Breaking News

ಮುಸ್ಲಿಮರಿಗೂ ಮೀಸಲಾತಿ ಹೆಚ್ಚಿಸಿ – ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ

Spread the love

ಬೆಳಗಾವಿ: ರಾಜ್ಯದಲ್ಲಿನ ಮುಸ್ಲಿಂ (Muslims) ಅಲ್ಪಸಂಖ್ಯಾತರಿಗೂ ಮೀಸಲಾತಿ (Reservation) ಪ್ರಮಾಣ ಹೆಚ್ಚಿಸುವಂತೆ ಆಗ್ರಹಿಸಿ ಉತ್ತರ ಕರ್ನಾಟಕ ಅಂಜುಮನ್-ಎ-ಇಸ್ಲಾಂ ಸಂಘಟನೆ (Muslim Organization) ಜಿಲ್ಲಾಡಳಿತದ ಮೂಲಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ಸಲ್ಲಿಸಿದೆ.

ಇಲ್ಲಿನ ಜಿಲ್ಲಾಡಳಿತದ ಎದುರು ಪ್ರತಿಭಟನೆ ನಡೆಸಿದ ಸಂಘಟನೆ ಪ್ರಮುಖರು, ರಾಜ್ಯದಲ್ಲಿ ಮುಸ್ಲಿಂ (Muslims) ಅಲ್ಪಸಂಖ್ಯಾತರು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಜನಸಂಖ್ಯೆಗೆ (Population) ಅನುಗುಣವಾಗಿ ನೋಡಿದರೂ ಶೈಕ್ಷಣಿಕ ಸಂಸ್ಥೆಗಳಲ್ಲಾಗಲಿ, ಸರ್ಕಾರಿ ಉದ್ಯೋಗ ಕ್ಷೇತ್ರಗಳಲ್ಲಾಗಲಿ ಸಮರ್ಥವಾದ ಪ್ರಾತಿನಿಧ್ಯ ಹೊಂದಿಲ್ಲ ಎಂದು ಹೇಳಿದ್ದಾರೆ.

2006ರಲ್ಲಿ ಸಾಚಾರ ಸಮಿತಿಯು ಭಾರತೀಯ ಮುಸ್ಲಿಮರು (Indian Muslims) ಎದುರಿಸುತ್ತಿರುವ ಪರಿಸ್ಥಿತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗಿಂತಲೂ ಹೆಚ್ಚಿನದ್ದಾಗಿದೆ. ಇಂದಿಗೂ ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ಯಾವುದೇ ನಾಗರಿಕರ ವರ್ಗಗಳ ಏಳಿಗೆಗಾಗಿ, ರಾಜ್ಯಾಧೀನ ಸೇವೆಗಳಲ್ಲಿ ಸಾಕಷ್ಟು ಪ್ರಾತಿನಿಧ್ಯ ಹೊಂದಿಲ್ಲದೇ ಇರುವುದರಿಂದ ಹಾಗೂ ಸಂವಿಧಾನದ (Constitution Of India) 15 (4) ನೇ ಮತ್ತು 16 (4)ನೇ ವಿಧಿಯು ಹಿಂದುಳಿದ ಯಾವುದೇ ನಾಗರಿಕರ ವರ್ಗಗಳ ಪರವಾಗಿ ನೇಮಕಾತಿ ಹುದ್ದೆಗಳಲ್ಲಿ ಮೀಸಲಾತಿಗಾಗಿ ಉಪಬಂಧ ಕಲ್ಪಿಸಲು ರಾಜ್ಯಕ್ಕೆ ಅಧಿಕಾರ ನೀಡಿರುವುದರಿಂದ ಶೀಘ್ರವೇ ಒಂದು ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದ್ದಾರೆ.


Spread the love

About Laxminews 24x7

Check Also

ಕೆ. ಎಲ್. ಈ ಸಂಸ್ಥೆಯ ಶ್ರೀ ಬಿ. ಏಮ್. ಕಂಕನಾವಾಡಿ ಆಯುರ್ವೇದ ಮಹಾವಿದ್ಯಾಲಯ ಶಹಾಪುರ ಬೆಳಗಾವಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕ 03ರ ವಿಶೇಷ ಶಿಬಿರವನ್ನು ಮಣ್ಣೂರು ಗ್ರಾಮದಲ್ಲಿ ದಿನಾಂಕ 8 – ಸೆಪ್ಟೆಂಬರ್ 2025 ಸೋಮವಾರದಂದು ಉದ್ಘಾಟಿಸಲಾಯಿತು.

Spread the love ಕೆ. ಎಲ್. ಈ ಸಂಸ್ಥೆಯ ಶ್ರೀ ಬಿ. ಏಮ್. ಕಂಕನಾವಾಡಿ ಆಯುರ್ವೇದ ಮಹಾವಿದ್ಯಾಲಯ ಶಹಾಪುರ ಬೆಳಗಾವಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ