Breaking News

ಮಹಿಳೆಗೆ ಮಂಕುಬೂದಿ ಎರಚಿ ಚಿನ್ನಾಭರಣ ಎಗರಿಸಿ ಪರಾರಿಯಾದ ಕಿರಾತಕರು..!!

Spread the love

ದಾರಿಯಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬಳಿಗೆ ಮಂಕುಬೂದಿ ಎರಚಿದ ಕಿರಾತಕರು ಮಹಿಳೆಯಿಂದ ಬಂಗಾರದ ಮಾಗಲ್ಯದ ಸರ ಸೇರಿದಂತೆ ಬಂಗಾರದ ಆಭರಣಗಳನ್ನು ಎಗರಿಸಿ ಪರಾರಿಯಾದ ಘಟನೆ ಬೆಳಗಾವಿಯ ಆಜಾದ್‍ಗಲ್ಲಿಯಲ್ಲಿ ನಡೆದಿದೆ.

ಇಂದು ಶನಿವಾರ ಮಧ್ಯಾಹ್ನದ ವೇಳೆ ಆಜಾದ್‍ಗಲ್ಲಿಯಲ್ಲಿ ಮಹಿಳೆಯೊಬ್ಬಳು ಹೋಗುತ್ತಿದ್ದಳು ಈ ವೇಳೆ ಮಹಿಳೆಯನ್ನು ಹಸಿವೆಯಾಗಿದೆ ತಿನ್ನಲು ನಹಣ ಕೊಡುವಂತೆ ಕೇಳಿದ್ದಾರೆ.

ಈ ವೇಳೆ ಹಣ ನೀಡಿದ ಮಹಿಳೆಗೆ ಮೈ ಮೇಲೆ ಬಂಗಾರದ ಆಭರಣಗಳನ್ನು ಹಾಕಿಕೊಳ್ಳಬೇಡ. ಕಳ್ಳರು ಕದ್ದುಕೊಂಡು ಹೋಗಬಹುದು. ಹಾಗಾಗಿ ಅವುಗಳನ್ನು ತದುಕೊಡು ವಸ್ತ್ರದಲ್ಲಿ ಕಟ್ಟಿ ಕೊಡುತ್ತೇವೆಂದು ಹೇಳಿ ಆಭರಣಗಳನ್ನು ಪಡೆದಿದ್ದಾರೆ. ಈ ವೇಳೆ ಇನ್ನೊಂದು ವಸ್ತ್ರದಲ್ಲಿ ಕಟ್ಟಿದ್ದ ಉಸುಕನ್ನು ನೀಡಿ ಪರಾರಿಯಾಗಿದ್ದಾರೆ. ಇನ್ನು ಕಿರಾತಕರ ಈ ಕರಾಮತ್ತು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ವೇಳೆ ತನ್ನ ಅಳಲನ್ನು ತೋಡಿಕೊಂಡ ನೊಂದ ಮಹಿಳೆ ಲಕ್ಷ್ಮೀ ಸಿದ್ದಪ್ಪ ಪಾಟೀಲ್, ತನಗಾದ ಅನ್ಯಾಯವನ್ನು ಬಿಚ್ಚಿಟ್ಟಿದ್ದಾರೆ


Spread the love

About Laxminews 24x7

Check Also

ಮಹಿಳೆಯರು ಅಭಿವೃದ್ಧಿಯಾದರೆ ಮನೆ, ದೇಶ ಅಭಿವೃದ್ಧಿಯಾದಂತೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

Spread the love ಮಹಿಳಾ ವಿಚಾರ ಗೋಷ್ಠಿ ಉದ್ಘಾಟಿಸಿದ ಸಚಿವರು  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ