Breaking News

ಪತ್ನಿ ಮೃತ ದೇಹವನ್ನು ಮೂಟೆಯಲ್ಲಿ ಸಾಗಿಸಿದ ಪತಿ..!

Spread the love

ಶವ ಸಂಸ್ಕಾರ ನೆರವೇರಿಸಲು ಹಣವಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೃತ ದೇಹವನ್ನು ಪ್ಲಾಸ್ಟಿಕ್ ಮೂಟೆಯಲ್ಲಿ ಹಾಕಿಕೊಂಡು ಹೆಗಲ ಮೇಲೆ ಸಾಗಿಸುತ್ತಿದ್ದ ಆಘಾತಕಾರಿ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

 

ಘಟನೆಯ ವಿವರ: ರವಿ ಹಾಗೂ ಕಾಳಮ್ಮ ಎಂಬ ದಂಪತಿ ಪ್ಲಾಸ್ಟಿಕ್ ಆಯುವ ಕೆಲಸ ಮಾಡುತ್ತಿದ್ದು, ಯಳಂದೂರು ತಾಲೂಕಿನ ಕಂದಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬಳಿ ಪಾಳು ಬಿದ್ದಿರುವ ಮನೆಯಲ್ಲಿ ವಾಸವಾಗಿದ್ದರು.

 

ಇಬ್ಬರೂ ವಿಪರೀತ ಮದ್ಯ ವ್ಯಸನಿಗಳಾಗಿದ್ದು, ಇದರ ಮಧ್ಯೆ ಅನಾರೋಗ್ಯಕ್ಕೊಳಗಾಗಿದ್ದ ಕಾಳಮ್ಮ ಸೋಮವಾರ ರಾತ್ರಿ ಮೃತಪಟ್ಟಿದ್ದಾಳೆ. ಆಕೆಯ ಶವವನ್ನು ಪ್ಲಾಸ್ಟಿಕ್ ಮೂಟೆಯಲ್ಲಿ ಹಾಕಿಕೊಂಡು ರವಿ ಯಳಂದೂರು ಪಟ್ಟಣದ ಬೀದಿಯಲ್ಲಿ ಸಾಗುತ್ತಿದ್ದ ವೇಳೆ ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.


Spread the love

About Laxminews 24x7

Check Also

ಜಿಲ್ಲಾಮಟ್ಟದ ಕ್ರೀಡಾ ಕೂಟದಲ್ಲಿ ಸಾಧನೆ ಮಾಡಿದ ಸಿಬ್ಬಂದಿಯನ್ನು ಅಭಿನಂದಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌*

Spread the love ಜಿಲ್ಲಾಮಟ್ಟದ ಕ್ರೀಡಾ ಕೂಟದಲ್ಲಿ ಸಾಧನೆ ಮಾಡಿದ ಸಿಬ್ಬಂದಿಯನ್ನು ಅಭಿನಂದಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌* *ಗ್ರಾಮೀಣ ಕ್ಷೇತ್ರಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ