ಧಾರವಾಡ:ನಗರದಲ್ಲಿ ಯುವಕನೊಬ್ಬನನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಸಲಿಂಗಕಾಮಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಪವನ್ ಬಯಾಲಿ ಎಂದು ಗುರುತಿಸಲಾಗಿದೆ. ಮೃತ ಯಾಸಿನ್ ರೊಟ್ಟಿವಾಲೆ ಪೋಷಕರು ನೀಡಿದ ದೂರಿನ ಮೇರೆಗೆ ಪವನ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅತ್ತಿಕೊಲ್ಲ ನಿವಾಸಿ ಯಾಸಿನ್ ಅಕ್ಟೋಬರ್ 12ರಂದು ನಾಪತ್ತೆಯಾಗಿದ್ದ. ನಂತರ, ಅವನ ದೇಹವು ಕೆಳಗೇರಿ ಕೆರೆಯಲ್ಲಿ ಪತ್ತೆಯಾಗಿತ್ತು. ಯಾಸಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಪವನ್ ಮತ್ತು ಯಾಸಿನ್ ಎಂಟು ತಿಂಗಳ ಕಾಲ ಸ್ನೇಹಿತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪವನ್ ಎಂಬ ಸಲಿಂಗಕಾಮಿ ಯಾಸಿನ್ ನನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡು ತಾನು ಜನರ ಮುಂದೆಯೇ ಅವನನ್ನು ಮದುವೆಯಾಗಿದ್ದೇನೆ ಎಂದು ಘೋಷಿಸಿದನು.
ಆತ್ಮಹತ್ಯೆಗೂ ಮುಂಚೆ ಯಾಸಿನ್ ಪವನ್ ನೊಂದಿಗೆ ಜಗಳವಾಡಿದ್ದೇನೆ ಎಂದು ತನ್ನ ತಂದೆಗೆ ತಿಳಿಸಿದ್ದನು. ಯಾಸಿನ್ ತಂದೆ ರಫೀಕ್ ಕೂಡ ತನ್ನ ಮಗನಿಗೆ ಪವನ್ ಕಿರುಕುಳ ನೀಡಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
Laxmi News 24×7