Breaking News

ನನಗೆ ಬಯ್ಯಲಾದರೂ ದೊಡ್ಡಪ್ಪ ಬರಲಿ ಎಂದು ಕಾಯುತ್ತಿದ್ದೇನೆ: ಉಮೇಶ್ ಕತ್ತಿ ಸಹೋದರ ಪುತ್ರ ಪೃಥ್ವಿ ಕಣ್ಣೀರು

Spread the love

ಹಾರ ಸಚಿವ ಉಮೇಶ್ ಕತ್ತಿ ಕಳೆದ ರಾತ್ರಿ ವಿಧಿವಶರಾಗಿದ್ದು, ಅವರ ಈ ಸಾವು ಕುಟುಂಬಸ್ಥರನ್ನು ಮಾತ್ರವಲ್ಲದೆ ರಾಜ್ಯದ ಜನತೆಯನ್ನು ದಿಗ್ಬ್ರಾಂತರನ್ನಾಗಿಸಿದೆ. ರಾತ್ರಿಯವರೆಗೆ ಲವಲವಿಕೆಯಿಂದ ಇದ್ದ ಉಮೇಶ್ ಕತ್ತಿ ಮರುಕ್ಷಣವೇ ಇಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಯಾರಿಗೂ ಸಾಧ್ಯವಾಗುತ್ತಿಲ್ಲ.

 

ಉಮೇಶ್ ಕತ್ತಿ ಅವರ ಹುಟ್ಟೂರು ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ನೀರವ ಮೌನ ಆವರಿಸಿದ್ದು, ಊರಿನ ಜನತೆ ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸ್ವಯಂ ಬಂದ್ ಆಚರಿಸುತ್ತಿದ್ದಾರೆ. ಉಮೇಶ್ ಕತ್ತಿಯವರ ನಿವಾಸದಲ್ಲೂ ದುಃಖ ಮಡುಗಟ್ಟಿದ್ದು ಕುಟುಂಬ ಸದಸ್ಯರು ಕಣ್ಣೀರಾಕುತ್ತಿದ್ದಾರೆ.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿಯವರ ಪುತ್ರ ಪೃಥ್ವಿ, ನಮ್ಮ ದೊಡ್ಡಪ್ಪ ನನಗೆ ತಂದೆ – ತಾಯಿ ಸಮಾನರಾಗಿದ್ದರು. ಪ್ರೀತಿಯಿಂದಲೇ ಬೈದು ಬುದ್ಧಿ ಹೇಳುತ್ತಿದ್ದ ಅವರು, ನನಗೆ ಬಯ್ಯಲಾದರೂ ಮತ್ತೆ ಹುಟ್ಟಿ ಬರಲಿ ಎಂದು ಬಯಸುತ್ತಿದ್ದೇನೆ ಎಂದು ಕಣ್ಣೀರಿಟ್ಟಿದ್ದಾರೆ.


Spread the love

About Laxminews 24x7

Check Also

ಬೆಳಗಾವಿಯಲ್ಲಿ ಭಾರಿ ಮಳೆಗೆ ಮನೆ ಕುಸಿತ

Spread the love ಬೆಳಗಾವಿಯಲ್ಲಿ ಭಾರಿ ಮಳೆಗೆ ಮನೆ ಕುಸಿತ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬೆಳಗಾವಿಯಲ್ಲಿ ಒಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ