Breaking News

ಅಯ್ಯಪ್ಪ ಮಾಲಾಧಾರಿಗಳಿಗೆ ಅನ್ನ ಪ್ರಸಾದ ವಿತರಿಸಿದ ಮುಸ್ಲಿಂ ಯುವಕರು

Spread the love

ಲ್ಲಿ ಜಾತಿ, ಧರ್ಮದ ಬೇಧವಿರಲಿಲ್ಲ. ತಿನ್ನುವ ಅನ್ನ, ಕುಡಿಯುವ ನೀರು ಒಂದೇ ಎಂಬ ಭಾವನೆಯಲ್ಲಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಮುಸ್ಲಿಂ ಯುವಕರು, ಅಯ್ಯಪ್ಪ ಮಾಲಾಧಾರಿಗಳಿಗೆ ಊಟ ಬಡಿಸಿ, ಕೋಮು ಸೌಹಾರ್ದತೆ ಮೆರೆದರು.

ತಮಿಳುನಾಡಿನ ಕೃಷ್ಣಗಿರಿ ಪಜಯಪಟ್ಟೈ ಮಿಲಾಡುನಾಬಿ ಇಸ್ಲಾಮಿಕ್ ಯುವಕರ ತಂಡ, ಪ್ರತಿವರ್ಷ ಗಣೇಶ ಚತುರ್ಥಿ ಸಮಯದಲ್ಲಿ ಭಕ್ತರಿಗೆ ಅನ್ನ ಪ್ರಸಾದ ಹಂಚುವುದು ಹಾಗೂ ಅಯ್ಯಪ್ಪ ಮಾಲಾಧಾರಿಗಳಿಗೆ ಪೂಜಾ ಸಾಮಗ್ರಿ ಮತ್ತು ಆಹಾರವನ್ನ ಒದಗಿಸುವ ಮೂಲಕ ಎರಡು ಧರ್ಮಗಳ ನಡುವಿನ ಸಾಮರಸ್ಯ ಮತ್ತು ಒಗ್ಗಟ್ಟನ್ನ ಪ್ರದರ್ಶಿಸುತ್ತೆ.

 

ಕಳೆದ ಐದು ವರ್ಷಗಳಿಂದಲೂ ಮುಸ್ಲಿಂ ಯುವಕರ ತಂಡ ಈ ಕಾರ್ಯವನ್ನ ತಪ್ಪದೇ ಪಾಲಿಸಿಕೊಂಡು ಹೋಗುತ್ತಿದೆ. ಅಷ್ಟೆ ಅಲ್ಲ Miladu Nabi ಇಸ್ಲಾಮಿಕ್ ಆರ್ಗೆನೈಜೆಷನ್ ಈ ಸಂದರ್ಭದಲ್ಲಿ ವಿಶೇಷ ಭಜನೆಯ ಕಾರ್ಯಕ್ರಮವನ್ನ ಹಮ್ಮಿಕೊಂಡಿರುತ್ತೆ. ಜೊತೆಗೆ ಅಯ್ಯಪ್ಪ ಮಾಲಾಧಾರಿಗಳ ಕುಟುಂಬದವರಿಗೂ ಆಹಾರ ಸಾಮಗ್ರಿಗಳನ್ನ ಕೊಡಲಾಗುತ್ತೆ.ಈ ರೀತಿಯ ಸೌಹಾರ್ದತೆಯುಕ್ತ ಕೆಲಸಗಳು ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಸಹಾಯಕವಾಗಿವೆ ಎಂಬುದು ಎಲ್ಲರ ಅಭಿಪ್ರಾಯವಾಗಿದೆ.


Spread the love

About Laxminews 24x7

Check Also

ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ

Spread the loveಕೋಲಾರ, ಜುಲೈ 07: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ