟಿಷರು ಬಂದಿಸಿದಾಗ ಅವರ ಆಶಯದಂತೆ ಹಂದಿಬಡಗನಾಥ , ದೇಶನೂರ ಗುಡ್ಡದಲ್ಲಿ ಇದ್ದು ಸೈನಿಕರನ್ನು ಕಟ್ಟಿಕೊಂಡು ಬ್ರಿಟಿಷರ ವಿರುದ್ದ ಹೋರಾಟಕ್ಕೆ ಅನಿಯಾದರು.ಸಂಪಗಾವದ ಕಚೇರಿಯನ್ನು ಸುಟ್ಟು ಕ್ರಾಂತಿಕಾರಿ ಮನೋಭಾವನೆ ಬೆಳೆಸಿಕೊಂಡರು.ನಂತರ ನಾಡದ್ರೋಹಿಗಳು ಬ್ರಿಟಿಷರಿಗೆ ಹಿಡಿದು ಕೊಟ್ಟರು‌.

ನಂತರ ನಂದಗಡದಲ್ಲಿ ರಾಯಣ್ಣನನ್ನು ಗಲ್ಲಿಗೇರಿಸಲಾಯಿತು.ಈಬಾರಿ ನಂದಗಡದಲ್ಲಿಯೂ ೫ ಲಕ್ಷ ರೂ‌.ಬಿಡುಗಡೆಗೊಳಿಸಿ ಉತ್ಸವ ಮಾಡಲಾಗಿದ್ದು, ಯುವಕರು ರಾಯಣ್ಣನ ಆದರ್ಶಗಳನ್ನು ಬೆಳೆಸಿಕೊಳ್ಳಲು ಕರೆ ನೀಡಿದರು.


Spread the love

About Laxminews 24x7

Check Also

ಮಹದಾಯಿ ಯೋಜನೆಗೆ ನಿಮ್ಮ ಮಿತ್ರಪಕ್ಷದ ಗೋವಾ ಸರ್ಕಾರದ ಒಪ್ಪಿಗೆ ತನ್ನಿ: ಹೆಚ್​ಡಿಕೆಗೆ ಪಾಟೀಲ್ ಪ್ರತಿಸವಾಲು

Spread the loveಗದಗ: ”ಗೋವಾದಲ್ಲಿ ನಿಮ್ಮದೇ ಮಿತ್ರಪಕ್ಷದ ಸರ್ಕಾರವಿದೆ. ಮಹದಾಯಿ ಯೋಜನೆಗೆ ಒಪ್ಪಿಗೆ ಕೊಡಿಸಿ. ಗೋವಾದ ಒಪ್ಪಿಗೆ ತೆಗೆದುಕೊಂಡು ಬನ್ನಿ” ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ