ಪ್ರಸ್ತುತ ಸಾಮಾಜಿಕ ಪರಿಸ್ಥಿತಿಯಲ್ಲಿರುವ ಮಠಗಳ ಪೀಠಾಧಿಪತಿಗಳು ಐತಿಹಾಸಿಕ ಶ್ರೇಷ್ಠ ಗುರುವರ್ಯ ಬ್ರಹ್ಮಶ್ರೀ ನಾರಾಯಣ ಅವರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕರಾದ ಗಜಾನನ ನಾಯ್ಕ ಅಭಿಪ್ರಾಯಪಟ್ಟರು.
ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಇಂದು ಶನಿವಾರ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜಯಂತ್ಯೋತ್ಸವ-2022 ವೇದಿಕೆ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರೋ. ಗಜಾನನ ನಾಯ್ಕ ಮಾತನಾಡಿದರು.
ರಾಮಕೃಷ್ಣ ಪರಮಹಂಸ ಅವರು ಉತ್ತರ ಭಾರತದಿಂದ, ಬ್ರಹ್ಮಶ್ರೀ ನಾರಾಯಣ ಅವರು ದಕ್ಷಿಣ ಭಾರತದಿಂದ ಸಮ ಸಮಾಜಕ್ಕಾಗಿ ಶ್ರಮಿಸಿ ಜನರನ್ನು ಜಾಗೃತಿಗೊಳಿಸಿದರು. ಜಾತಿ, ಮತ, ಪಂಥವನ್ನು ಧಿಕ್ಕರಿಸಿ ಶಿಕ್ಷಣ, ಸಮಾಜ, ಮಾನವೀಯತೆಯೇ ಶ್ರೇಷ್ಠ ಅನ್ನುವ ಉದಾತ್ತ ಚಿಂತನೆಯೊಂದಿಗೆ ಉತ್ಕøಷ್ಠ ಸಮಾಜ ನಿರ್ಮಾಣಕ್ಕಾಗಿ ಬ್ರಹ್ಮಶ್ರೀ ನಾರಾಯಣ ಅವರು ತಮ್ಮ ಬದುಕನ್ನು ಧಾರೆ ಎರೆದರು ಎಂದು ಸಹಾಯಕ ಪ್ರಾಧ್ಯಾಪಕ ಗಜಾನನ ನಾಯ್ಕ ಅವರು ಆಧ್ಯಾತ್ಮಿಕ ಚಿಂತಕ ನಾರಾಯಣ ಗುರುಗಳ ಸಾಮಾಜಿಕ ಸಾಧನಾ ಪಥವನ್ನು ಮೆಲುಕು ಹಾಕಿಸಿದರು.
ಈ ವೇಳೆ ಕಾರ್ಯಲ್ರಮದಲ್ಲಿ ಉದ್ಯಮಿ ಸುಧೀರ್ ಸಾಲಿಯಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸೇರಿದಂತೆ ಇನ್ನೂ ಅನೇಕ ಗಣ್ಯರು ಭಾಗಿಯಾಗಿದ್ದರು.