ಬೆಳಗಾವಿ: ನಗರದಲ್ಲಿ ಇಂದು ವಿವಿಧ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಅನಿಲ ಬೆನಕೆ ಅವರು ತಮ್ಮ ಅಭಿವೃದ್ಧಿ ಪರ್ವ ಮತ್ತೆ ಮುಂದುವರೆಸಿದ್ದಾರೆ,
ನಗರದಲ್ಲಿ ಇಂದು ಕೊನವಾಲ್ ಗಲ್ಲಿಯಲ್ಲಿ
36 ಲಕ್ಷ ವೆಚ್ಚದಲ್ಲಿ ಪವರ್ಸ್ ಮತ್ತು ಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ, ರೇಡಿಯೋ ಕಾಂಪ್ಲೆಕ್ಸ್ ಬಳಿ ಚರಂಡಿ ಕಾಮಗಾರಗೆ 21 ಲಕ್ಷ, ರಾಮಲಿಂಗ ಖಿಂಡಗಲ್ಲಿಯಲ್ಲಿ ರಸ್ತೆ ಕಾಮಗಾರಿಗೆ 31 ಲಕ್ಷ, ಅನ್ಸುರಕರ್ ಗಲ್ಲಿಯಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ 16 ಲಕ್ಷ, ಹಾಗೂ ಕೆಳಕರ್ ಬಾಗನಲ್ಲಿ ರಸ್ತೆ ಕಾಮಗಾರಿಗೆ 56 ಲಕ್ಷ ಹೀಗೆ ಒಟ್ಟು 3.90 ಕೋಟಿ ರೂಪಾಯಿ ವೆಚ್ಚದ ಕಾಮಗಾರಗೆ ಶಾಸಕ ಅನಿಲ ಬೆನಕೆ ಅವರು ಚಾಲನೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಶಾಸಕ ಅನಿಲ ಬೆನಕೆ ಅವರು, ನಮ್ಮ ಕ್ಷೇತ್ರದಲ್ಲಿ ಇಂದು ರಸ್ತೆ, ಚರಂಡಿ, ಪೆವರ್ಸ್ ಕಾಮಗಾರಿಗೆ ಚಾಲನೆ ನೀಡಿದ್ದೇವೆ,ಒಟ್ಟು 3.90 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕಾಮಗಾರಿ ನೋಡಿಕೊಳ್ಳಲು ಜನರನ್ನು ನೇಮಿಸಲಾಗಿದೆ. ಅದ್ದರಿಂದ ಕಾಮಗಾರಿಗಳು ಗುಣಮಟ್ಟದಾಗಲಿದೆ. ಇನ್ನು ಮುಂದಿನ ದಿನಗಳಲ್ಲಿ ಹೀಗೆ ನಮ್ಮ ಅಭಿವೃದ್ಧಿ ಪರ್ವ ಮುಂದುವರೆಸಲಿದ್ದೇವೆ ಎಂದು ತಿಳಿಸಿದರು.
ನಗರ ಸೇವಕಾರಾದ ಸಂತೋಷ ಪೆಡ್ನೆಕರ್, ಜಯತೀರ್ಥ ಕಟ್ಟಿ, ಅಬಿಜೀತ್ ಸುನಗಾರ, ಬಾಳು ಮಾಸನಕರ್, ರಾಮಾ ಶಿಂದೋಳಕರ್, ಶಶಿಕಾಂತ ಶಿರೋಳ, ಅಶೋಕ್ ಥೋರಾಟ್, ನಿಖಿಲ ನರಸಗೌಡಾ, ಪ್ರದೀಪ್ ಕಿಲ್ಲೆಡಕರ್, ಸುಭಾಷ್ ಹಂಡೆ, ಗುರುರಾಜ ಆಚಾರ್ಯ, ಪ್ರಸಾದ ಲಿಂಗಡೆ, ನಿತೀನ್ ಕೊಲ್ಹಾಪುರೆ, ನಿರ್ಮಲಾ ಕಾಳೆ, ಚಂದ್ರಕಲಾ, ಸೌರಬ್ ಸಾವಂತ, ಅನಿಕೇತ ದಾಸಾನಿ, ಪರೇಶ್ ಶಿಂಧೆ ಸೇರಿದಂತೆ ಮತ್ತಿತರರು