ಅರವಿಂದ ಲಿಂಬಾವಳಿ ಜನಪ್ರತಿನಿಧಿ ಆಗಲು ನಾಲಾಯಕ್
ಇನ್ನು ಮಹಿಳೆಗೆ ಶಾಸಕ ಅರವಿಂದ ಲಿಂಬಾವಳಿ ನಿಂದನೆ ಆರೋಪಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಮಾತನಾಡಿದ್ದು, ಅರವಿಂದ ಲಿಂಬಾವಳಿ ಜನಪ್ರತಿನಿಧಿ ಆಗಲು ನಾಲಾಯಕ್.
ಮಹಿಳೆ ರಾಜಕಾಲುವೆ ಒತ್ತುವರಿ ಮಾಡಿದ್ದರೆ ಕ್ರಮ ಕೈಗೊಳ್ಳಿ. ಕಷ್ಟ-ಸುಖ ಹೇಳಿಕೊಳ್ಳಲು ಬಂದಾಗ ಕೆಟ್ಟದಾಗಿ ಬೈಯ್ಯೋದಾ?ಆಯಮ್ಮನಿಗೆ ರೇಪ್ ಮಾಡಿದ್ದೀವಾ ಎಂದರೆ ಏನು ಅರ್ಥ? ತಾಳ್ಮೆಯಿಂದ ಮಹಿಳೆಯ ಕಷ್ಟ-ಸುಖ
ಕೇಳಬೇಕು ಅಲ್ಲವೇ? ಲಿಂಬಾವಳಿ ಶಾಸಕರಾಗಲಿ ಲಾಯಕ್ಕಾ, ನಾಲಾಯಕ್ಕಾ ಹೇಳಿ? ಎಂದು ಹಾಸನ ಜಿಲ್ಲೆ ಗೊಲ್ಲರಹೊಸಳ್ಳಿಯಲ್ಲಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.