ಬೆಳಗಾವಿ: ಗಾಳಿಪಟ ಹಾರಿಸುವಾಗ ಆಯತಪ್ಪಿ ಕಟ್ಟಡ ಮೇಲಿಂದ ಬಿದ್ದು 11 ವರ್ಷದ ಬಾಲಕ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.
ಉಜ್ವಲ್ ನಗರದ ಸೆಕೆಂಡ್ ಕ್ರಾಸ್ ತಿರಂಗಾ ಕಾಲೋನಿಯ ಅರ್ಮಾನ್ ದಫೆದಾರ್(11) ಮೃತ ಬಾಲಕ. ನಿನ್ನೆ ಅಶೋಕ ನಗರದ ತಮ್ಮ ಸಂಬಂಧಿಕರ ಮನೆಗೆ ಕುಟುಂಬಸ್ಥರ ಜೊತೆಗೆ ಬಾಲಕ ಬಂದಿದ್ದನು. ಈ ವೇಳೆ ಉಪಹಾರ ಮಾಡಿದ ಬಳಿಕ ತನ್ನ ಅಣ್ಣನ ಜೊತೆಗೆ ಗಾಳಿಪಟ ಹಾರಿಸಲು ಕಟ್ಟಡದ ಟೆರಸ್ ಮೇಲೆ ಹೋಗಿದ್ದಾನೆ.
ಈ ವೇಳೆ ಗಾಳಿಪಟ ಹಾರಿಸುವಾಗ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ತಕ್ಷಣವೇ ಆತನನ್ನು ಖಾಸಗಿ ಆಸ್ಪತ್ರೆಗೆ ಕುಟುಂಬಸ್ಥರು ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅರ್ಮಾನ್ ಇಂದು ಕೊನೆಯುಸಿರೆಳೆದಿದ್ದಾನೆ. ನಂತರ ಬಾಲಕನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ, ಆಸ್ಪತ್ರೆಯವರು ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.
Laxmi News 24×7