Breaking News

ಬೊಮ್ಮಾಯಿಗೆ ಹೈಕಮಾಂಡ್ ಬುಲಾವ್.. ಫಲಿಸುತ್ತಾ ಬಿಜೆಪಿ ನಾಯಕರ ತಂತ್ರಗಾರಿಕೆ..?

Spread the love

ಕಾಂಗ್ರೆಸ್ ಹೈಕಮಾಂಡ್ ಚುನಾವಣೆ ತಂತ್ರ ಮಾಡ್ತಿದ್ದಂತೆ ಇತ್ತ ಬಿಜೆಪಿ ಹೈಕಮಾಂಡ್ ತಂತ್ರ ರೂಪಿಸಲು ಪ್ಲಾನ್ ಮಾಡಿದೆ. ಅದಕ್ಕಾಗಿ ಬುಧವಾರದ ಮುಹೂರ್ತ ಫಿಕ್ಸ್ ಮಾಡಿರೋ ಕಮಲ ನಾಯಕರು, ಸಿಎಂ ಬೊಮ್ಮಾಯಿಗೆ ಬುಲಾವ್ ನೀಡಿದ್ದಾರೆ.

ಅವತ್ತು ಇಡೀ ದಿನ ದೆಹಲಿಯಲ್ಲಿ ರಾಜ್ಯ ಗೆಲ್ಲುವ ರಣತಂತ್ರದ ಬಗ್ಗೆಯೇ ಚರ್ಚೆ ನಡೆಯಲಿದೆ. ಗುಜರಾತ್ ಗೆದ್ದು ಬೀಗಿದ ಕೇಸರಿ ಬ್ರಿಗೇಡ್, ಕರ್ನಾಟಕದತ್ತ ಚಿತ್ತ ಹರಿಸಿದೆ. ಈಗಾಗಲೇ ಬಿಜೆಪಿ ಕೈಯಲ್ಲಿರೋ ಕರ್ನಾಟಕದಲ್ಲಿ ಮತ್ತೆ ಕಮಲ ಅರಳಿಸೋ ನಿಟ್ಟಿನಲ್ಲಿ ಇಡೀ ಹೈಕಮಾಂಡ್ ರಾಜ್ಯದ ಮೇಲೆ ಕಣ್ಣಿಟ್ಟಿದೆ. ಪಕ್ಷ ಸಂಘಟನೆ, ಚುನಾವಣೆ ಗೆಲುವುಗೆ ಬೇಕಾದ ರಣತಂತ್ರದ ಬಗ್ಗೆ ಚರ್ಚೆ ನಡೆಸಲು ಬುಧವಾರ ಸಿಎಂ ಬೊಮ್ಮಾಯಿ ದೆಹಲಿಗೆ ತೆರಳಲಿದ್ದಾರೆ.

ಸಿಎಂಗೆ ಹೈಕಮಾಂಡ್ ಬುಲಾವ್
ಗುಜರಾತ್​ನಲ್ಲಿ ದಾಖಲೆಯ ಗೆಲುವು ಸಾಧಿಸಿದ್ರೂ ಹಿಮಾಚಲ ಪ್ರದೇಶ ಕೈತಪ್ಪಿದ ಬೆನ್ನಲ್ಲೇ ಕರ್ನಾಟಕದ ಬಗ್ಗೆ ಬಿಜೆಪಿ ಹೈಕಮಾಂಡ್ ವರ್ಕೌಟ್ ಮಾಡೋದಕ್ಕೆ ಮುಂದಾಗಿದೆ. ನಾಲ್ಕೈದು ತಿಂಗಳಲ್ಲಿ ರಾಜ್ಯದಲ್ಲಿ ನಡೆಯಲಿರೋ ಮತಸಮರಕ್ಕೆ ಬಿಜೆಪಿ ಹೈಕಮಾಂಡ್ ಈಗಿಂದಲೇ ಭರ್ಜರಿ ತಯಾರಿಗೆ ಮುಂದಾಗಿದೆ. ಇದ್ರ ಮೊದಲ ಹಂತವಾಗಿ ಸಿಎಂ ಬಸವರಾಜ ಬೊಮ್ಮಾಯಿಯವ್ರನ್ನು ದೆಹಲಿಗೆ ಬರುವಂತೆ ಬುಲಾವ್ ಕೊಟ್ಟಿದೆ. ಹೀಗಾಗಿ ನಾಡಿದ್ದು ಬುಧವಾರ ಸಿಎಂ ಬಸವರಾಜ ಬೊಮ್ಮಯಿ ದೆಹಲಿಗೆ ತೆರಳಲಿದ್ದಾರೆ.


Spread the love

About Laxminews 24x7

Check Also

ಪ್ರಧಾನಿ ಮೋದಿ ಒಂದು ದಿನ ತಮ್ಮ ಕೃತ್ಯಗಳಿಗೆ ಪಶ್ಚಾತ್ತಾಪ ಪಡುತ್ತಾರೆ: ಮಲ್ಲಿಕಾರ್ಜುನ ಖರ್ಗೆ

Spread the loveಕಲಬುರಗಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಬದಲಾವಣೆ ಮಾಡಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುವಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ