Breaking News

B.J.P. ಪಕ್ಷದ ಐವತ್ತಕ್ಕೂ ಹೆಚ್ಚು ಕಾರ್ಯಕರ್ತರು ಅಧಿವೇಶನ ನಡೆಯುವ ಸಂದರ್ಭದಲ್ಲಿ ನುಗ್ಗಿ ಪ್ರತಿಭಟನೆ

Spread the love

ಅಧಿವೇಶನ ನಡೆಯುವ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಐವತ್ತಕ್ಕೂ ಹೆಚ್ಚು ಕಾರ್ಯಕರ್ತರು ನುಗ್ಗಿ ಪ್ರತಿಭಟನೆ ಮಾಡಿದ ಘಟನೆ ಜರುಗಿತು.

ಸುವರ್ಣಸೌಧದ ಪಶ್ಚಿಮ ದ್ವಾರ ವಿಐಪಿ ಗೇಟ್ ಬಳಿ ಭದ್ರತಾ ವೈಫಲ್ಯದಿಂದಾಗಿ ಈ ಘಟನೆ ಜರುಗಿದೆ. ಪೊಲೀಸ್ ಅನುಮತಿ ಇಲ್ಲದೇ
ದಾವಣಗೆರೆ ಜಿಲ್ಲಾ ಬಿಜೆಪಿ ಘಟಕದ ಕಾರ್ಯಕರ್ತರು ಏಕಾಏಕಿ ಪ್ರತಿಭಟನೆ ನಡೆಸಿದರು.

ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ವನ್ಯಜೀವ ಹತ್ಯೆ ಆರೋಪ ಹಿನ್ನೆಲೆ ಬಂಧನಕ್ಕೆ ಆಗ್ರಹಿಸಿ ಘೋಷಣೆ ಕೂಗಿದರು.
ಎಸ್ ಎಸ್ ಮಲ್ಲಿಕಾರ್ಜುನ್, ಶಾಮನೂರು ಶಿವಶಂಕರಪ್ಪ ವಿರುದ್ಧ ಆರೋಪ ಮಾಡಿದ ರೇಣುಕಾಚಾರ್ಯ ಅಂಡ್ ಬೆಂಬಲಿಗರಿಂದ ಹೈಡ್ರಾಮಾ ಮಾಡುವಾಗ ಸ್ಥಳಕ್ಕೆ ಆಗಮಿಸಿದ ಬೆಳಗಾವಿ ಪೋಲಿಸ್ ಕಮಿಷನರ್ ಬೋರಲಿಂಗಯ್ಯ ಪ್ರತಿಭಟನೆ ತಡೆಯಲು ಮುಂದಾದಾಗ ಪೊಲೀಸ್ ಮೇಲೆ ರೇಣುಕಾಚಾರ್ಯ ದರ್ಪ ತೋರಿ ನಮ್ಮದೇ ಸರ್ಕಾರ ಬಿಡ್ರಿ.. ಎಂದು ಪೊಲೀಸರಿಗೆ ರೇಣುಕಾಚಾರ್ಯ ಆವಾಜ್ ಹಾಕಿದರು.

ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಪ್ರತಿಭಟನಾಕಾರರು ಮಾಜಿ ಮಂತ್ರಿ ಎಸ್ ಎಸ್ ಮಲ್ಲಿಕಾರ್ಜುನ ಮಲ್ಲೇಶ್ವರದ ತಮ್ಮ ಫಾರ್ಮ ಹೌಸದಲ್ಲಿ ಪ್ರಾಣಿಗಳನ್ನು ಆಕ್ರಮವಾಗಿ ಕೂಡಿಟ್ಟು ವಧೆ ಮಾಡಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ಮೇಲೆ ಬೆಂಗಳೂರು ಸಿ ಸಿ ಬಿ ಮತ್ತು ದಾವಣಗೆರೆ ಅರಣ್ಯ ಅಧಿಕಾರಿಗಳು ರೇಡ್ ಮಾಡಿ ಪ್ರಾಣಿಗಳನ್ನು ರಕ್ಷಿಸಿದ್ದಾರೆ. ಅಲ್ಲದೆ ಕೆಲವರನ್ನು ಬಂಧಿಸಿದ್ದಾರೆ ಆದರೆ ಮುಖ್ಯ ಆರೋಪಿ ಎಸ್ ಎಸ್ ಮಲ್ಲಿಕಾರ್ಜುನ ಮೇಲೆ ಕೇಸ್ ದಾಖಲಾಗಿಲ್ಲಾ ಹಾಗೂ ಬಂಧಿಸಿಲ್ಲಾ ಇದನ್ನು ನಾವು ಖಂಡಿಸುತ್ತೆವೆ.

ಇದಕ್ಕೆ ಕಾರಣಿಭೂತರಾದ ಎಸ್ ಎಸ್ ಮಲ್ಲಿಕಾರ್ಜುನ ಮತ್ತು ಶಾಮನೂರು ಶಿವಶಂಕರಪ್ಪ ಇವರ ಮೇಲೆ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದರು.


Spread the love

About Laxminews 24x7

Check Also

ಬೆಳಗಾವಿ ಜಲಾಶಯಗಳಲ್ಲಿ ಜೀವಕಳೆ

Spread the love ಬೆಳಗಾವಿ: ಜಿಲ್ಲೆಯಲ್ಲಿ ಈ ಬಾರಿ ಪೂರ್ವ ಮುಂಗಾರು ಉತ್ತಮವಾಗಿದೆ. ಜೂನ್‌ ಅಂತ್ಯದವರೆಗೆ ಮುಂಗಾರು 286.46 ಮಿ.ಮೀ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ