Breaking News

‘ಉದ್ಯೋಗಾಕಾಂಕ್ಷಿ’ಗಳೇ ಗಮನಿಸಿ: ‘ಆರೋಗ್ಯ ಇಲಾಖೆ’ಯಿಂದ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Spread the love

ಬೆಂಗಳೂರು: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ( Karnataka Health Department Recruitment ) ಇರುವಂತ ವಿವಿಧ 558 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ( Job Application ) ಆಹ್ವಾನಿಸಲಾಗಿದೆ.

 

ಈ ಸಂಬಂಧ ಆರೋಗ್ಯ ಇಲಾಖೆಯಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ( Karnataka State Health and Family Welfare Department ) ಉಳಿಕೆ ಮೂಲ ವೃಂದದ ವಿವಿಧ ಅರೆ-ವೈದ್ಯಕೀಯ 558 ಹುದ್ದೆಗಳ ಭರ್ತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ತಿಳಿಸಿದೆ.

ಹುದ್ದೆಗಳ ವಿವರ

  • ಜೂನಿಯರ್ ಮೆಡಿಕಲ್ ಲ್ಯಾಬ್ ಟೆಕ್ನೀಷಿಯನ್ – 150 ಹುದ್ದೆಗಳು
  • ಫಾರ್ಮಸಿ ಆಫೀಸರ್ – 400 ಹುದ್ದೆಗಳು
  • ಜೂನಿಯರ್ ಮೆಡಿಕಲ್ ರೇಡಿಯಾಲಜಿ ಟೆಕ್ನಾಲಟಿಸ್ಟ್ – 08 ಹುದ್ದೆಗಳು

ವೇತನ ಶ್ರೇಣಿ

  1. ಜೂನಿಯರ್ ಮೆಡಿಕಲ್ ಲ್ಯಾಬರೇಟರಿ ಟೆಕ್ನಾಲಟಿಸ್ಟ್ – ರೂ.26,650 ರಿಂದ ರೂ.52,650
  2. ಫಾರ್ಮಸಿ ಆಫೀಸರ್ – ರೂ.27,650 ರಿಂದ ರೂ.52,650
  3. ಜೂನಿಯರ್ ಮೆಡಿಕಲ್ ರೇಡಿಯಾಲಜಿಕಲ್ ಟೆಕ್ನಾಲಜಿಸ್ಟ್ – ರೂ.27,650 ರಿಂದ ರೂ.52,650

ವಿದ್ಯಾರ್ಹತೆ

ಜೂನಿಯರ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿಸ್ಟ್ ಗೆ ಎಸ್ ಎಸ್ ಎಲ್ ಸಿ ( SSLC ) ತತ್ಸಮಾನ ಹಾಗೂ ಎರಡು ವರ್ಷದ ಡಿಪ್ಲೋಮಾ ಲ್ಯಾಬೊರೇಟರಿ ಟಕ್ನಿಸಿಯನ್ ಓದಿರಬೇಕು. ಇಲ್ಲವೇ ಪಿಯುಸಿ ಸೈನ್ಸ್ ( PUC Science ) ಜೊತೆಗೆ ಎರಡು ವರ್ಷದ ಡಿಪ್ಲೊಮಾ ಇನ್ ಮೆಡಿಕಲ್ ಲ್ಯಾಬೊರೇಟರಿ ಟೆನ್ನೀಷಿಯಲ್ ಕೋರ್ಸ್ ಮುಗಿಸಿರಬೇಕು.

ಫಾರ್ಮಸಿಸ್ಟ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸುವಂತ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ನಂತ್ರ ಡಿಪ್ಲೊಮಾ ಇನ್ ಫಾರ್ಮಸಿ ಓದಿರಬೇಕು. ಜೊತೆಗೆ ಫಾರ್ಮಸಿ ಕೌನ್ಸಿಲಿಂಗ್ ನಲ್ಲಿ ನೋಂದಾಯಿಸಿಕೊಂಡಿರಬೇಕು.

ಜೂನಿಯರ್ ಮೆಡಿಕಲ್ ರೇಡಿಯಾಲಜಿಸ್ಟ್ ಟೆಕ್ನಾಲಜಿಸ್ ಗೆ ಎಸ್ ಎಸ್ ಎಲ್ ಸಿ ನಂತ್ರ ಮೂರು ವರ್ಷದ ಡಿಪ್ಲೊಮಾ ಇನ್ ಎಕ್ ರೇ ಟೆಕ್ನಾಲಜಿ ಓದಿರಬೇಕು. ಇಲ್ಲವೇ ಪಿಯುಸಿ ನಂತ್ರ ಎರಡು ವರ್ಷದ ಎಕ್ಸ್ ರೇ ಟೆಕ್ನಾಲಜಿ ಓದಿರಬೇಕು.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ದಿನಾಂಕ 07-09-2022ರಿಂದ ಆರಂಭಗೊಳ್ಳಲಿದೆ. ಅರ್ಜಿ ಸಲ್ಲಿಸಲು ಆನ್ ಲೈನ್ ಮೂಲಕ ಕೊನೆಯ ದಿನಾಂಕ 06-10-2022 ಆಗಿದೆ. ಅಂಚೆ ಇಲಾಖೆಯಲ್ಲಿ ಶುಲ್ಕ ಪಾತಿಸಲು ಕೊನೆಯ ದಿನಾಂಕ 07-10-2022 ಆಗಿದೆ.

ಅರ್ಜಿ ಶುಲ್ಕ

ಸಾಮಾನ್ಯ ಅಭ್ಯರ್ಥಿಗಳಿಗೆ ರೂ.700, ಪ್ರವರ್ಗ 2ಎ, 2ಬಿ, 3ಎ, 3 ಬಿ ಅಭ್ಯರ್ಥಿಗಳಿಗೆ ರೂ.400, ಮಾಜಿ ಸೈನಿಕರಿಗೆ ರೂ.200 ಹಾಗೂ ಪರಿಶಿಷ್ಟ ಜಾತಿ, ಪಂಗಡ, ಪ್ರವರ್ಗ-1 ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಆದ್ರೇ ಪ್ರೋಸೆಸಿಂಗ್ ಫೀ ಎಂಬುದಾಗಿ ರೂ.100 ಸಂದಾಯ ಮಾಡಬೇಕಿದೆ.

ಅರ್ಜಿ ಸಲ್ಲಿಕೆ ವಿಧಾನ

ಅರ್ಹ ಅಭ್ಯರ್ಥಿಗಳು https://karunadu.karnataka.gov.in/hfw/pages/hfws_sections_drc.aspx ನಲ್ಲಿ ಭೇಟಿ ನೀಡಿ, ಸಲ್ಲಿಸಬಹುದಾಗಿದೆ.

ನೇಮಕಾತಿ ವಿಧಾನ

ವಿದ್ಯಾರ್ಹತೆಯಲ್ಲಿ ಗಳಿಸಿದ ಒಟ್ಟು ಶೇಕಡವಾರು ಅಂಕಗಳು, ಸೇವಾ ಕೃಪಾಂಕ ಮತ್ತು ಕಾಲಕಾಲಕ್ಕೆ ಜಾಲ್ತಿಯಲ್ಲಿರುವಂತ ಮೀಸಲಾತಿ ನಿಯಮಗಳ ಅನ್ವಯ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಗುತ್ತಿಗೆ ನೌಕರರಿಗೆ ಸೇವಾ ಕೃಪಾಂಕ ಮತ್ತು ವಯೋಮಿತಿಯಲ್ಲಿ ಸಡಿಲಿಕೆ

ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವಂತ ನೌಕರರಿಗೆ ಒಂದು ವರ್ಷಕ್ಕೆ ಶೇ.2ರಂತೆ ಗರಿಷ್ಠ ಶೇ.20 ಕೃಪಾಂಕ ಕಲ್ಪಿಸಲಾಗಿದೆ. ಇದಲ್ಲದೇ ವಯೋಮಿತಿಯಲ್ಲೂ ಗರಿಷ್ಠ 10 ವರ್ಷ ಸಡಿಲಿಕೆ ಮಾಡಲಾಗಿದೆ. ಆದ್ರೇ.. ವಯೋಮಿತಿ ಸಡಿಲಿಕೆಯನ್ನು ನೀಡಿದಾಗ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಗರಿಷ್ಠ ವಯೋಮಿತಿ 50 ವರ್ಷ ಮೀರಿರಬಾರದು ಎಂದು ಹೇಳಿದೆ.

ವಯೋಮಿತಿ

ಸಾಮಾನ್ಯ ವರ್ಗದವರಿಗೆ 35 ವರ್ಷ, 2ಎ, ಬಿ ಹಾಗೂ 3ಎ, ಬಿ ವರ್ಗದ ಅಭ್ಯರ್ಥಿಗಳಿಗೆ 38 ವರ್ಷ ಮತ್ತು ಎಸ್ಸಿ, ಎಸ್ಟಿ, ಪ್ರವರ್ಗ-1ರ ಅಭ್ಯರ್ಥಿಗಳಿಗೆ 40 ವರ್ಷ ನಿಗದಿ ಪಡಿಸಲಾಗಿದೆ.

ಈ ಅಧಿಸೂಚನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು https://karunadu.karnataka.gov.in/hfw/pages/home.aspx ಲಿಂಕ್ ಪಡೆಯಬಹುದಾಗಿದೆ.


Spread the love

About Laxminews 24x7

Check Also

ಕಬ್ಬು ಬೆಳೆಗಾರರ ಜೊತೆ ಸಚಿವರ ಸಂಧಾನ ಸಭೆ ವಿಫಲ: ಮಿನಿಸ್ಟರ್​​ ಕಾರಿಗೆ ರೈತರ ಮುತ್ತಿಗೆ

Spread the loveಚಿಕ್ಕೋಡಿ, ಬೆಳಗಾವಿ: ಕಳೆದ ಏಳು ದಿನಗಳಿಂದ ನಡೆದಿರುವ ಕಬ್ಬು ಬೆಳೆಗಾರರ ಹೋರಾಟ ಕೊನೆಗೊಳಿಸಲು ಸರ್ಕಾರದ ಪರವಾಗಿ ಕಾನೂನು ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ