Breaking News

ಉಗ್ರನಿಂದ ಬಾಂಬ್‌ ಸ್ಫೋಟದ ಬೆದರಿಕೆ ಬಂದಿದೆ ಎಂದವನ ವಿರುದ್ಧ ಎಫ್‌ಐಆರ್‌

Spread the love

ಬೆಂಗಳೂರು: ಬಸವೇಶ್ವರ ನಗರದ ಖಾಸಗಿ ಶಾಲೆಗೆ ಬಾಂಬ್‌ ಬೆದರಿಕೆ ಇ-ಮೇಲ್‌ ಬಂದ ಬೆನ್ನಲ್ಲೇ ಪಾಕಿಸ್ತಾನದ ಉಗ್ರನೊಬ್ಬ ಬೆಂಗಳೂರಿನಲ್ಲಿ ಬಾಂಬ್‌ ಸ್ಫೋಟ (Bomb Threat) ಮಾಡುವುದಾಗಿ ಬೆದರಿಸಿದ್ದಾನೆ ಎಂದು ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ ಮಾಹಿತಿ ನೀಡಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.

8137885416 ನಂಬರ್‌ನಿಂದ ಸುನೀಲ್‌ ಕುಮಾರ್‌ ಎಂಬಾತ ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ (ಪೊಲೀಸ್‌ ಸಹಾಯವಾಣಿ-೧೧೨) ಫೋನ್‌ ಮಾಡಿದ್ದ. ನಂತರ ಆತನನ್ನು ಸಂಪರ್ಕಿಸಲು ಪೊಲೀಸರು ಯತ್ನಿಸಿದಾಗ ಆತ ಮೊಬೈಲ್ ಸ್ವಿಚ್‌ ಆಫ್‌ ಮಾಡಿದ್ದಾನೆ. ಹೀಗಾಗಿ ಕರೆ ಮಾಡಿದ ವ್ಯಕ್ತಿಯ ಉದ್ದೇಶವೇನು ಎಂಬ ಬಗ್ಗೆ ಅನುಮಾನಗಳು ಮೂಡಿದ ಹಿನ್ನೆಲೆಯಲ್ಲಿ ಸುನೀಲ್‌ ಕುಮಾರ್‌ ವಿರುದ್ಧ ವಿಧಾನಸೌಧ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಸುನೀಲ್‌ ಸಹಾಯವಾಣಿ ೧೧೨ಗೆ ಕರೆಮಾಡಿ, ಪಾಕಿಸ್ತಾನಿ ಟೆರರಿಸ್ಟ್ ಆದ ಪ್ರಶಾಂತ್‌ ಎಂ. ಬಾಲಕೃಷ್ಣ ಎಂಬಾತ ನನ್ನ ಮೇಲೆ ಅಟ್ಯಾಕ್ ಮಾಡಲು ಬಂದಿದ್ದಾನೆ. ಬೆಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಮಾಡುತ್ತೇನೆ ಎಂದು ಬೆದರಿಕೆಯೊಡ್ಡಿದ್ದಾನೆ. ಆತನ ವಿರುದ್ಧ ದೆಹಲಿ, ಕೊಯಮತ್ತೂರು ಹಾಗೂ ಬೆಂಗಳೂರಿನಲ್ಲೂ ಕೇಸ್‌ಗಳಿವೆ ಎಂದು ಹೇಳಿ ಕಾಲ್‌ ಕಟ್‌ ಮಾಡಿದ್ದ. ಮತ್ತೆ ಆ ನಂಬರ್‌ಗೆ ಪೊಲೀಸರು ಕರೆ ಮಾಡಿದಾಗ ಸ್ವಿಚ್ ಆಫ್ ಬಂದಿತ್ತು.

ಯಾವ ಕಾರಣಕ್ಕಾಗಿ ವ್ಯಕ್ತಿ ಪೊಲೀಸರಿಗೆ ಕರೆ ಮಾಡಿದ್ದ, ಆತನ ಉದ್ದೇಶ ಏನು ಎಂಬುದರ ಬಗ್ಗೆ ತನಿಖೆ ನಡೆಸಲು ವಿಧಾನಸೌಧ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ