Breaking News

ವಿಧಾನಸಭೆಯಲ್ಲಿ 2022-23ನೇ ಸಾಲಿನ ಪೂರಕ ಬಜೆಟ್ ಮಂಡಿಸಿದ ಸಿಎಂ ಬೊಮ್ಮಾಯಿ

Spread the love

ಬೆಳಗಾವಿ: ಬೆಳಗಾವಿ ಸುವರ್ಣಸವಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ 2022-23ರನೇ ಸಾಲಿನ ಪೂರಕ ಬಜೆಟ್ ಮಂಡಿಸಿದ್ದಾರೆ.

 

8001.13 ಕೋಟಿ ರೂ.ಗಳ ಪೂರಕ ಅಂದಾಜು ಮಂಡಿಸಿದ್ದಾರೆ. ಇನ್ನು, ರಾಜ್ಯ ಅಸೆಂಬ್ಲಿ ಚುನಾವಣೆ ಎದುರಿಗೆ ಇದ್ದು ಸಿಎಂ ಬಸವರಾಜ ಬೊಮ್ಮಾಯಿ ಫೆಬ್ರವರಿಯಲ್ಲಿ ತಾತ್ಕಾಲಿಕ ಬಜೆಟ್​ ಮಂಡಿಸಲಿದ್ದಾರೆ.ಡಿಸಾಸ್ಟರ್ ರೆಸ್ಪಾನ್ಸ್ ಫಂಡ್​​ಗೆ 1,396 ಕೋಟಿ ರೂ. ಮೀಸಲು, ಮನ್ರೇಗಾ ಯೋಜನೆಗೆ 750 ಕೋಟಿ ರೂಪಾಯಿ ಮೀಸಲು, ಇಂಧನ ಸೆಕ್ಟರ್​​ನಲ್ಲಿ ಈಕ್ವಿಟಿ ಖರೀದಿಗೆ 500 ಕೋಟಿ ರೂ, ಜನರಲ್​ ಅಸೆಂಬ್ಲಿ ಚುನಾವಣೆಗೆ 300 ಕೋಟಿ ರೂಪಾಯಿ, ರಾಜೀವ್ ಗಾಂಧಿ ಹೌಸಿಂಗ್ ಸೊಸೈಟಿ ಸ್ಕೀಂಗೆ 256 ಕೋಟಿ ರೂ, ರೈಲ್ವೆ ಯೋಜನೆಗೆ 250 ಕೋಟಿ, ನೀರಾವರಿ ಯೋಜನೆಗೆ 200 ಕೋಟಿ, ಐದು ಮೆಗಾ ಹಾಸ್ಟೆಲ್​​ಗಳ ನಿರ್ಮಾಣಕ್ಕೆ 200 ಕೋಟಿ ರೂ ಹಾಗೂ ಬಿಬಿಎಂಪಿಗೆ ಎರಡು ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ.


Spread the love

About Laxminews 24x7

Check Also

ವರದಕ್ಷಿಣೆ ಕಿರುಕುಳ ಆರೋಪ, ಐಎಸ್‌ಡಿ ಡಿವೈಎಸ್‌ಪಿ ವಿರುದ್ಧ ಎಫ್ಐಆರ್

Spread the love ಬೆಂಗಳೂರು : ಡಿವೈಎಸ್‌ಪಿಯೊಬ್ಬರ ವಿರುದ್ಧ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. 41 ವರ್ಷದ ಮಹಿಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ