ನ.20ರೊಳಗೆ ಕಬ್ಬಿಗೆ ಹೆಚ್ಚುವರಿ ಬೆಂಬಲ ಘೋಷಣೆ

Spread the love

ಬೆಂಗಳೂರು : ರಾಜ್ಯ ಸರ್ಕಾರದ ಕಬ್ಬು ಖರೀದಿ ನಿಯಂತ್ರಣ ಮಂಡಳಿ ಹಾಗೂ ರಾಜ್ಯದ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ತೀರ್ಮಾನಮಾಡಿದ್ದಾರೆ.

ಎಫ್‌ಆರ್‌ಪಿ ಹೆಚ್ಚುವರಿ ದರ ನಿಗದಿಗೆ ಸಕ್ಕರೆ ಆಯುಕ್ತರ ಅಧ್ಯಕ್ಷತೆಯಲ್ಲಿ ತಾಂತ್ರಿಕ ಸಮಿತಿ ಐದು ದಿನದಲ್ಲಿ ವರದಿ ಕೊಡಲು ಸೂಚನೆ, 20ರ ಒಳಗಾಗಿ ವರದಿ ಆಧರಿಸಿ ಮುಖ್ಯಮಂತ್ರಿಗಳು ಹೆಚ್ಚುವರಿ ಬೆಲೆ ಘೋಷಣೆ ಮಾಡಲಿದ್ದಾರೆ ಎಂದು ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೆನ ಕೊಪ್ಪ ಸಬೆ ನಂತರ ತಿಳಿಸಿದರು

ಕಳೆದ 11 ದಿನದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಹೂ ರಾತ್ರಿ ಧರಣಿ ಚಳುವಳಿ ನಡೆಸುತ್ತಿರುವ ರೈತರ ಜೊತೆ ಚರ್ಚಿಸಿ , ತಾತ್ಕಾಲಿಕವಾಗಿ ಚಳುವಳಿ ಕೈ ಬಿಡಲು ತೀರ್ಮಾನಿಸಲಾಯಿತು ಸರ್ಕಾರದ ನಿರ್ಧಾರ ಬಾರದಿದ್ದರೆ 21ರಿಂದ ಬೆಂಗಳೂರಿನಲ್ಲಿ ರಾಜ್ಯದ ಕಬ್ಬು ಬೆಳೆಗಾರ ಸಂಘಟನೆಯ ಪದಾಧಿಕಾರಿಗಳು ರೈತರು ನಿರಂತರ ಧರಣಿ ನಡೆಸಲು ತೀರ್ಮಾನಿಸಲಾಗದೆ ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು

ರಾಜ್ಯದ ಕಬ್ಬು ಬೆಳೆಗಾರ ರೈತರು ಹಲವು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ 10 ದಿನಗಳಿಂದ ನಿರಂತರ ಆವೂ ರಾತ್ರಿ ಧರಣಿ ನಡೆಸುತ್ತಿದ್ದಾರೆ ಆ ರೈತರ ಪರವಾದ ಒತ್ತಾಯಗಳು

ಕಬ್ಬಿನ ಉತ್ಪಾದನಾ ವೆಚ್ಚ 20ರಷ್ಟು ಏರಿಕೆಯಾಗಿದೆ ರಸಗೊಬ್ಬರ, ಡೀಸೆಲ್ ಬೀಜ, ಕೂಲಿ ಸಾಗಾಣಿಕೆ ಏರಿಕೆಯಾಗಿದೆ, ಕೇಂದ್ರ ಸರ್ಕಾರ ನಿಗದಿ ಮಾಡಿರುವ ಎಫ್ ಆರ್ ಪಿ ಬೆಲೆ, ಇಳುವರಿ ಆಧಾರ ಪರಿಗಣಿಸುವ ಕಾರಣ ರೈತರಿಗೆ ಕಳೆದ ವರ್ಷಕ್ಕಿಂತ ಪ್ರತಿ ಟನ್ಗೆ ಸರಾಸರಿ 50ರೂ ರಷ್ಟು ಕಡಿಮೆ ಹಣ ಸಿಗುತ್ತಿದೆ ಈ ಅನ್ಯಾಯ ಸರಿಪಡಿಸಬೇಕು

ಕಬ್ಬಿನ ಎಫ್ ಆರ್ ಪಿ ದರ ಹೆಚ್ಚುವರಿ ಮಾಡಬೇಕು ಕನಿಷ್ಠ 3500 ಎಫ್‌ಆರ್‌ಪಿ ಕನಿಷ್ಟ ದರ ನಿಗದಿಯಾಗಬೇಕು, ಅಥವಾ ರಾಜ್ಯ ಸಲಹಾ ಬೆಲೆ SAP ನಿಗದಿ ಮಾಡಬೇಕು. ಕಬ್ಬು ಕಟಾವು ಸಾಗಾಣಿಕೆ ವೆಚ್ಚ ಕಳೆದ ವರ್ಷಕ್ಕಿಂತ 250- 300 ಏರಿಕೆ ಕಾರಣ ಕಬ್ಬಿನ ಉಪ ಉತ್ಪನ್ನಗಳ ಲಾಭ, ಯಥನಾಲ್ ಲಾಭ ಸೇರಿಸಿ ಹೆಚ್ಚುವರಿ ರಾಜ್ಯ ಸಲಹಾ ಬೆಲೆ ನಿಗಧಿ ಮಾಡಬೇಕು,

ಕಬ್ಬಿನ ಕಟಾವು ವಿಳಂಬ ಮಾಡುವ ಕಾರ್ಖಾನೆಗಳು ಕಟಾವಿನ ವಿಳಂಬದ ಅವಧಿಗೆ, ನಾಲ್ಕೈದು ತಿಂಗಳ ಅವಧಿಗೆ, ಶೇಕಡ 15ರಷ್ಟು ಹೆಚ್ಚುವರಿ ಬಡ್ಡಿ ಸೇರಿಸಿ ಕೊಡಬೇಕು ಇದರಿಂದ ರೈತರಿಗೆ ತೂಕದಲ್ಲಿ ,ಇಳುವರಿಯಲ್ಲಿ, ಸಾಲದ ಬಡ್ಡಿ ಪಾವತಿಯಲ್ಲಿ ನಷ್ಟವಾಗುವುದು ತಪ್ಪುತ್ತದೆ, ಕಟಾವು ಕೂಲಿಕಾರರು ಸರ್ಕಾರ ನಿಗದಿ ಮಾಡಿದ ಹಣಕ್ಕಿಂತ ರೈತರಿಂದ ಹೆಚ್ಚುವರಿ ಹಣ ವಸೂಲಿ ಮಾಡುವ ಸಂದರ್ಭದಲ್ಲಿ, ಆಯಾ ಕಾರ್ಖಾನೆಗಳನ್ನು ಜವಾಬ್ದಾರಿ ಮಾಡಿ ಕಾರ್ಖಾನೆಗಳಿಂದ ವಸೂಲಿ ಮಾಡಿ ವಾಪಸ್ ರೈತರಿಗೆ ಕೊಡಿಸಬೇಕು

ಉತ್ತರ ಪ್ರದೇಶದಲ್ಲಿ ಪ್ರತಿ ಟನ್ ಗೆ 3500, ಪಂಜಾಬ್ ರಾಜ್ಯದಲ್ಲಿ 3800 ನಿಗದಿ ಮಾಡಿದ್ದಾರೆ

ಆಂಧ್ರಪ್ರದೇಶದಲ್ಲಿ 9.5 ಇಳುವರಿ ಬರುವ ಕಬ್ಬಿಗೆ ಎಫ್ ಆರ್ ಪಿ ದರಕ್ಕಿಂತ ಹೆಚ್ಚುವರಿಗಾಗಿ 300 ರೂ ನಿಗದಿ ಮಾಡಿ ರೈತರಿಗೆ ಕೂಡಿಸುತ್ತಾರೆ, ಅದೇ ರೀತಿ ರಾಜ್ಯದಲ್ಲಿ ಹೆಚ್ಚು ಇಳುವರಿರುವ ಕಾರಣ ಕನಿಷ್ಠ 500 ಗಳು ಹೆಚ್ಚುವರಿಯಾಗಿ ನಿಗದಿ ಮಾಡಬೇಕು

ತಮಿಳುನಾಡಿನಲ್ಲಿ ಕಬ್ಬು ಸಾಗಾಣಿಕೆ ವೆಚ್ಚವನ್ನು ಸಕ್ಕರೆ ಕಾರ್ಖಾನೆಗಳೆ ಸಂಪೂರ್ಣವಾಗಿ ಭರಿಸುತ್ತವೆ, ಹಾಗೂ ರಾಜ್ಯ ಸರ್ಕಾರ ಪ್ರತಿ ಟೆನ್ಗೆ 190ರೂ ಗಳನ್ನು ರೈತರ ಖಾತೆಗೆ ಸಹಾಯಧನ ನೇರವಾಗಿ ನೀಡುತ್ತದೆ ಇದನ್ನು ಪರಿಗಣಿಸಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು

ತೆಲಂಗಾಣ ರಾಜ್ಯದಲ್ಲಿ ಪ್ರತಿ ಎಕರೆ ಕಬ್ಬು ಬೆಳೆಯಲು 5,000 ಸಹಾಯಧನ ನೀಡುತ್ತಾರೆ, ಟನ್ ಕಬ್ಬಿಗೆ 3150 ನಿಗದಿ ಮಾಡಿದೆ,

ಸಕ್ಕರೆ ಕಾರ್ಖಾನೆಗಳ ಮಾಲೀಕರೇ ಕಟಾವು ಕೂಲಿಕಾರರನ್ನು ಕರೆದುಕೊಂಡು ಬರುವ ಕಾರಣ ಲಾರಿ ಟ್ರ್ಯಾಕ್ಟರ್ ಮಾಲೀಕರು, ಅವರ ಅಧೀನದಲ್ಲಿ ಇರುವ ಕಾರಣ, ರಾಜ್ಯಾದ್ಯಂತ ಏಕ ರೀತಿಯಲ್ಲಿ ಕಟಾವು ಸಾಗಾಣಿಕೆ ಹೊಣೆಯನ್ನು ಸಂಪೂರ್ಣವಾಗಿ ಕಾರ್ಖಾನೆಗಳಿಗೆ ವಹಿಸಬೇಕು, ರೈತರ ಹೊಲದಲ್ಲಿನ ದರ ಎಂದು ನಿಗದಿಪಡಿಸಬೇಕು, ಇದರಿಂದ ತೂಕದಲ್ಲಿ ಮೋಸ, ಸಕ್ಕರೆ ಇಳುವರಿಯಲ್ಲಿ ಮೋಸ, ಕಟಾವು ಸಾಗಾಣಿಕೆಯಲ್ಲಿ ಮೋಸ ವಿಳಂಬ ತಪ್ಪುತ್ತದೆ,

ಕಬ್ಬಿನ ಬಿತ್ತನೆ, ದ್ವಿಪಕ್ಷಿಯ ಒಪ್ಪಂದ, ಜೇಷ್ಠತೆ ಆಧಾರದ ಕಟಾವು, ಕಬ್ಬಿನ ತೂಕ, ಹಣ ಪಾವತಿ, ಸಕ್ಕರೆ ಇಳುವರಿ, ಡಿಜಿಟಲಿಕರಣಗೂಳಿಸ ಬೇಕು, ಇದರಿಂದ ರೈತರಿಗೆ ಮೋಸವಾಗುವುದು ತಪ್ಪುತ್ತದೆ,

ಇಂದಿನ ಸಭೆಯಲ್ಲಿ ಮೇಲಿನ ಒತ್ತಾಯಗಳ ಬಗ್ಗೆ ರಾಜ್ಯ ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು ಒತ್ತಾಯಿಸಲಾಗಿದೆ, ಆದರೆ ರಾಜ್ಯ ಸರ್ಕಾರ ನಾಲ್ಕು ಬಾರಿ ಸಭೆ ನಡೆಸಿದರು ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ ರೈತರು ಬೇಸರಗೊಂಡಿದ್ದಾರೆ, ರಾಜ್ಯದ್ಯಂತ ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕಳೆದ 10 ದಿನಗಳಿಂದ ನಿರಂತರ ಆಹೂ ರಾತ್ರಿ ಧರಣಿ ನಡೆಸುತ್ತಿದ್ದಾರೆ ಇದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರದ ನಿರ್ಧಾರ ಪ್ರಕಟಣೆಯಾಗಬೇಕು ಎಂದು ರಾಜ್ಯದ ಕಬ್ಬು ಬೆಳೆಗಾರರ ಪರವಾಗಿ ರಾಜ್ಯಾಧ್ಯಕ್ಷರು ಒತ್ತಾಯಿಸಿದರು ಸಭೆಯಲ್ಲಿ ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ,
ಕಬ್ಬು ಅಭಿವೃದ್ಧಿ ಆಯುಕ್ತರು ಶಿವಾನಂದ ಕೆಲಗೇರಿ, ರೈತ ಪ್ರತಿನಿಧಿ ಸಿದ್ದುಗೌಡ ಮೋದಗಿ, ಬಸವರಾಜ್,
ಮಂಡ್ಯ ವೆಂಕಟೇಶ್, ಬೆಳವಣಿಗೆ ಬಸಪ್ಪ, ಮುಂತಾದವರಿದ್ದರು


Spread the love

About Laxminews 24x7

Check Also

Bigg Boss ಸೀಸನ್​-11ಕ್ಕೆ ಎಂಟ್ರಿ ಪಡೆದ ನಾಲ್ವರು ಸ್ಫರ್ಧಿಗಳು

Spread the love ಬೆಂಗಳೂರು: ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್​ಬಾಸ್ (Bigg Boss)​ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿಯೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ