ಹುಬ್ಬಳಿ/ಧಾರವಾಡ: ಗಾಂಜಾ ಮತ್ತಲ್ಲಿ ತೇಲಾಡಿ ಬೆತ್ತಲಾಗಿ ಸ್ವಾಮೀಜಿ ಕಂಡು ಹುಬ್ಬಳ್ಳಿ ಜನರು ಬೆಚ್ಚಿಬಿದ್ದಿದ್ದಾರೆ.
ಹುಬ್ಬಳ್ಳಿ ಶಬರಿ ನಗರದ ಅಯ್ಯಪ್ಪ ಸ್ವಾಮೀಜಿ ಮಠದ ಪೀಠಾದೀಶನ ಬೆತ್ತಲೆ ಪುರಾಣದ ವಿಡಿಯೋ ಸ್ಥಳೀಯ ಮಟ್ಟದಲ್ಲಿ ವೈರಲ್ ಆಗಿದೆ. ಮೋಹನ್ ಗುರು ಸ್ವಾಮೀಜಿ ಅವತಾರ ಕಂಡು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದು, ಆತನನ್ನು ಮಠದಿಂದ ಹೊರ ಕಳುಹಿಸಬೇಕೆಂಬ ಕೂಗು ಕೇಳಿ ಬಂದಿದೆ.

ನಂಗಾನಾಚ್ ಮೋಹನ್ ಸ್ವಾಮಿ ರಾತ್ರಿ ಕಂಠಪೂರ್ತಿ ಕುಡಿದು, ಗಾಂಜಾ ಹೊಡೆದು ಬೆತ್ತಲಾಗಿ ಕುಸಗಲ್ ರಸ್ತೆಯ ಸಿದ್ಧಾರೂಢ ಆಶ್ರಮದಲ್ಲಿ ಮಲಗಿದ್ದಾನೆ. ಬೆಳಗ್ಗೆ ಮಠಕ್ಕೆ ಭಕ್ತರು ಬಂದಾಗ ಸ್ವಾಮಿಯ ರಹಸ್ಯ ಬೆಳಕಿಗೆ ಬಂದಿದೆ. ಈ ಮೋಹನ್ ಗುರು ಸ್ವಾಮೀಜಿ ನೇತೃತ್ವದಲ್ಲಿಯೇ ಪ್ರತಿ ವರ್ಷ ನೂರಾರು ಜನರಿಗೆ ಮಾಲಾ ದೀಕ್ಷೆ ನೀಡಿ, ಅಂಬಾರಿ ಮೆರವಣಿಗೆ ಮಾಡಲಾಗಿದೆ.
Laxmi News 24×7