Breaking News

ಮುಂದಿನ ಬಾರಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಪ್ಯಾಕೆಜ್ ​

Spread the love

ಹುಬ್ಬಳ್ಳಿ : ನಮ್ಮ‌ ರಾಜ್ಯದ ಬಾರ್ಡರ್ ಈಗಾಗಲೇ‌ ಸೀಲ್ ಆಗಿದೆ.

ಮಹಾರಾಷ್ಟ್ರ ಹಳ್ಳಿಗಳು ನಮಗೆ ಬೇಡ, ಮಹಾರಾಷ್ಟ್ರದ ಮಂತ್ರಿಗಳು ನಾಯಕರು‌ ಮುಖಂಡರು ಬೆಳಗಾವಿ‌ ಪ್ರವೇಶ ಮಾಡದೇ ಇದ್ದರೆ ಸಾಕು. ಜನ ನೆಮ್ಮದಿಯಿಂದ ಜೀವನ ಮಾಡ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.

ನಗರದ ವಿಮಾನ‌ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಿಕ್ಕೆ ಬರುತ್ತದೆ. ಬೆಳಗಾವಿ ಮತ್ತು ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಪ್ಯಾಕೇಜ್ ಘೋಷಣೆ‌ ಮಾಡುತ್ತೇವೆ. ಜನಕ್ಕೆ ಉದ್ಯೋಗ ಕಲ್ಪಿಸೋ‌ ಕೆಲಸ‌ ಮಾಡುತ್ತೇವೆ. ಈ ಭಾಗದ ಜನ ಕೆಲಸ ಅರಸಿ ಬೇರೆ ಊರಿಗೆ ವಲಸೇ ಹೊಗುವುದನ್ನ ತಪ್ಪಿಸುತ್ತೇವೆ‌. ಈಗಾಗಲೇ ಸುವರ್ಣಸೌಧ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.

ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಎರಡು ರಾಜ್ಯದವರನ್ನು ಕರೆದು ಮಾತನಾಡಿಸಿದ್ದರು. ಹೋಮ್ ಮಿನಿಸ್ಟರ್ ಮಾತಿಗೆ ಕಿಂಚಿತ್ತು ಕಿಮ್ಮತ್ತೆ‌ ಇಲ್ವಾ? ಇದು ಬಿಜೆಪಿಯವರ ಒಳ ವಿಚಾರ. ನಮಗೂ ಹಾಗೂ ಮಹಾರಾಷ್ಟ್ರ ರಾಜಕೀಯಕ್ಕೆ ಯಾವುದೇ ಸಂಬಂಧವಿಲ್ಲ, ನಮ್ಮ ನೆಲ, ಜಲ ನಮ್ಮ‌ ಹಕ್ಕು ಎಂದು ಹೇಳಿದರು.

ರಾಜ್ಯಾದ್ಯಂತ ಮಾಸ್ಕ್ ಕಡ್ಡಾಯ ವಿಚಾರವಾಗಿ ಮಾತನಾಡಿದ ಡಿಕೆಶಿ, ಬಸ್ ಯಾತ್ರೆ ಹಾಗೂ ಪಂಚರತ್ನ ಯಾತ್ರೆಯಲ್ಲಿ ಕೋವಿಡ್ ನಿಯಮ‌ ಪಾಲನೆ ಮಾಡಿ ಎಂಬ ಸುಧಾಕರ್ ಹೇಳಿಕೆ‌ಗೆ ಪ್ರತಿಕ್ರಿಯಿಸಿ, ಯಾತ್ರೆಯನ್ನ ಅವರು ಹೇಳಿದರೂ ನಾವು ಮಾಡುತ್ತೇವೆ, ಹೇಳದೇ ಇದ್ದರೂ ಮಾಡುತ್ತೇವೆ. ಸುಮ್ಮನೆ ಜನಗಳಿಗೆ ಭಯ ಹುಟ್ಟಿಸುವ ಕೆಲಸ ಮಾಡ್ತಿದ್ದಾರೆ. ಈಗಷ್ಟೇ ಜನ ಸುಧಾರಣೆ ಗೊಂಡಿದ್ದಾರೆ ಮತ್ತೆ ಜನರಲ್ಲಿ ದೊಡ್ಡ ಭಯ ಹುಟ್ಟಿಸುತ್ತಿದ್ದಾರೆ ಎಂದು ಹೇಳಿದರು.

ಒಕ್ಕಲಿಗರು‌ ಯಾರೂ ಭಿಕ್ಷುಕರಲ್ಲ: ಒಕ್ಕಲಿಗರಿಗೆ, ಲಿಂಗಾಯತರಿಗೆ ಶೇಕಡವಾರು‌ ಮೀಸಲಾತಿ‌ ವಿಚಾರಕ್ಕೆ ಪ್ರತಿಕ್ರಿಯಿಸಿ ಒಕ್ಕಲಿಗರು‌ ಯಾರೂ ಭಿಕ್ಷುಕರಲ್ಲ. ಒಕ್ಕಲಿಗರು ಅಂದರೆ ಅನ್ನದಾತ. ಭೂಮಿಗೆ ಶ್ರಮ‌ ಪಟ್ಟು ಕೆಲಸ ಮಾಡಿ, ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುವವರು. ಮೂರು ಪರ್ಸೆಂಟ್‌ಗೆ ಭಿಕ್ಷೆ ಬೇಡೊಕೆ ಹೋಗಿಲ್ಲ. ಅವರಿಗೇನು ಮೀಸಲಾತಿ ಇದೆ ಅದನ್ನ ಕೊಡಲಿ. ಜನಸಂಖ್ಯಾ ಆಧಾರದ ಮೇಲೆ ಯಾರಿಗೇನು ಸಿಗಬೇಕು ಅದು‌ ಸಿಗಲಿ.

ಬೇರೆಯವರ ಮೀಸಲಾತಿ ಕಿತ್ಕೊಂಡು ನಮಗೆ ಮೀಸಲಾತಿ ಕೊಡೋದು ಬೇಡ. ಮೂರು ಪರ್ಸೆಂಟ್ ನಾಲ್ಕು‌ ಪರ್ಸೆಂಟ್ ಕೊಡ್ತೀವಿ ಅಂದಿದ್ದಾರಂತೆ. ನಾವು ಭಿಕ್ಷುಕರಲ್ಲಾ, ನಮ್ಮ ಸಮುದಾಯ ಶೇ 12ರಷ್ಟು ಮೀಸಲಾತಿ ಇದೆ‌ ಅದನ್ನ ಕೊಟ್ಟರೆ ಸಾಕು, ಅದು‌ ನಮ್ಮ‌ ಹಕ್ಕು ನಾವು ಪಡಯುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿ ಮೊದಲನೇ ಪಟ್ಟಿಯನ್ನು ಜನವರಿ 31ನೇ ತಾರೀಖಿನೊಳಗೆ ಮುಗಿಸಿ‌ ಎಂದು ಹೇಳಿದ್ದೇವೆ . 2-3 ನೇ ತಾರೀಖಿನೊಳಗೆ ಪಟ್ಟಿ ನನ್ನ ಕೈ‌ ಸೇರಲಿದ್ದು. ಫೆಬ್ರವರಿ 15ನೇ ತಾರೀಖಿನೋಳಗೆ ಚರ್ಚೆ ಮಾಡಿ ಮೊದಲ ,ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.


Spread the love

About Laxminews 24x7

Check Also

ಸಿಎಂ ಫೋನ್ ಮಾಡಿ ಸಮಾಧಾನಪಡಿಸಿದ ಬಳಿಕ ಕರ್ತವ್ಯಕ್ಕೆ ಹಾಜರಾದ ASP ಭರಮನಿ

Spread the loveಧಾರವಾಡ/ಬೆಂಗಳೂರು: ಸ್ವಯಂ ನಿವೃತ್ತಿಗೆ ಕೋರಿಕೆ ಸಲ್ಲಿಸಿದ್ದ ಧಾರವಾಡ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ವಿ.ಭರಮನಿ ಅವರು ಸಿಎಂ ಸಮಾಧಾನಪಡಿಸಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ