Breaking News

ಅಲೋಕ್ ಕುಮಾರ್ ಯಾರು?.. ಪೊಲೀಸರ ಜೊತೆಗೆ ಶಾಸಕ ರೇಣುಕಾಚಾರ್ಯ ವಾಗ್ವಾದ … ವಿಡಿಯೋ!

Spread the love

ದಾವಣಗೆರೆ: ಸಹೋದರ ಮಗ ಚಂದ್ರು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎಂಪಿ ರೇಣುಕಾಚಾರ್ಯ ಪೊಲೀಸರ ಜೊತೆಗೆ ವಾಗ್ವಾದ ನಡೆಸಿದ್ದಾರೆ. ಇದೇ ವೇಳೆ ರೇಣುಕಾಚಾರ್ಯ ಹೊನ್ನಾಳಿ ಪೊಲೀಸ್​ ಠಾಣೆಯ ಸಿಪಿಐ ಸಿದ್ದನಗೌಡರವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

 

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಸೊರಟೂರು ಬಳಿಯ ತುಂಗಾ ಕಾಲುವೆಯಲ್ಲಿ ಮೃತ ಚಂದ್ರು ಶವದೊಂದಿಗೆ ಪತ್ತೆಯಾದ ಕಾರನ್ನು ಈಗಾಗಲೇ ಪೋಲಿಸರ ವಶದಲ್ಲಿದೆ. ಚಂದ್ರು ಶವವಾಗಿ ಪತ್ತೆಯಾದ ಕಾರನ್ನು ಹೊನ್ನಾಳಿ ಪೋಲಿಸ್ ಠಾಣೆ ಬಳಿ ನಿಲ್ಲಿಸಲಾಗಿದ್ದು, ತಮ್ಮ ಮಗನ ಕಾರನ್ನು ವೀಕ್ಷಿಸಲು ಶಾಸಕ ಎಂಪಿ ರೇಣುಕಾಚಾರ್ಯ ಹೊನ್ನಾಳಿ ಪೊಲೀಸ್ ಠಾಣೆಗೆ ಧಾವಿಸಿ ಕಾರು ತೋರಿಸುವಂತೆ ಪೊಲೀಸರಿಗೆ ಒತ್ತಾಯಿಸಿದರು.

 

ಅಲೋಕ್ ಕುಮಾರ್ ಯಾರು?.. ಪೊಲೀಸರ ಜೊತೆಗೆ ಶಾಸಕ ರೇಣುಕಾಚಾರ್ಯ ವಾಗ್ವಾದ

 

ಓವರ್ ಸ್ವೀಡ್ ಆಗಿ ಈ ಘಟನೆ ನಡೆದಿದೆ ಎಂದು ಮಾಧ್ಯಮಕ್ಕೆ ಹೇಳಿಕೆ ಕೊಟ್ಟವರು ಎಲ್ರೀ. ಯಾರ್ ಅದು ಅಲೋಕ್ ಕುಮಾರ್, ಯಾರ್ ತೀರ್ಮಾನ ಮಾಡಿದ್ರು?, ಅವರು ಕಾರು ಓವರ್ ಸ್ಪೀಡ್ ಇತ್ತು ಎಂದು ಹೆಂಗ್ ಹೇಳಿದ್ರು?. ಈ ಪ್ರಕಣದ ಬಗ್ಗೆ ನನ್ನ ಬಳಿ ಚರ್ಚೆ ಮಾಡಿದ್ರಾ?. ಪ್ರಾಥಮಿಕ ತನಿಖೆ ನನ್ನಿಂದ ಆರಂಭವಾಗ್ಬೇಕು ಎಂದರು.

 

ನೀವು ತನಿಖೆ ಬಗ್ಗೆ ಸಿಎಂಗೆ ಲಕೋಟೆ ಮೂಲಕ ಮಾಹಿತಿ ನೀಡ್ಬೇಕಾಗಿತ್ತು. ಓವರ್ ಸ್ಪೀಡ್ ಎಂದು ಹೇಳಿ ಹೋಗ್ಬಿಟ್ರೇ, ನಮ್ಮ ಮಗನಿಗೆ ನ್ಯಾಯ ಕೊಡಸಲಾಗಲಿಲ್ಲ. ತನಿಖೆ ಮಾಡಲು ಆಗಿಲ್ಲ. ವರದಿ ಕೊಟ್ಬುಟ್ರೇ ವರದಿಯನ್ನು ಗೃಹ ಸಚಿವರಿಗೆ ಕೊಡ್ಬೀಕಿತ್ತು. ಇವಾಗ ಏನ್ ಚರ್ಚೆ ಮಾಡ್ತಿರೀ, ನನ್ನ ರಕ್ಷಣೆಗೆ ಯಾರು ಬೇಕಾಗಿಲ್ಲ. ನನ್ನ ರಕ್ಷಣೆಗೆ ನನ್ನ ಜನ ಇದ್ದಾರೆ. ಏನ್ ಇವಾಗ ಕಾರ್ ಓಪನ್ ಮಾಡ್ತಿರ ಇಲ್ಲ. ನಾನು ಒಳ್ಳೆ ಮಾತಿಂದ ಹೇಳ್ತಿದ್ದೀನಿ. ನನ್ನ ಕೆಣಕಬೇಡಿ ಎಂದು ಎಚ್ಚರಿಸಿದರು.

ಯಾವ ಎಫ್‌ಎಸ್‌ಎಲ್ ಟೀಂ ರೀ… ವಾಗ್ವಾದದಲ್ಲಿ ಪ್ರತಿಕ್ರಿಯಿಸಿದ ಹೊನ್ನಾಳಿ ಪೋಲಿಸ್ ಠಾಣೆಯ ಸಿಪಿಐ ಸಿದ್ದನಗೌಡ ಒಂದು ನಿಮಿಷ ಸರ್ ಎಫ್‌ಎಸ್‌ಎಲ್ ಟೀಂ ಈ ಕಾರನ್ನು ಪರಿಶೀಲನೆ ನಡೆಸಿ ಸೀಜ್ ಮಾಡಿದ್ದಾರೆ, ಸರ್ ಕಾರು ತೋರಿಸಲು ಆಗುವುದಿಲ್ಲ ಎಂದರು. ಬಳಿಕ ಮಾತನಾಡಿದ ಶಾಸಕ ಹೇ ಯಾವ ಎಫ್‌ಎಸ್‌ಎಲ್ ಟೀಂ ರೀ, ನಾನು ನನ್ನ ಮಗನನ್ನು ಕಳಿಸುವ ತನಕ ಸುಮ್ಮನಿದ್ದೇ. ಜನರಿಗೆ ನಾನು ಉತ್ತರ ಕೊಡಲಾಗುತ್ತಿಲ್ಲ. ನೀವು ಎಷ್ಟು ಜನ ಎಲ್ಲಿಲ್ಲಿ ಹುಡುಕಿದ್ರೀ?, ನಮ್ಮ ಜನ ಹುಡುಕಿದ್ದು ಎಂದು ಗದರಿದರು.


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ