Breaking News

ಅಂಬಾರಿ’ಯಲ್ಲಿ ಮಧ್ಯರಾತ್ರಿವರೆಗೂ ದೀಪಾಲಂಕಾರ ವೀಕ್ಷಿಸಿದ ಸಿಎಂ

Spread the love

ಮೈಸೂರು: ದಸರಾ ಅಂಗವಾಗಿ ನಗರದಲ್ಲಿ ಮಾಡಿರುವ ವಿದ್ಯುತ್‌ ದೀಪಾಲಂಕಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ ಮತ್ತು ಇಂಧನ ಸಚಿವ ಸುನೀಲ್‌ಕುಮಾರ್‌ ಭಾನುವಾರ ಮಧ್ಯರಾತ್ರಿವರೆಗೂ ವೀಕ್ಷಿಸಿದರು.

 

ರಾತ್ರಿ 10.30ರ ಸುಮಾರಿಗೆ ನಗರ ಪ್ರದಕ್ಷಿಣೆ ಆರಂಭಿಸಿದ ಅವರು, ರ‍್ಯಾಡಿಷನ್ ಬ್ಲೂ ಹೋಟೆಲ್‌ನಿಂದ ಕೆಎಸ್‌ಆರ್‌ಟಿಸಿಯ ಎರಡು ವೋಲ್ವೋ ಬಸ್ ಮೂಲಕ ಜೆಎಸ್‌ಎಸ್‌ ಮಹಾವಿದ್ಯಾಪೀಠ ವೃತ್ತಕ್ಕೆ ಬಂದರು. ಅಲ್ಲಿಂದ ಪ್ರವಾಸೋದ್ಯಮ ನಿಗಮದ ‘ಅಂಬಾರಿ’ ಡಬ್ಬಲ್ ಡೆಕ್ಕರ್ ಬಸ್‌ನಲ್ಲಿ ಸಂಚರಿಸಿದರು. ಆಕರ್ಷಕ ವಿದ್ಯುತ್‌ ದೀಪಾಲಂಕಾರವನ್ನು ಕಣ್ತುಂಬಿಕೊಂಡರು. ಅವರೊಂದಿಗೆ ಪಕ್ಷದ ಮುಖಂಡರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.

ಹಾರ್ಡಿಂಗ್‌ ವೃತ್ತ- ಜಯಚಾಮರಾಜೇಂದ್ರ ಒಡೆಯರ್ ವೃತ್ತ-ಕೆ.ಆರ್.ವೃತ್ತ-ಸಯ್ಯಾಜಿರಾವ್‌ ರಸ್ತೆ ಮೂಲಕ ಹೈವೇ ವೃತ್ತದವರೆಗೆ ಸಾಗಿ ಆಯುರ್ವೇದ ಆಸ್ಪತ್ರೆ- ರೈಲು ನಿಲ್ದಾಣ- ಮೆಟ್ರೊಪೋಲ್‌ ವೃತ್ತ- ಹುಣಸೂರು ರಸ್ತೆ- ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದ ಎದುರಿನ ರಸ್ತೆ ಮೂಲಕ ಚಾಮರಾಜ ಜೋಡಿ ರಸ್ತೆ ಮೂಲಕ ಜೆಎಸ್‌ಎಸ್‌ ಮಹಾವಿದ್ಯಾಪೀಠದವರೆಗೆ ದೀಪಾಲಂಕಾರವನ್ನು ವೀಕ್ಷಿಸಿದರು. 12.10ರ ಸುಮಾರಿಗೆ ‘ದೀಪಾಲಂಕಾರ ವೀಕ್ಷಣೆ ರೌಂಡ್ಸ್‌’ ಮುಗಿಸಿದರು. ಮಾರ್ಗದಲ್ಲಿ ಎದುರಾದ ಸಾರ್ವಜನಿಕರಿಗೆ ಕೈಬೀಸುತ್ತಾ ಸಾಗಿದರು. ಕೆಲವು ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಮುಖ್ಯಮಂತ್ರಿ ಮೊದಲಾದ ಗಣ್ಯರಿಗೆ ಜೈಕಾರ ಹಾಕಿದರು


Spread the love

About Laxminews 24x7

Check Also

ಬೆಣ್ಣೆನಗರಿಗೆ ಬರಲಿದೆ ಐಟಿ ಪಾರ್ಕ್

Spread the loveದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ಮಧ್ಯ ಕರ್ನಾಟಕದ ಕೇಂದ್ರ ಬಿಂದು. ಪ್ರಗತಿಯತ್ತ ಸಾಗುತ್ತಿರುವ ದಾವಣಗೆರೆಯಲ್ಲಿ ಐಟಿಬಿಟಿ ಕಂಪನಿಗಳು ಕರೆತರಲು ಇಲ್ಲಿಲ್ಲದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ