ಪಾಪದ ಪಿಂಡಗಳ ಬಗ್ಗೆ ಕಾಂಗ್ರೆಸ್ ನವರು ಮೊದಲು ಪಶ್ಚಾತ್ತಾಪ ಮಾಡಿಕೊಳ್ಳಲಿ. ಆ ಬಳಿಕ ಭಾರತ ಜೋಡೋ ಮಾಡಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವ್ಯಂಗ್ಯವಾಡಿದರು.
ರಾಣಿ ಚೆನ್ನಮ್ಮ ಜಯಂತಿ ನಿಮ್ಮಿತ್ತ ನಗರದ ಚೆನ್ನಮ್ಮ ವೃತ್ತದಲ್ಲಿ ಚೆನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿ ನಂತರ ಮಾತನಾಡಿದ ಅವರು, ಭಾರತ ಜೋಡೋ ಕಾಂಗ್ರೆಸ್ ತೋಡೋ ಯಾತ್ರೆ ಆಗತ್ತಿದೆ. ಹಲವರು ಕಾಂಗ್ರೆಸ್ ಚೋಡೋ ಮಾಡುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಮಾಡಬೇಕಿರೋದು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟು ಕೊಟ್ಟಿದ್ದಕ್ಕೆ ಮಾಡಲಿ, ಇಲ್ಲವೇ ಚೀನಾಗೆ ಭೂಮಿ ಕೊಟ್ಟಿದ್ದರ ಜೋಡೋ ಮಾಡಲಿ ಎಂದ ಅಪಹಾಸ್ಯ ಮಾಡಿದರು.
ಕಾಂಗ್ರೆಸ್ ತೋಡೋ ಮಾಡಿದವರ ಪಾರ್ಟಿಯವರು, ಮೊದಲು ತೋಡೋ ಮಾಡಿದರ ಜೋಡೋ ಮಾಡಿ. ಭಾರತ ಮೋದಿ ಅವರ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ಜೋಡೋ ಆಗಿದೆ. ನೀವು ಏನ ಪಾಪ ಮಾಡಿದ್ದೀರಿ, ನಿಮ್ಮ ಪಾಪದ ಪಿಂಡಗಳನ್ನು ಪರಿಮಾರ್ಜನೆಗೆ ಜೋಡೋ ಮಾಡಿ, ನಿಮಗೆ ಪಶ್ಚಾತ್ತಾಪ ಆಗಿ ಜೋಡೋ ಮಾಡಿ ಎಂದು ಹರಿಹಾಯ್ದರು.
ರಾಹುಲ್ ಗಾಂಧಿಯವರಿಗೆ ಯಾರೋ ಬರೆದು ಕೊಡತ್ತಾರೆ ಅದನ್ನು ಅವರು ಓದುತ್ತಾರೆ. ರಾಹುಲ್ ಗಾಂಧಿಗೆ ಬರೆದು ಕೊಟ್ಟಿದ್ದು ಬಿಟ್ಟು ಪ್ರತ್ಯೇಕ ಪ್ರಶ್ನೆ ಮಾಡಿದ್ರೆ ಅವರಿಗೆ ಉತ್ತರ ಕೊಡೋಕ್ಕೆ ಬರಲ್ಲ. ಬಾಯಿ ಪಾಠ ಮಾಡಿಸಿದ್ದು ಬಿಟ್ಟು ಬೇರೆ ಕೇಳಿ ಅವರಿಗೆ ಉತ್ತರ ಕೊಡೋಕೆ ಬರಲ್ಲ. ಅವರಿಗೆ ಏನ ರಿಯಾಕ್ಷನ್ ಮಾಡೋದು ಎಂದು ವ್ಯಂಗ್ಯವಾಡಿದರು.
Laxmi News 24×7