Breaking News

ವಿಜಯಪುರ ಪಾಲಿಕೆ ಚುನಾವಣೆ : ವಾಮಾಚಾರ ಹಾವಳಿ; ಜನರ ಆಕ್ರೋಶ

Spread the love

ವಿಜಯಪುರ: ವಿಜಯಪುರ ಮಹಾನಗರ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿರುವ ಈ ಹಂತದಲ್ಲಿ ಮಾಟ-ಮಂತ್ರದ ಕ್ಷುದ್ರ ಚಟುವಟಿಕೆಗಳು ತಲೆ ಎತ್ತಿದ್ದು, ಸಾರ್ವಜನಿಕರನ್ನು ಆತಂಕ ಪಡುವಂತೆ ಮಾಡಿವೆ.

ವಾರ್ಡ್ ನಂ. 14 ರಲ್ಲಿ ಬರುವ ನಗರದ ಶಿಖಾರಖಾನೆ ಪ್ರದೇಶದ ಅನಂತಲಕ್ಷ್ಮೀ ಹಾಲ್ ಬಳಿ ಕಿಡಿಗೇಡಿಗಳು ಮಾಟ ಮಂತ್ರ ಮಾಡಿಸಿದಂತೆ ಕುಂಕು, ಅರಿಷಿಣ, ನಿಂಬೆಹಣ್ಣು, ಎಲೆ, ಮೊಟ್ಟೆ, ಹಣ ಸೇರಿದಂತೆ ಹೂವುಗ ಳೊಂದಿಗೆ ಮಾಟ ಮಂತ್ರ ಮಾಡಿ ಎಸೆದಿದ್ದಾರೆ.

 

ಸದರಿ ವಾರ್ಡ್ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಇದನ್ನು ಸಹಿದ ಇತರೆ ಮೀಸಲು ನಿರೀಕ್ಷೆಯಲ್ಲಿ ಇದ್ದವರೇ ಈ ಕೃತ್ಯ ಮಾಡಿದ್ದಾರೆ ಎಂದು ಸ್ಥಳೀಯರು ದೂರಿದ್ದು, ಪೊಲೀಸರು ಜನರಲ್ಲಿ ಭಯ ಉಂಟು ಮಾಡುವ ಇಂಥ ಕೃತ್ಯಕ್ಕೆ ಕಾರಣವಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇಂಥ ವಾಮಾಚಾರದ ಕ್ಷುದ್ರ ಕೃತ್ಯಗಳು ನಮ್ಮಲ್ಲಿ ಎಂದೂ ನಡೆದಿರಲಿಲ್ಲ. ಚುನಾವಣೆ ಘೋಷಣೆ ಬಳಿಕ ಉದ್ದೇಶಪೂರ್ವಕವಾಗಿ ಇಂಥ ಚಟುವಟಿಕೆ ಮೂಲಕ ಜನರಲ್ಲಿ ಭಯ ಉಂಟು ಮಾಡುವ ಕೃತ್ಯಕ್ಕೆ ಕೈಹಾಕಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಕೆಎಸ್ಆರ್​ಟಿಸಿಯಲ್ಲಿ ಲಂಚಾವತಾರಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆದ ಅಧಿಕಾರಿಗಳು!

Spread the loveಬೆಂಗಳೂರು, ಆಗಸ್ಟ್ 25: ಈ ಹಿಂದೆ ಬಿಎಂಟಿಸಿಯಲ್ಲಿ ಕರ್ತವ್ಯ ವಹಿಸಲು ಅಧಿಕಾರಿಗಳು ಚಾಲಕ, ನಿರ್ವಾಹಕರಿಂದ ಲಕ್ಷಾಂತರ ರೂಪಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ