ಮದುವೆಗೆ ಹೆಣ್ಣು ಸಿಗಲಿಲ್ಲವೆಂದು ವ್ಯಕ್ತಿಯೋರ್ವ ಮನನೊಂದು ಸ್ಮಶಾನದಲ್ಲಿಯೇ ಬೆಂಕಿ ಹಚ್ಚಿಕೊಂಡ ಘಟನೆ ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ನಡೆದಿದೆ.
ಸಂತೋಷ ಕೊರಡಿ (೩೦) ಎಂಬಾತನೇ ಬೆಂಕಿಹಚ್ಚಿಕೊಂಡಾತ. ತನಗೆ ವಯಸ್ಸಾದರೂ ಮದುವೆಗೆ ಕನ್ಯೆ ಸಿಗಲಿಲ್ಲವೆಂದು ಮನನೊಂದಿದ್ದು, ಅಲ್ಲದೇ ಮಾನಸಿಕ ಅಸ್ವಸ್ಥನಾಗಿದ್ದ ಯುವಕ ಅಮ್ಮಿನಬಾವಿ ಗ್ರಾಮದ ಸ್ಮಶಾನದಲ್ಲಿಯೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದೆನ್ನಲಾಗಿದೆ.
ಸಂತೋಷನಿಗೆ ದೇಹದ ಶೇಕಡಾ ಅರ್ಧದಷ್ಟು ಭಾಗ ಬೆಂಕಿಗೆ ಆಹುತಿಯಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದು, ತೀವ್ರ ಗಾಯಗೊಂಡ ಹಿನ್ನಲೆ ಹುಬ್ಬಳ್ಳಿ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.