Breaking News

ಮೂಲಾ ನಕ್ಷತ್ರದಲ್ಲಿ ಹುಟ್ಟಿದೆ ಎಂದು ಮಗು ಸಮೇತ ಪತ್ನಿಯನ್ನು ಹೊರಗಟ್ಟಿದ ಪತಿ.!

Spread the love

ಮಗು ಮೂಲಾ ನಕ್ಷತ್ರದಲ್ಲಿ ಹುಟ್ಟಿದೆ ಹಾಗೂ ಇದರಿಂದ ಕುಟುಂಬಕ್ಕೆ ಅಪಶಕುನವಾಗಲಿದೆ ಎಂಬ ಮೂಢ ನಂಬಿಕೆಗೆ ಜೋತುಬಿದ್ದ ವ್ಯಕ್ತಿಯೊಬ್ಬ ಮಗು ಹಾಗೂ ಪತ್ನಿಯನ್ನು ಮನೆಯಿಂದ ಹೊರಗಟ್ಟಿರುವ ಆಘಾತಕಾರಿ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.

 

ಪ್ರಕರಣದ ವಿವರ: ಚನ್ನಪಟ್ಟಣದ ಮಂಜುನಾಥ ಬಡಾವಣೆಯ ವಿನಯ್ ಎಂಬಾತ 2019ರಲ್ಲಿ ಶೃತಿ ಎಂಬವರೊಂದಿಗೆ ವಿವಾಹವಾಗಿದ್ದು, ದಂಪತಿಗೆ ವರ್ಷಗಳ ಬಳಿಕ ಮಗು ಜನಿಸಿತ್ತು.

ಮಗು ಮೂಲಾ ನಕ್ಷತ್ರದಲ್ಲಿ ಜನಿಸಿರುವುದರಿಂದ ಕುಟುಂಬಕ್ಕೆ ಕೇಡಾಗಲಿದೆ ಎಂಬ ಮೂಢನಂಬಿಕೆಯಿಂದ ವಿನಯ್ ಮತ್ತು ಕುಟುಂಬಸ್ಥರು ಶ್ರುತಿಗೆ ನಿರಂತರ ಕಿರುಕುಳ ನೀಡಿದ್ದರು ಎನ್ನಲಾಗಿದೆ.

 

ಅಲ್ಲದೆ ಮತ್ತಷ್ಟು ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದು, ಅಕ್ಟೋಬರ್ 25ರಂದು ಶ್ರುತಿ ಪೋಷಕರು ಮಗಳ ಮನೆಗೆ ತೆರಳಿದ್ದಾಗ ಅವರನ್ನು ಮನೆಯೊಳಗೂ ಬಿಟ್ಟುಕೊಂಡಿರಲಿಲ್ಲ ಎನ್ನಲಾಗಿದೆ. ಬಳಿಕ ಮಗು ಸಹಿತ ಶ್ರುತಿಯನ್ನು ಮನೆಯಿಂದ ಹೊರಗಟ್ಟಲಾಗಿದ್ದು, ಈ ಹಿನ್ನಲೆಯಲ್ಲಿ ಶ್ರುತಿ ರಾಮನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


Spread the love

About Laxminews 24x7

Check Also

ಪರಿಸರ ದಿನಾಚರಣೆ ಮುನ್ನಾ ದಿನ ಅರಣ್ಯ ಪ್ರದೇಶದಲ್ಲಿ ಮಕ್ಕಳ ಸಂಭ್ರಮ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ ಸಸಿ ನೆಟ್ಟ ಮಕ್ಕಳು

Spread the love ಪರಿಸರ ದಿನಾಚರಣೆ ಮುನ್ನಾ ದಿನ ಅರಣ್ಯ ಪ್ರದೇಶದಲ್ಲಿ ಮಕ್ಕಳ ಸಂಭ್ರಮ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ