Breaking News

ಸೈಕ್ಲಿಂಗ್‍: ಲಾಯಪ್ಪ, ಪ್ರೀತಿ ಪ್ರಥಮ

Spread the love

ಚನ್ನಮ್ಮನ ಕಿತ್ತೂರು: ಇಲ್ಲಿ ಕಿತ್ತೂರು ಉತ್ಸವ ಅಂಗವಾಗಿ ಮಂಗಳವಾರ ನಡೆದ ರಾಜ್ಯಮಟ್ಟದ ಸೈಕ್ಲಿಂಗ್‍ನ ಪುರುಷರ ವಿಭಾಗ(24 ಕಿ.ಮೀ.)ದಲ್ಲಿ ಲಾಯಪ್ಪ ಮುಧೋಳ ಪ್ರಥಮ ಸ್ಥಾನ ಗಳಿಸಿದರು. ಪ್ರಭು ಕಾಲತಿಪ್ಪಿ, ಯಲ್ಲೇಶ ಹುಡೇದ ಕ್ರಮವಾಗಿ ದ್ವಿತೀಯ, ತೃತೀಯ ಸ್ಥಾನ ಗಳಿಸಿದರು.

ಮಹಿಳೆಯರ ವಿಭಾಗದ(14 ಕಿ.ಮೀ.) ಸ್ಪರ್ಧೆಯಲ್ಲಿ ಪ್ರೀತಿ ಹಳಬರ ಮೊದಲ ಸ್ಥಾನ ಗಳಿಸಿದರೆ, ಅಮೂಲ್ಯ ಪೂಜೇರಿ ದ್ವಿತೀಯ, ಕಾವೇರಿ ಕಾರದಗಿ ತೃತೀಯ ಸ್ಥಾನ ಪಡೆದುಕೊಂಡರು.

ಪುರುಷರ ಇಂಡಿಯನ್ ಮೇಡ್ ಸೈಕ್ಲಿಂಗ್(24 ಕಿ.ಮೀ.) ಸ್ಪರ್ಧೆಯಲ್ಲಿ ಶೆಟ್ಟೆಪ್ಪ ಗಸ್ತಿ, ರಮೇಶ ಸುಣಧೋಳಿ, ಈರಗೌಡ ಚಿಕ್ಕಾಣಿ ಕ್ರಮವಾಗಿ ಮೊದಲ ಮೂರು ಸ್ಥಾನ ಗಳಿಸಿದರು.

ಇಲ್ಲಿನ ಚನ್ನಮ್ಮನ ವೃತ್ತದಲ್ಲಿ ದೊಡವಾಡ ಪಿಎಸ್‍ಐ ಪ್ರವೀಣ ಕೋಟಿ ಸ್ಪರ್ಧೆಗೆ ಚಾಲನೆ ನೀಡಿದರು. ಯುವ ಸಬಲೀಕರಣ ಇಲಾಖೆ ಉಪನಿರ್ದೇಶಕ ಜಿನೇಶ್ವರ ಪಡನಾಡ, ಸೈಕ್ಲಿಂಗ್ ತರಬೇತುದಾರ ಎಂ.ಪಿ.ಮರನೂರ, ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ಆರ್.ಎಚ್.ಪೂಜೇರಿ, ಕಿತ್ತೂರು ನಾಡ ಯುವಕ ಸಂಘದ ಸದಸ್ಯರು ಇದ್ದರು.


Spread the love

About Laxminews 24x7

Check Also

ಕ್ರಾಂತಿ ಮಹಿಳಾ ಮಂಡಳ, ಉಮಾ ಸಂಗೀತ ಪ್ರತಿಷ್ಠಾನದಿಂದ ಸ್ವಾತಂತ್ರ್ಯ ದಿನಾಚರಣೆ ಮಕ್ಕಳಿಗೆ ದೇಶಾಭಿಮಾನ ಬೆಳೆಸಿ: ಸಂತೋಷ್ ಮಠಪತಿ

Spread the love ಬೆಳಗಾವಿ: ಪ್ರಾಥಮಿಕ ಹಂತದಲ್ಲೆ ಮಕ್ಕಳಿಗೆ ದೇಶಾಭಿಮಾನ ಬೆಳೆಸಿ, ದೇಶದ ಉತ್ತಮ ನಾಗರಿಕನನ್ನಾಗಿ ಮಾಡುವ ಜವಾಬ್ದಾರಿ ಪೋಷಕರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ