Breaking News
Home / ಜಿಲ್ಲೆ / ಬೆಳಗಾವಿ / ದುರ್ಗಾಮಾತಾ ದೌಡ್ ಸ್ವಾಗತಿಸಿ, ಭಾವೈಕ್ಯ ಮೆರೆದ ಮುಸ್ಲಿಮರು

ದುರ್ಗಾಮಾತಾ ದೌಡ್ ಸ್ವಾಗತಿಸಿ, ಭಾವೈಕ್ಯ ಮೆರೆದ ಮುಸ್ಲಿಮರು

Spread the love

ಬೆಳಗಾವಿ: ನವರಾತ್ರಿ ಅಂಗವಾಗಿ ಶಿವ ಪ್ರತಿಷ್ಠಾನ ಹಿಂದೂಸ್ಥಾನ ವತಿಯಿಂದ 8ನೇ ದಿನವಾದ ಸೋಮವಾರ ದುರ್ಗಾಮಾತಾ ದೌಡ್‌ ನಡೆಯಿತು. ಇಲ್ಲಿನ ಕ್ಯಾಂಪ್‌ ಪ್ರದೇಶದಲ್ಲಿ ಮುಸ್ಲಿಮರು ಇದಕ್ಕೆ ಸ್ವಾಗತ ಕೋರಿ, ಭಾವೈಕ್ಯ ಸಂದೇಶ ಸಾರಿದರು.

ದುರ್ಗಾಮಾತಾ ದೌಡ್‌ ಅಂಗವಾಗಿ ಕ್ಯಾಂಪ್‍ನ ಮಾರ್ಗಗಳಲ್ಲಿ ರಂಗೋಲಿ ಚಿತ್ತಾರ ಅರಳಿತ್ತು.

ಯುವಕ-ಯುವತಿಯರು, ಮಕ್ಕಳು ಸಾಂಪ್ರದಾಯಿಕ ದಿರಿಸಿನಲ್ಲಿ ಗಮನ ಸೆಳೆದರು. ಬಾಲಕಿಯೊಬ್ಬಳು ಜೀಜಾಮಾತಾ ವೇಷ ಧರಿಸಿ, ಶಿವಾಜಿ ಮಹಾರಾಜರನ್ನು ಸ್ತುತಿಸಿದಳು.

ದಂಡು ಮಂಡಳಿ ಮಾಜಿ ಉಪಾಧ್ಯಕ್ಷ ಸಾಜೀದ್ ಶೇಖ್ ದೌಡ್‌ನಲ್ಲಿ ಪಾಲ್ಗೊಂಡವರಿಗೆ ನೀರು, ಹಣ್ಣು-ಹಂಪಲು ವಿತರಿಸಿದರು. ಬಳಿಕ ಮಾತನಾಡಿ, ‘ನಮ್ಮ ಬಡಾವಣೆಯಲ್ಲಿ ಪ್ರತಿವರ್ಷವೂ ಮುಸ್ಲಿಮರೆಲ್ಲ ಸೇರಿಕೊಂಡು ದುರ್ಗಾಮಾತಾ ದೌಡ್‍ ಸ್ವಾಗತಿಸುತ್ತೇವೆ. ಭಾವೈಕ್ಯತೆಯಿಂದ ಇಲ್ಲಿ ಎಲ್ಲರೂ ಬಾಳುತ್ತಿದ್ದೇವೆ’ ಎಂದು ತಿಳಿಸಿದರು.

ಬಳಿಕ, ದುರ್ಗಾಮಾತಾ ದೌಡ್ ಕಾಂಗ್ರೆಸ್ ರಸ್ತೆ, ಖಾನಾಪುರ ರಸ್ತೆ, ಧರ್ಮವೀರ ಸಂಭಾಜಿ ಚೌಕ್, ದುರ್ಗಾಮಾತಾ ಮಂದಿರ ಮಾರ್ಗವಾಗಿ ಸಂಚರಿಸಿ ಜತ್ತಿಮಠದ ಬಳಿ ಮುಕ್ತಾಯಗೊಂಡಿತು. ಶಿವ ಪ್ರತಿಷ್ಠಾನ ಹಿಂದೂಸ್ಥಾನ ಅಧ್ಯಕ್ಷ ಕಿರಣ ಗಾವಡೆ ಇತರರಿದ್ದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ