Breaking News

ನ್ಯೂಜಿಲೆಂಡ್​ ವಿರುದ್ಧ ಭಾರತಕ್ಕೆ 65 ರನ್​ಗಳ ಭರ್ಜರಿ ಗೆಲುವು, ಶತಕ ಸಿಡಿಸಿದ ಸೂರ್ಯಕುಮಾರ್

Spread the love

ಮೌಂಟ್​ ಮೌಂಗನುಯಿ: ಭಾರತ ಮತ್ತು ಆತಿಥೇಯ ನ್ಯೂಜಿಲೆಂಡ್​ ನಡುವಿನ ಟಿ-20 ಸರಣಿಯ ಎರಡನೇ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯ ಪಡೆ 65 ರನ್​ಗಳ ಭರ್ಜರಿ ಗೆಲುವು ಸಾಧಿಸಿದೆ.

ಮೊದಲ ಟ್ವೆಂಟಿ-20 ಅಂತಾರಾಷ್ಟ್ರಿಯ ಕ್ರಿಕೆಟ್​ ಪಂದ್ಯವು ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದಾಗಿತ್ತು.

ಬೇ ಓವಲ್​ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 2ನೇ ಪಂದ್ಯದಲ್ಲಿ ಟಾಸ್​ ಗೆದ್ದ ನ್ಯೂಜಿಲೆಂಡ್​ ತಂಡ, ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿತ್ತು. ಆರಂಭದಲ್ಲಿ ರನ್​ ಪೇರಿಸಲು ಹೆಣಗಾಡಿದ ಭಾರತ ತಂಡ, ನಂತರ ಉತ್ತಮ ಆಟ ಪ್ರದರ್ಶಿಸಿತು. ಭಾರತದ ಸೂರ್ಯಕುಮಾರ್​ 49 ಎಸೆತಗಳಲ್ಲಿ ಶತಕ ಬಾರಿಸಿದರು. ಒಟ್ಟು 51 ಬಾಲ್​ಗೆ 111 ರನ್​ ಗಳಿಸಿ ಔಟ್​ ಆಗದೆ ಉಳಿದರು.

20 ಓವರ್​ನಲ್ಲಿ 6 ವಿಕೆಟ್​ಗಳ ನಷ್ಟಕ್ಕೆ 191 ರನ್​ ಭಾರತ, ಎದುರಾಳಿ ತಂಡಕ್ಕೆ 192 ರನ್​ಗಳ ಗುರಿ ನೀಡಿತ್ತು. 18.5 ಓವರ್​ಗೆ ಆಲ್​ಔಟ್​ ಆದ ನ್ಯೂಜಿಲೆಂಡ್​ ತಂಡ, 126 ರನ್​ ಪಡೆದು ಹೀನಾಯ ಸೋಲು ಅನುಭವಿಸಿದೆ.

ಟೀಮ್​ ಇಂಡಿಯಾ ಭವಿಷ್ಯದ ಟಿ20 ತಂಡಕ್ಕಾಗಿ ಸೂಕ್ತ ಬ್ಯಾಟರ್​ಗಳನ್ನು ಹುಡುಕಾಟದಲ್ಲಿದ್ದು, ಹಂಗಾಮಿ ನಾಯಕನಾಗಿ ಹಾರ್ದಿಕ್​ ಪಾಂಡ್ಯಗೂ ಸರಣಿ ಮಹತ್ವ ಎನಿಸಿದೆ. ಭವಿಷ್ಯದ ನಾಯಕ ಎಂದೇ ಬಿಂಬಿತವಾಗಿರುವುದು ಕೊಂಚ ಒತ್ತಡ ಉಂಟುಮಾಡಿದೆ.

ಕಾಯಂ ನಾಯಕ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ, ಕೆಎಲ್​ ರಾಹುಲ್​ ಅನುಪಸ್ಥಿತಿಯಲ್ಲಿ ನ್ಯೂಜಿಲೆಂಟ್​ ವಿರುದ್ಧ ಹಾರ್ದಿಕ್​ ಪಾಂಡ್ಯ ನೇತೃತ್ವದಲ್ಲಿ ಆಟವಾಡಿದ ಭಾರತದ ಯುವ ಆಟಗಾರರು ಪಂದ್ಯ ಗೆದ್ದು, ಭರವಸೆ ಮೂಡಿಸಿದರು. ಟಿ20 ವಿಶ್ವಕಪ್​ನಲ್ಲಿ ಆಡಿದ ಭಾರತ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿರುವುದರಿಂದ ಯುವ ಆಟಗಾರರ ಬಳಗ ಕಣಕ್ಕಿಳಿದಿತ್ತು.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ